ಎಲ್ಲಾ ಬಿಟ್ಟು ನಾನು ತೋಟದ ಮನೇಲಿ ಯಾಕಿದ್ದೀನಿ ಗೊತ್ತಾ ? ನಾನು ನನ್ನ ಮಗ ಹೇಗೆ ಬದುಕ್ತಾ ಇದ್ದೀವಿ ಗೊತ್ತಾ ನಟಿ ಲೀಲಾವತಿ ಭಾವುಕರಾದ ಕ್ಷಣ.. » Karnataka's Best News Portal

ಎಲ್ಲಾ ಬಿಟ್ಟು ನಾನು ತೋಟದ ಮನೇಲಿ ಯಾಕಿದ್ದೀನಿ ಗೊತ್ತಾ ? ನಾನು ನನ್ನ ಮಗ ಹೇಗೆ ಬದುಕ್ತಾ ಇದ್ದೀವಿ ಗೊತ್ತಾ ನಟಿ ಲೀಲಾವತಿ ಭಾವುಕರಾದ ಕ್ಷಣ..

ನಾನು ಹೇಗೆ ಜೀವನ ಮಾಡ್ತಾ ಇದ್ದೀನಿ ಅನ್ನೋದು ನನಗೆ ಮಾತ್ರ ಗೊತ್ತು.ಲೀಲವತಿ ಅವರ ಹೆಸರನ್ನು ಕೇಳದೆ ಇಲ್ಲದೆ ಇರುವವರೆ ಇಲ್ಲ ಅಂತ ಹೇಳಬಹುದು ಹೌದು ಸುಮಾರು ಆರು ದಶಕಗಳಿಂದಲೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದಂತಹ ಹಿರಿಯ ನಟಿ. ಒಂದು ಕಾಲದಲ್ಲಿ ನಾಯಕ ನಟಿಯಾಗಿ ತದನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಲೀಲಾವತಿಯವರ ಕೊಡುಗೆ ಚಿತ್ರರಂಗಕ್ಕೆ ಅಪಾರವಾದದ್ದು. ಆದರೆ ಇತ್ತೀಚಿನ ದಿನದಲ್ಲಿ ಅವರು ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಅವರು ಕೊನೆಯದಾಗಿ ನಟಿಸಿದ ಸಿನಿಮಾ ಅಂದರೆ ಅವರ ಮಗ ವಿನೋದ್ ರಾಜ್ ಕುಮಾರ್ ಅವರು ನಟಿಸಿದಂತಹ ಕನ್ನಡದ ಕಂದ ಎಂಬ ಸಿನಿಮಾದಲ್ಲಿ ಕೊನೆಯ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು. ತದನಂತರ ವಯೋ ಸಹಜವಾದಂತಹ ಕಾಯಿಲೆಗಳಿಗೆ ತುತ್ತಾಗಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಮತ್ತು ಯಶಸ್ಸನ್ನು ಪಡೆದಿದ್ದರೂ ಕೂಡ ಲೀಲಾವತಿಯವರು ಈಗ ಅದೆಲ್ಲವನ್ನೂ ಬಿಟ್ಟು ಹಳ್ಳಿಯೊಂದರಲ್ಲಿ ಪುಟ್ಟ ತೋಟದ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಲೀಲಾವತಿಯವರ ಜೀವನದ ಕಥೆಯನ್ನು ಕೇಳಿದರೆ ಎಂಥವರ ಆದರೂ ಕೂಡ ಕಣ್ಣೀರು ಹಾಕುತ್ತಾರೆ ಆದರೆ ಲೀಲಾವತಿಯವರು ಆಗಿರಬಹುದು ಅಥವಾ ವಿನೋದ್ ರಾಜಕುಮಾರ್ ಅವರು ಆಗಿರಬಹುದು ಈ ವಿಚಾರದ

ಬಗ್ಗೆ ಎಲ್ಲಿಯೂ ಕೂಡ ಪ್ರಸ್ತಾಪ ಮಾಡುವುದಿಲ್ಲ. ಹಳೆಯ ಕಹಿ ಘಟನೆಗಳನ್ನು ಕೂಡ ಮರೆತು ಇದೀಗ ತಮ್ಮಿಂದ ಸಮಾಜಕ್ಕೆ ಏನು ಉಪಯೋಗಬಹುದು ಅಂತಹ ಕೆಲಸಕ್ಕೆ ಮಾತ್ರ ಕೈ ಹಾಕಿರುವುದನ್ನು ನಾವು ನೋಡಬಹುದು. ಲೀಲಾವತಿ ಅಮ್ಮನವರು ಬೆಂಗಳೂರಿನ ಸಮೀಪದಲ್ಲಿ ಇರುವಂತಹ ಒಂದು ಹಳ್ಳಿಯಲ್ಲಿ ವಾಸವಾಗಿದ್ದರೆ ಇಲ್ಲಿಯ ಪುಟ್ಟದಾದ ಒಂದು ತೋಟದಲ್ಲಿ ಮನೆಯನ್ನು ಕಟ್ಟಿಕೊಂಡು ಅಲ್ಲಿ ವಾಸವಾಗಿರುವುದು ನೋಡಬಹುದಾಗಿದೆ.

WhatsApp Group Join Now
Telegram Group Join Now

ಈ ಊರಿನಲ್ಲಿ ವೈದ್ಯಕೀಯ ಸೌಲಭ್ಯ ಇಲ್ಲದ ಕಾರಣ ಬಹಳ ಹಿಂದೆಯೇ ಒಂದು ಪುಟ್ಟದಾದ ಆಸ್ಪತ್ರೆಯನ್ನು ಕಟ್ಟಿಸಿದರು ಆದರೆ ಇದೀಗ ಆಸ್ಪತ್ರೆಯನ್ನು ಬಹುದೊಡ್ಡ ಮಾದರಿಯಲ್ಲಿ ನಿರ್ಮಾಣ ಮಾಡಬೇಕು ಈ ಆಸ್ಪತ್ರೆಯ ಸೌಲಭ್ಯದಿಂದ ಸುತ್ತಮುತ್ತಲಿನ ಹಳ್ಳಿಯ ಎಲ್ಲ ಗ್ರಾಮಸ್ಥರು ಕೂಡ ವೈದ್ಯಕೀಯ ಸೌಲಭ್ಯವನ್ನು ಪಡೆಯಬೇಕು ಎಂಬ ದೃಷ್ಟಿಯಿಂದಾಗಿ ತಮ್ಮ ಆಸ್ಪತ್ರೆಯನ್ನು ಬೃಹದಾಕಾರವಾಗಿ ನಿರ್ಮಾಣ ಮಾಡಲು ಯೋಚಿಸಿದರು. ಆದರೆ ತಮ್ಮ ಬಳಿ ಹಣ ಇಲ್ಲದೆ ಇರುವ ಕಾರಣದಿಂದಾಗಿ ತಮಿಳುನಾಡಿನಲ್ಲಿ ಅವರು ಸಂಪಾದನೆ ಮಾಡಿದಂತಹ ತೋಟವೊಂದನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಹಣದಲ್ಲಿ ಇದೀಗ ಆಸ್ಪತ್ರೆಯನ್ನು ನವೀಕರಣ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಸ್ವತಃ ಲೀಲಾವತಿಯವರ ಹೇಳಿಕೊಂಡಿರುವಂತಹ ಈ ಮಾತನ್ನು ಕೇಳಿದರೆ ನಿಜಕ್ಕೂ ಕೂಡ ಎಂಥವರಾದರೂ ಒಂದು ಕ್ಷಣ ಮರುಗುತ್ತಾರೆ.

[irp]


crossorigin="anonymous">