ಆಕಾಶದಲ್ಲಿ ಹಾರುವ ದೇವಾಲಯ ಎಲ್ಲಾದರೂ ಕಂಡಿದ್ದೀರಾ ? ಭಾರತದಲ್ಲಿ ಕಂಡುಬಂದ ಈ ದೇಗುಲದ ವಿಡಿಯೋ ನೋಡಿ.

ಆಕಾಶದಲ್ಲಿ ಹಾರುವ ದೇವಸ್ಥಾನ ಎಲ್ಲಾದರೂ ಕಂಡಿದ್ದೀರಾ.ನಟರಾಜನ ವಿವಿಧ ನೃತ್ಯ ಪ್ರಕಾರಗಳಿದ್ದು ಚಿದಂಬರಂನಲ್ಲಿರುವ ನಟರಾಜನ ತಾಂಡವ ನೃತ್ಯ ಅಂದರೆ ಇದು ನಾಶದ ಮುನ್ಸೂಚನೆಯನ್ನು ನೀಡುವಂತಹ ನೃತ್ಯವಾಗಿದೆ. ಭೂಮಿಯ ಆಯಸ್ಕಾಂತದ ಶಕ್ತಿಯ ಆಧಾರದ ಮೇಲೆ ಅಕ್ಷಾಂಶದ ರೇಖೆಯ ಎಳೆದರೆ ಸಮಭಾಜಕ ರೇಖೆ ನಟರಾಜ ದೇವಾಲಯದಲ್ಲಿರುವ ಚಿದಂಬರಂನ ಮೂಲ ಹಾದು ಹೋಗುತ್ತದೆ ಎಂದು ಅಚ್ಚರಿಯ ಒಂದು ಸುದ್ದಿಯನ್ನು ನಾಸಾ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ನಟರಾಜನ ನೃತ್ಯ, ಸೃಷ್ಟಿ, ಸ್ಥಿತಿ, ಲಯ, ಸಾಕಾರ, ಮುಕ್ತಿ ಎಂಬ ಶಿವನ 5 ಚಟುವಟಿಕೆಗಳನ್ನು ಈ ದೇವಾಲಯ ದಾಖಲಿಸುತ್ತದೆ. ನಾಲ್ಕು ಗೋಪುರಗಳು ಪ್ರತಿಯೊಂದು ಕೂಡ ಒಂದು ನಿರ್ದಿಷ್ಟ ದಿಕ್ಕಿಗೆ ಅಭಿಮುಖವಾಗಿರುವ ದೇವಾಲಯ ನಿಜಕ್ಕೂ ಇದು ಅತ್ಯಾಕರ್ಷಕವಾಗಿದೆ. ಇದರ ಒಳಾಂಗಣದ ಶಿಲ್ಪಕಲಾವೈಭವದ ಭರತನಾಟ್ಯದ ವಿವಿಧ ಭಾವನೆಯನ್ನು ವ್ಯಕ್ತಪಡಿಸುವ ಶಿಲ್ಪ ಕಲೆಯನ್ನು ಹೊಂದಿದೆ.ಈ ಒಂದು ದೇವಾಲಯದಲ್ಲಿ ವಿಜ್ಞಾನಿಗಳು ಸಹ ನಿರಂತರವಾಗಿ ಅಧ್ಯಯನವನ್ನು ನಡೆಸುತ್ತಿದ್ದಾರೆ ವಿಜ್ಞಾನದ ಹೊರತಾಗಿ ಧಾರ್ಮಿಕವಾಗಿ ನೋಡಿದರು ಅಪರೂಪದ ದೇವಾಲಯ ಎನಿಸಿಕೊಂಡಿದೆ. ಚಿದಂಬರಂ ಕ್ಷೇತ್ರಗಳಲ್ಲಿ ಒಂದಾಗಿದ್ದು ಒಂದೇ ತಾಣದಲ್ಲಿ ಗೋವಿಂದ ಮತ್ತು ಶಿವನ ದರ್ಶನವನ್ನು ಎಲ್ಲಾ ಭಕ್ತಾದಿಗಳು ಪಡೆದುಕೊಳ್ಳಬಹುದು. ಶೈವರಿಗೆ ಅತ್ಯಂತ ಪವಿತ್ರವಾದಂತಹ ದೇವಾಲಯ ಇದಾಗಿದೆ ಚಿದಂಬರಂ ಎಂದರೆ

ಶಿವನು ತಾಂಡವ ಮಾಡಿದಂತಹ ಸ್ಥಳ ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ಸ್ವತಹ ಪತಂಜಲಿಯವರು ಪ್ರತಿಷ್ಠಾಪಿಸಿದರು ಪತಂಜಲಿ ಅವರನ್ನು ಆಧುನಿಕ ಯುಗದ ಯೋಗ ಪಿತಾಮಹ ಎಂದು ಸಹ ಕರೆಯಲಾಗುತ್ತದೆ.ಈ ದೇವಾಲಯವನ್ನು ನಡೆಸಲು ತಕ್ಕಂತಹ ಮಾರ್ಗವನ್ನು ತರ್ಕವನ್ನು ಪ್ರಸ್ತಾಪಿಸಿದ್ದರು.ನಿರ್ದಿಷ್ಟ ಮಟ್ಟದ ಸಾಧನೆ ಮತ್ತು ಶಿಸ್ತನ್ನು ಕಾಯ್ದುಕೊಳ್ಳಬೇಕಾದ ದೇವಾಲಯದ ದೈನಂದಿನ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುವಂತಹ ಜನರ ಗುಂಪನ್ನು ಅವರು ಸಿದ್ದಪಡಿಸಿದ್ದರು ಅದೇ ಕುಟುಂಬದ ಸದಸ್ಯರು ಇಂದಿಗೂ ಕೂಡ ಈ ದೇವಾಲಯವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಚಿದಂಬರಂ ಎಂದರೆ ಆಕಾಶದಲ್ಲಿರುವ ಲಿಂಗ ಎಂದರ್ಥ ಈ ದೇವಸ್ಥಾನವನ್ನು ನಿಜಕ್ಕೂ ಆಕಾಶದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇದೇ ಕಾರಣ ನೀವು ಶಿವನ ದರ್ಶನ ಪಡೆದು ಭಕ್ತಿಯಿಂದ ಪ್ರಾರ್ಥಿಸಿ ದೇವಸ್ಥಾನದಿಂದ ಹೊರಗೆ ಬರುತ್ತಿರುವಾಗ ನಿಮ್ಮ ಪ್ರಾರ್ಥನೆ ನಿಜಕ್ಕೂ ಅಚಲವಾಗಿ ಇದ್ದರೆ ನೀವು ಆ ದೇವಸ್ಥಾನವನ್ನು ಹಿಂತಿರುಗಿ ನೋಡಿದಾಗ ಆ ದೇವಸ್ಥಾನದ ಗೋಪುರ ಹಾಗೂ ದೇವಾಲಯ ನಿಮ್ಮ ಹಿಂದೆ ಆಕಾಶದಲ್ಲಿ ಹಾರುವಂತೆ ಅನುಭೂತಿಯನ್ನು ಉಂಟುಮಾಡುತ್ತದೆ.

WhatsApp Group Join Now
Telegram Group Join Now
[irp]