ಇಲ್ಲಿ ಹರಕೆ ಹೊತ್ತರೆ ಅಭಿವೃದ್ದಿ ಸಂತಾನ ಗ್ಯಾರೆಂಟಿ.ಈ ಮಹಾಲಕ್ಷ್ಮೀ ದೇವಿ ಬೇಡಿದ್ದನ್ನೆಲ್ಲಾ ಕರುಣಿಸುತ್ತಾಳೆ..ಇಲ್ಲಿನ ವಿಸ್ಮಯ ನೋಡಿ » Karnataka's Best News Portal

ಇಲ್ಲಿ ಹರಕೆ ಹೊತ್ತರೆ ಅಭಿವೃದ್ದಿ ಸಂತಾನ ಗ್ಯಾರೆಂಟಿ.ಈ ಮಹಾಲಕ್ಷ್ಮೀ ದೇವಿ ಬೇಡಿದ್ದನ್ನೆಲ್ಲಾ ಕರುಣಿಸುತ್ತಾಳೆ..ಇಲ್ಲಿನ ವಿಸ್ಮಯ ನೋಡಿ

ಈ ದೇವಸ್ಥಾನದಲ್ಲಿ ನೀವು ಹರಕೆ ಹೊತ್ತರೆ ಸಂತಾನಾಭಿವೃದ್ಧಿ ಮತ್ತು ಅಷ್ಟಐಶ್ವರ್ಯ ಪ್ರಾಪ್ತಿಯಾಗುತ್ತದೆ.ನಮ್ಮ ದೇಶ ಅದರಲ್ಲಿಯೂ ನಮ್ಮ ರಾಜ್ಯ ಜನ ಆಕರ್ಷಣೆಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದನ್ನು ನಾವು ನೋಡಬಹುದಾಗಿದೆ ಅಷ್ಟು ಸುಂದರವಾದ ಮತ್ತು ಮನಮೋಹಕವಾದಂತಹ ಸ್ಥಳಗಳನ್ನು ವಿಶೇಷ ಗುಣಗಳನ್ನು ಹೊಂದಿರುವಂತಹ ತಾಣಗಳನ್ನು ನಮ್ಮ ಕರ್ನಾಟಕ ಹೊಂದಿರುವುದನ್ನು ನಾವು ನೋಡಬಹುದಾಗಿದೆ. ನಮ್ಮ ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ತಾಣಗಳು ಅಥವಾ ಸ್ಥಳಗಳು ಪ್ರಸಿದ್ಧಿಯನ್ನು ಪಡೆದಿರಬಹುದು. ಆದರೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹಳನೇ ವೈವಿಧ್ಯಮಯವಾದಂತಹ ಗುಣಲಕ್ಷಣಗಳನ್ನು ಹೊಂದಿರುವುದನ್ನು ನಾವು ಕಾಣಬಹುದಾಗಿದೆ. ಈ ಒಂದು ಕಾರಣಕ್ಕಾಗಿಯೇ ಕರ್ನಾಟಕಕ್ಕೆ ಪ್ರತಿ ವರ್ಷವೂ ಕೂಡ ಲಕ್ಷಾಂತರ ಜನ ಬಂದು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಈಗಾಗಲೇ ನಮ್ಮ ಕರ್ನಾಟಕದಲ್ಲಿ ಹಲವಾರು ದೇವಸ್ಥಾನಗಳು ಪ್ರಸಿದ್ಧಿಯನ್ನು ಪಡೆದಿದೆ ಅದರಲ್ಲಿ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯವು ಕೂಡ ಒಂದು. ಈ ದೇವಸ್ಥಾನದ ವಿಶೇಷವಾದರೂ ಏನು ಹಾಗೂ ಇಲ್ಲಿನ ವೈವಿಧ್ಯಮಯವಾದರೂ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ.

ಈ ದೇಶದಲ್ಲಿ ಇರುವಂತಹ ಎಲ್ಲ ದೇವಾಲಯಗಳಿಗೂ ಕೂಡ ಒಂದು ವಿಶೇಷವಾದಂತಹ ಇತಿಹಾಸವಿದೆ ಅದೇ ರೀತಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೂ ಕೂಡ ಒಂದು ಇತಿಹಾಸವಿರುವುದನ್ನು ನಾವು ಕಾಣಬಹುದಾಗಿದೆ. ಈ ದೇವಸ್ಥಾನದಲ್ಲಿ ಪೂಜಿಸಲಾಗುವಂತಹ ಶ್ರೀ ಮಹಾಲಕ್ಷ್ಮಿ ದೇವಿಯ ವಿಗ್ರಹವು ಇಲ್ಲಿಯೇ ಸ್ವತಹ ಉದ್ಭವವಾಗಿದೆ ಎಂಬುದನ್ನು ನಂಬಲಾಗಿದೆ. ಸ್ಥಳೀಯರ ಇತಿಹಾಸದ ಪ್ರಕಾರ ಈ ದೇವಸ್ಥಾನವು ಸುಮಾರು ಇನ್ನೂರು ವರ್ಷಗಳ ಇತಿಹಾಸದಲ್ಲಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ. ಈ ದೇವಸ್ಥಾನದ ಇತಿಹಾಸವನ್ನು ಕೇಳಿದರೆ 1900 ರಲ್ಲಿ ಗೊರವನಹಳ್ಳಿ ಎಂಬ ಪುಣ್ಯಕ್ಷೇತ್ರದಲ್ಲಿ ಅಬ್ಬಯ್ಯ ಎಂಬ ವ್ಯಕ್ತಿಯು ಬಂದು ವಾಸವಾಗಿರುತ್ತಾರೆ.

WhatsApp Group Join Now
Telegram Group Join Now

ಗೊರವನಹಳ್ಳಿಯಲ್ಲಿ ಒಂದು ಕೆರೆ ಇರುತ್ತದೆ ಈ ಕೆರೆಯ ಸಮೀಪದಲ್ಲಿ ಅಬ್ಬಯ್ಯ ನಡೆದು ಹೋಗುವಂತಹ ಸಂದರ್ಭದಲ್ಲಿ ನೀರಿನ ಒಳಗೆ ಒಂದು ಮಹಾಲಕ್ಷ್ಮಿ ದೇವಿಯ ವಿಗ್ರಹ ದೊರೆಯುತ್ತದೆ. ಇದನ್ನು ನೋಡಿದಂತಹ ಅಬ್ಬಯ್ಯ ವಿಗ್ರಹವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟು ಪೂಜೆ ಮಾಡಲು ಪ್ರಾರಂಭ ಮಾಡುತ್ತಾರೆ. ಕಾಲಕ್ರಮೇಣ ಅಬ್ಬಯ್ಯ ಅವರ ಭಕ್ತಿಗೆ ಮೆಚ್ಚಿದಂತಹ ಶ್ರೀ ಮಹಾಲಕ್ಷ್ಮಿ ದೇವಿಯ ಆತನಿಗೆ ಸಿರಿ ಸಂಪತ್ತು ಐಶ್ವರ್ಯವನ್ನು ಕರುಣಿಸುತ್ತಾಳೆ. ಇದನ್ನು ಬಳಕೆ ಮಾಡಿಕೊಂಡಂತಹ ಅಬ್ಬಯ್ಯ ಈ ಹಣದಲ್ಲಿ ಸಮಾಜ ಸೇವೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾನೆ. ತದನಂತರ ಇದನ್ನು ತಿಳಿದಂತಹ ಊರಿನ ಜನರು ಅಬ್ಬಯ್ಯ ಅವರ ಮನೆಯಲ್ಲಿ ಲಕ್ಷ್ಮಿ ನಿವಾಸ ಎಂದು ಕರೆಯುವುದಕ್ಕೆ ಪ್ರಾರಂಭ ಮಾಡುತ್ತಾರೆ.



crossorigin="anonymous">