ಬರೀ ಒಂದು ರೂಪಾಯಿಯಲ್ಲಿ ಪೂರ್ತಿ ಅಡುಗೆ ಮನೆ ಕ್ಲೀನ್ ಆಗಿ ಹೊಸತರ ಹಾಗೆ ಹೊಳೆಯಬೇಕಾ ? ಈ ವಸ್ತು ಬಳಸಿ ಹೀಗೆ ಕ್ಲೀನ್ ಮಾಡಿ ಚಮತ್ಕಾರ ನೋಡಿ. » Karnataka's Best News Portal

ಬರೀ ಒಂದು ರೂಪಾಯಿಯಲ್ಲಿ ಪೂರ್ತಿ ಅಡುಗೆ ಮನೆ ಕ್ಲೀನ್ ಆಗಿ ಹೊಸತರ ಹಾಗೆ ಹೊಳೆಯಬೇಕಾ ? ಈ ವಸ್ತು ಬಳಸಿ ಹೀಗೆ ಕ್ಲೀನ್ ಮಾಡಿ ಚಮತ್ಕಾರ ನೋಡಿ.

ಚೂರು ಉಜ್ಜದೇ ತಿಕ್ಕದೇ ಅಡುಗೆ ಮನೆ ಮಾಡಿ ಹೊಸತು ಮಾಡಬೇಕೇ.?ಅಡುಗೆ ಮನೆಯಲ್ಲಿ ಎಷ್ಟೇ ಹಳೆಯ ಕಲೆಗಳಿದ್ದರೂ, ಎಷ್ಟೇ ಕೊಳೆ ಆಗಿದ್ದರೂ ಕೇವಲ ಎರಡು ವಸ್ತುಗಳನ್ನು ಬಳಸಿ ಸ್ವಚ್ಛಗೊಳಿಸಬಹುದು. ಮನೆಯಲ್ಲಿ ಅತಿ ಹೆಚ್ಚು ಕೊಳೆ, ಕಲೆಗಳು ಆಗುವ ಸ್ಥಳವೆಂದರೆ ಅದು ಅಡುಗೆ ಮನೆ. ಇಲ್ಲಿ ಹೆಚ್ಚಿನ ಮಸಾಲ ಪದಾರ್ಥಗಳು ಹಾಗು ಎಣ್ಣೆ / ಜಿಡ್ಡಿನ ಪದಾರ್ಥಗಳು ಚೆಲ್ಲಿ ಹೋಗುವುದರಿಂದ ಕಲೆ ಆದರೆ ಅಥವಾ ಅಡುಗೆ ಮಾಡುವಾಗ ಗೋಡೆಗಳಿಗೆ ಮಸಾಲ ಪದಾರ್ಥಗಳ ರಸಗಳು, ಎಣ್ಣೆ ಹಾರಿ ಕಲೆ ಹಾಗಿದ್ದರೆ ಅವುಗಳನ್ನು ತೊಳೆಯಲು ತುಂಬಾನೇ‌ ಕಷ್ಟ ಆಗುತ್ತದೆ. ಎಷ್ಟೇ ಉಜ್ಜಿದರು ಸೋಪಾಗಿ ತಿಕ್ಕಿ ತೊಳೆದರೂ‌ ಸಂಪೂರ್ಣವಾಗಿ ಕಲೆ ಹೋಗುವುದಿಲ್ಲ. ಆದ್ದರಿಂದ ಬರೇ ಒಂದೇ ಒಂದು ರೂಪಾಯಿಯಲ್ಲಿ ಪೂರ್ತಿ ಅಡುಗೆ ಮನೆ ಕ್ಲೀನ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ. ಅಡುಗೆ ಮನೆ ಕ್ಲೀನ್ ಮಾಡಲು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿಕೊಂಡು ಒಂದು ಸಲ್ಯೂಷನ್ ತಯಾರಿಸಿಕೊಳ್ಳಬೇಕು ಆ ವಸ್ತುಗಳು ಯಾವುವು ಅಂದರೆ ವಿನೆಗರ್ ಅಥವಾ ನಿಂಬೆ ಹಣ್ಣಿನ ರಸ, ಅಡುಗೆ ಸೋಡ, ಅಡುಗೆ ಉಪ್ಪು, ಸುವಾಸನೆಗೆ ಬೇಕಾದ್ದಲ್ಲಿ ಡಿಶ್ ವಾಶ್. ಕ್ಲೀನಿಂಗ್ ಸಲ್ಯೂಷನ್ ತಯಾರಿಸುವ ವಿಧಾನ ಎರಡರಿಂದ

ಮೂರು ಕ್ಯಾಪ್ ಅಷ್ಟು ವಿನೆಗರ್ ಅಥವಾ ನಿಂಬೆ ಹಣ್ಣಿನ ರಸವನ್ನುಒಂದು ಬೌಲ್ ನಲ್ಲಿ ಹಾಕಿ ಕೊಳ್ಳಿ ಅದಕ್ಕೆ ಒಂದು ಸ್ಪೂನ್ ಅಡುಗೆ ಸೋಡ ಪುಡಿ ಹಾಗೂ ಒಂದು ಸ್ಪೂನ್ ಅಡುಗೆ ಉಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಸ್ವಚ್ಚ ಗೊಳಿಸಿದ ಅಡುಗೆ ಮನೆ ಸುವಾಸನೆಯುತವಾಗಿ ಇರಬೇಕು ಎಂದು ಅಂದು ಕೊಂಡರೆ ಸ್ವಲ್ಪ ಡಿಶ್ ವಾಶ್ ಅನ್ನು ಆ ವಸ್ತುಗಳ ಜೊತೆ ಬೆರೆಸಿಕೊಳ್ಳಿ. ನಂತರ ಒಂದು‌ ಗ್ಲಾಸ್ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಲ್ಯುಷನ್ ರೆಡಿ ಮಾಡಿ ಇಟ್ಟುಕೊಳ್ಳಿ. ನಂತರ ಈ ಸಲ್ಯೂಷನ್ ಅನ್ನು ಒಂದು ಸ್ಪ್ರೆ ಬಾಟಲ್‌ನಲ್ಲಿ ಹಾಕಿಕೊಂಡು ಎಲ್ಲೆಲ್ಲಿ ಕಲೆ ಆಗಿದೆ ಎಲ್ಲೆಲ್ಲಿ ಸ್ವಚ್ಛ ಮಾಡಬೇಕು ಅಲ್ಲಿ ಈ ಸಲ್ಯೂಷನ್ ಅನ್ನು ಸ್ಪ್ರೇ ಮಾಡಬೇಕು. ಇದನ್ನು ಹಾಕಿದ ನಂತರ 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಒಂದು ಬಟ್ಟೆಯಿಂದ ಒರಿಸಿದರೆ ಸಾಕು ಅಲ್ಲಿದ್ದ ಕೊಳೆ, ಕಲೆಗಳು ಸಂಪೂರ್ಣವಾಗಿ ಸ್ವಚ್ಚ ಆಗುತ್ತದೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

WhatsApp Group Join Now
Telegram Group Join Now
[irp]


crossorigin="anonymous">