ತುಲಾ ರಾಶಿ 2022 ಜೂನ್ ತಿಂಗಳ ಭವಿಷ್ಯ.ಸೂರ್ಯ ಜೂನ್ 15 ನೇ ತಾರೀಕು ಮಿಥುನರಾಶಿ ಪ್ರವೇಶವಾಗುತ್ತಾನೆ, ಜೂನ್ 18 ನೇ ತಾರೀಕು ಶುಕ್ರ ತನ್ನ ಸ್ವಂತ ಮನೆಯಾದ ವೃಷಭ ರಾಶಿಗೆ ಪ್ರವೇಶ ಮಾಡುತ್ತಿದ್ದಾರೆ. ಜೂನ್ 26 ಕುಜ ತನ್ನ ಸ್ವಂತ ಮನೆ ಆದಂತಹ ಮೇಷರಾಶಿಗೆ ಪ್ರವೇಶವಾಗುತ್ತದೆ. ಈ ಮೂರು ರಾಶಿಯ ಬದಲಾವಣೆಗಳು ಈ ಒಂದು ಮಾಸದಲ್ಲಿ ಕಂಡುಬರುತ್ತದೆ. ನಿಮ್ಮ ರಾಶಿಯ ಅಧಿಪತಿ ಶುಕ್ರ ಸಪ್ತಮದಲ್ಲಿ ಇದ್ದರೂ ಈಗ ಅಷ್ಟಮಕ್ಕೆ ಬರುತ್ತಿದ್ದಾರೆ. ನಿಮ್ಮ ರಾಶಿ ಭಲವಾಗಿ ವಾಗಿರುವುದರಿಂದ ಆರೋಗ್ಯದಲ್ಲಿ ವೃದ್ಧಿ ಕಾಣಬಹುದು. ನಿಮಗೆ ಅದೃಷ್ಟವು ಕೂಡಿಬರುತ್ತದೆ ತುಲಾ ರಾಶಿ ಗುರುಬಲ ಇಲ್ಲ ಎನ್ನುವುದನ್ನು ಬಿಟ್ಟರೆ ಶುಕ್ರಬಲ ಇದ್ದೇ ಇರುತ್ತದೆ. ಶುಕ್ರಬಲ ಇದ್ದಾಗ ಆರ್ಕಿಟೆಕ್ಟ್ ಕೆಲಸ ಮಾಡುವವರಿಗೆ ಮಾಡೆಲಿಂಗ್, ಸಿನಿಮಾ ನಟ ನಟಿಯರು, ಕಲೆಯನ್ನ ಪ್ರೋತ್ಸಾಹಿಸಿ ಉದ್ಯೋಗವನ್ನು ಮಾಡುವಂತಹವರು.ಬ್ಯೂಟಿ ಪಾರ್ಲರ್, ಬೋಟಿಕ್, ಫ್ಯಾನ್ಸಿ ಸ್ಟೋರ್, ಕಾಸ್ಮೆಟಿಕ್ಸ್ ಸೇಲರ್ ಇಂತಹ ಪ್ರತಿಯೊಬ್ಬರಿಗೂ ಕೂಡ ಚೆನ್ನಾಗಿರುತ್ತದೆ. ಕುಜ ಪ್ರಸ್ತುತ 6 ನೇ ಮನೆಯಲ್ಲಿದ್ದರು ಸಹ ಅಷ್ಟೊಂದು ಬಲಿಷ್ಠವಾಗಿ ಇಲ್ಲ ಇದೇ ತಿಂಗಳು 26 ನೇ ತಾರೀಖು ತಮ್ಮ ಸ್ವಂತ ಮನೆಗೆ ಬರುತ್ತಿದ್ದಾರೆ. ಕುಜನಿಂದ ಈ ತಿಂಗಳು 26
ರನಂತರ ಫಲಗಳು ದೊರೆಯುತ್ತದೆ. ಅಲ್ಲಿಯವರೆಗೂ ಸ್ವಲ್ಪ ಕೃಷಿಕರಿಗೆ, ಹೂ ವ್ಯಾಪಾರಿಗಳಿಗೆ ಅಷ್ಟೊಂದು ವೃದ್ಧಿ ಇರುವುದಿಲ್ಲ. ಗುರು ತನ್ನ ಸ್ವಂತ ಮನೆಯಲ್ಲಿದ್ದರು ಸಹ ಯಾವುದೇ ಒಂದು ಶುಭಫಲಗಳು ಇಲ್ಲ ಆದರೂ ಸಹ ಗುರುವಿನ ಯಾವುದೇ ರೀತಿಯಾದಂತಹ ಶುಭಫಲಗಳು ಕಂಡುಬರುವುದಿಲ್ಲ. ತುಲಾ ರಾಶಿಗೆ ಅಧಿಪತಿ ಆದಂತಹ ಶುಕ್ರನು ಶನಿಗೆ ಮಿತ್ರನಾಗಿರುತ್ತಾನೆ.ಆದ್ದರಿಂದ ಯಾವುದೇ ರೀತಿಯಾದಂತಹ ಹೆಚ್ಚಿನ ಸಮಸ್ಯೆಗಳು ಕಂಡುಬರುವುದಿಲ್ಲ ಪಂಚಮ ಶನಿಯ ಪ್ರಭಾವ ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ ಆದ್ದರಿಂದ ನೀವು ಶನಿಮಹಾತ್ಮನ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡುವಂತಹದ್ದು, ಎಳ್ಳೆಣ್ಣೆ ದೀಪ ಹಚ್ಚುವ ಅಂತಹದ್ದು, ತೈಲಾಭಿಷೇಕ ಮಾಡಿಸುವಂತಹದ್ದು ಇದರಿಂದ ಪಂಚಮ ಶನಿಯ ಪ್ರಭಾವ ಸಾಧಾರಣವಾಗಿ ಇರುತ್ತದೆ. ಬುಧ ನಿಮ್ಮ ರಾಶಿಯಲ್ಲಿ ಮಿತ್ರನೇ ಸ್ಥಾನದಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ, ಉದ್ಯೋಗಗಳಿಗೆ, ಮೆಡಿಕಲ್ ರಿಲೇಟೆಡ್, ಹಾಸ್ಪಿಟಲ್, ಮೆಡಿಕಲ್ ಶಾಪ್, ವ್ಯಾಪಾರ ವ್ಯವಹಾರದಲ್ಲಿ ಯಾವುದು ರೀತಿಯಾದಂತಹ ನಷ್ಟ ಕಂಡುಬರುವುದಿಲ್ಲ.
ತುಲಾ ರಾಶಿ ಜೂನ್ ತಿಂಗಳ ಭವಿಷ್ಯ ಎಲ್ಲಾ ರಂಗದಲ್ಲೂ ಅಪಾರ ಲಾಭದಾಯಕ ಈ ಒಂದು ವಿಷಯದಿಂದ ದೊಡ್ಡ ಬದಲಾವಣೆ.

Astro plus
[irp]