ಮಾವಿನಹಣ್ಣಿನ ಬಗ್ಗೆ ಎಲ್ಲರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು…ಮಾವಿನ ಹಣ್ಣುಗಳಲ್ಲಿ ತುಂಬಾ ಹಣ್ಣಾಗಿರುವ ಸ್ವಲ್ಪ ಕೂಡ ಹುಳಿ ಇರದೇ ಇರುವ ಸಿಹಿಯಾಗಿರುವ ಮಾವಿನ ಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ವಾತ ಪಿತ್ತ ದೋಷಗಳು ನಿಯಂತ್ರಣಕ್ಕೆ ಬರುತ್ತವೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನಮ್ಮ ದೇಹವೂ ಸುಸ್ತಾಗುವುದು ಹಾಗೂ ದೇಹಕ್ಕೆ ಹೀಟ್ ಜಾಸ್ತಿ ಆಗುವುದು ಅಥವಾ ಸಿಕ್ಕಾಪಟ್ಟೆ ಬಾಯಾರಿಕೆ ಆಗುವುದು ಸರ್ವೇಸಾಮಾನ್ಯ. ಇವೆಲ್ಲವನ್ನು ಮಾವಿನಹಣ್ಣಿನ ಸೇವನೆಯು ಕಡಿಮೆಮಾಡುತ್ತದೆ. ಮಾವಿನ ಹಣ್ಣಿನ ಸೇವನೆಯಿಂದ ಧಾತು ವೃದ್ಧಿಯಾಗುತ್ತದೆ. ರಸ ರಕ್ತ ಮಾಂಸ ಮೇದ ಅಸ್ಥಿ ಮಜ್ಜ ಶುಕ್ರ ಈ ಎಲ್ಲ ಧಾತುಗಳಿಗೆ ಪುಷ್ಟಿ ನೀಡುವಂತಹ ಕೆಲಸವನ್ನು ಮಾವಿನಹಣ್ಣು ಮಾಡುತ್ತದೆ. ಆದ್ದರಿಂದ ನಾವು ಇದರ ಸೇವನೆಯನ್ನು ಮಾಡಬೇಕು. ಇದೇ ಕಾರಣಕ್ಕಾಗಿ ಇದು ಹಣ್ಣುಗಳ ರಾಜ ಎಂದು ಕರೆಸಿಕೊಂಡಿರಬಹುದು. ಆದರೆ ವಿಶೇಷವಾಗಿ ಭಾವ ಪ್ರಕಾಶ ನಿಘಂಟು ಅಥವಾ ಧನ್ವಂತರಿ ನಿಘಂಟುಗಳಲ್ಲಿ ಶುಕ್ರ ವಿವರ್ಧನಂ ಎಂದು ಹೇಳುತ್ತಾರೆ.
ಎಲ್ಲ ಧಾತುಗಳಿಗೆ ಪುಷ್ಟಿ ನೀಡುವುದರ ಜೊತೆಗೆ ಶುಕ್ರ ಧಾತುವಿಗೆ ಪುಷ್ಟಿ ನೀಡುತ್ತದೆ. ಅಂದರೆ ವೀರ್ಯವನ್ನು ಜಾಸ್ತಿ ಮಾಡುತ್ತದೆ. ಹಾಗಾಗಿ ಯಾರಾದರೂ ಸಂತಾನೋತ್ಪತ್ತಿಗೆ ಪ್ಲಾನ್ ಮಾಡುತ್ತಿದ್ದಾರೆ ಅವರು ಅಥವಾ ಯಾರಿಗೆ ವೀರ್ಯ ದೋಷ ಇದೆಯೋ ಅವರು ಲೈಂಗಿಕ ಸಮಸ್ಯೆ ಇರುವವರು ಮಾವಿನ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಿದರೆ ಒಳ್ಳೆಯದು. ಜೊತೆಗೆ ಮಾವಿನಹಣ್ಣಿಗೆ ಹೃದ್ಧಿಯ ಕ್ವಾಲಿಟಿ ಇದೆ ಎಂದು ಹೇಳುತ್ತಾರೆ. ಅಂದರೆ ಹೃದಯಕ್ಕೆ ಇದು ಪುಷ್ಟಿಯನ್ನು ನೀಡುತ್ತದೆ. ಮನಸ್ಸಿಗೆ ಶಕ್ತಿಯನ್ನು ಕೊಡುತ್ತದೆ ಎಂದು ಅರ್ಥ. ಇನ್ನೊಂದು ಅದ್ಭುತವಾದ ಕ್ವಾಲಿಟಿ ಮಾವಿನಹಣ್ಣಿಗೆ ಇರುವುದು ಎಂದರೆ ಇದು ಓಜಸ್ ಅನ್ನು ಹೆಚ್ಚಿಗೆ ಮಾಡುತ್ತದೆ. ಓಜಸ್ಸನ್ನು ಹೆಚ್ಚು ಮಾಡುವ ಕಾರಣದಿಂದಾಗಿ ಮತ್ತು ಧಾತುವನ್ನು ಪುಷ್ಟಿ ಮಾಡುವ ಕಾರಣದಿಂದಾಗಿ ಇದು ವರ್ಣ್ಯ ಕ್ವಾಲಿಟಿ ಯನ್ನು ಹೊಂದಿದೆ ಎಂದು ಹೇಳುತ್ತಾರೆ. ವರ್ಣ್ಯ ಎಂದರೆ ದೇಹದ ಕಾಂತಿಯನ್ನು ಹೆಚ್ಚು ಮಾಡುತ್ತದೆ ಎಂದರ್ಥ.
ಸಿಹಿಯ ಜೊತೆ ಸ್ವಲ್ಪ ಹುಳಿ ಇರುವ ಮಾವಿನಹಣ್ಣನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಆಗುವ ಲಾಭಗಳು ಏನೆಂದರೆ ಇದು ವಿಶೇಷವಾಗಿ ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಜತೆಗೆ ಬಾಯಿಯ ರುಚಿಯನ್ನು ಹೆಚ್ಚು ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಯುರ್ವೇದ ಗ್ರಂಥಗಳ ಪ್ರಕಾರ ಪೂರ್ತಿ ಸಿಹಿ ಇರುವ ಮಾವಿನಹಣ್ಣು ಗಳಿಗಿಂತ ಸ್ವಲ್ಪಹುಳಿ ಇರುವ ಮಾವಿನ ಹಣ್ಣುಗಳು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಇವು ಹೇಳುತ್ತವೆ. ಇನ್ನು ಮುಂತಾದ ಮಾವಿನಹಣ್ಣಿನ ಬಗ್ಗೆ ಇರುವ ವಿಶೇಷ ಮಾಹಿತಿಗಳನ್ನು ತಿಳಿದುಕೊಳ್ಳಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.