ಹೆಚ್ಚು ಲಾಭ ಕೊಡುವ 5 ಸ್ಕೀಮ್ಗಳು ಇವು…ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ 5 ಸ್ಕೀಂಗಳಲ್ಲಿ ಇನ್ವೆಸ್ಟ್ ಮಾಡುವುದರಿಂದ ನಿಮ್ಮ ಹಣವು ನೂರಕ್ಕೆ ನೂರರಷ್ಟು ಸೇಫ್ ಆಗಿ ಇರುತ್ತದೆ. ನೀವು ಹೂಡಿಕೆ ಮಾಡುವ ಹಣಕ್ಕೆ ಯಾವುದೇ ರೀತಿಯ ರಿಸ್ಕ್ ಇರುವುದಿಲ್ಲ. ಹಾಗಾದರೆ ಈ ಐದು ಸ್ಕೀಂಗಳಲ್ಲಿ ಹೂಡಿಕೆ ಮಾಡಲು ಅಕೌಂಟ್ ಓಪನ್ ಮಾಡುವುದು ಹೇಗೆ ಮತ್ತು ಈ ಸ್ಕೀಮಿ ನಲ್ಲಿರುವ ಟರ್ಮ್ಸ್ ಮತ್ತು ಕಂಡಿಶನ್ ಏನು ಎನ್ನುವುದರ ಬಗ್ಗೆ ಹೇಳುವುದಾದರೆ ಮೊದಲನೇದಾಗಿ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಬಗ್ಗೆ ಹೇಳಬಹುದು. ಯೋಜನೆಯ ಹೆಸರಿನಲ್ಲಿ ಇರುವಂತೆಯೇ ಇದು ವಯಸ್ಸಾದವರಿಗೆ ಇರುವ ಯೋಜನೆಯಾಗಿದೆ. ಆದ್ದರಿಂದ ಇದರಲ್ಲಿ ಸೀನಿಯರ್ ಸಿಟಿಜನ್ಸ್ ಮಾತ್ರ ಡೆಪಾಸಿಟ್ ಮಾಡಬೇಕು. ಅವರ ವಯಸ್ಸು 60 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗೂ ವಿಆರ್ಎಸ್ ತೆಗೆದುಕೊಂಡು ಇರುವವರಾದರೆ 50 ರಿಂದ 60 ವರ್ಷ ಮೇಲ್ಪಟ್ಟ ವರಾಗಿರಬೇಕು. ಈ ಸ್ಕೀಮಿನ ರೇಟ್ ಆಫ್ ಇಂಟರೆಸ್ಟ್ 7.4% ಇದೆ. ಮಿನಿಮಮ್ ಈ ಸ್ಕೀಮಿ ನಲ್ಲಿ ಎಷ್ಟು ಡೆಪಾಸಿಟ್ ಮಾಡಬೇಕು ಎಂದರೆ ಕನಿಷ್ಠ ಸಾವಿರ ರೂಗಳಿಂದ 15 ಲಕ್ಷದವರೆಗೂ ಕೂಡ ಡೆಪಾಸಿಟ್ ಮಾಡಿಕೊಳ್ಳಬಹುದು. ಆದರೆ ಈ ಸ್ಕೀಮಿನಲ್ಲಿ ಒಂದೇ ಒಂದು ಬಾರಿ ಮಾತ್ರ ಡೆಪಾಸಿಟ್ ಮಾಡಬೇಕು.

ಮತ್ತು ಈ ಯೋಜನೆಯ ಪ್ರಕಾರ ನಿಮಗೆ ಮೂರು ತಿಂಗಳಿಗೆ ಒಮ್ಮೆ ಇದರ ಇಂಟ್ರೆಸ್ಟ್ ಸಿಗುತ್ತದೆ. ಈ ಇಂಟ್ರೆಸ್ಟ್ ಹಣವನ್ನುಡೈರೆಕ್ಟಾಗಿ ನಿಮ್ಮ ಸೇವಿಂಗ್ ಅಕೌಂಟಿಗೆ ಟ್ರಾನ್ಸ್ಫರ್ ಮಾಡುತ್ತಾರೆ. ಈ ಯೋಜನೆಯ ಮೆಚುರಿಟಿ ಅವಧಿ ಐದು ವರ್ಷಗಳು. ನೀವು ಈ ಯೋಜನೆಯಲ್ಲಿ 1 ಲಕ್ಷದವರೆಗೂ ಹಣವನ್ನು ಹಣದ ರೂಪದಲ್ಲಿಯೇ ಕೊಟ್ಟು ಡೆಪಾಸಿಟ್ ಮಾಡಬಹುದು. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ಡೆಪಾಸಿಟ್ ಮಾಡಬೇಕು ಎಂದರೆ ಚೆಕ್ ಮೂಲಕ ಕೊಡಬೇಕು.ಈ ಯೋಜನೆಯ ಪ್ರಿ ಮೆಚ್ಯೂರ್ ಕ್ಲೋಸರ್ ಬಗ್ಗೆ ನೋಡುವುದಾದರೆ ಅಂದರೆ ಸ್ಕೀಮಿನ ಯೋಜನೆ 5 ವರ್ಷ ಇರುವುದರಿಂದ ನೀವು ಐದು ವರ್ಷಕ್ಕಿಂತ ಮುಂಚೆ ಇದನ್ನು ವಿತ್ ಡ್ರಾ ಮಾಡುವುದಾದರೆ ಸ್ವಲ್ಪ ಪೆನಾಲ್ಟಿ ಚಾರ್ಜ್ ಮಾಡುತ್ತಾರೆ. ನೀವು ಈ ಯೋಜನೆ ಪ್ರಾರಂಭಿಸಿ ಒಂದು ವರ್ಷದ ಬಳಿಕ ವಿತ್ ಡ್ರಾ ಮಾಡಿಕೊಳ್ಳುವುದಾದರೆ 1.5% ಪೆನಾಲ್ಟಿ ಚಾರ್ಜ್ ಮಾಡುತ್ತಾರೆ. ಅಥವಾ ಎರಡು ವರ್ಷಗಳ ನಂತರ ವಿತ್ಡ್ರಾ ಮಾಡುವುದಾದರೆ 1% ಪೆನಾಲ್ಟಿ ಚಾರ್ಜಸ್ ಮಾಡುತ್ತಾರೆ. ಯೋಜನೆಯ ನಾಮಿನಿ ವಿಷಯ ಮತ್ತು ಇನ್ನಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.

By admin

Leave a Reply

Your email address will not be published. Required fields are marked *