ಹೆಬ್ಬೆರೆಳಿಗಿಂತ ಪಕ್ಕದ ಬೆರಳು ಉದ್ದವಾಗಿದ್ದರೆ ಈ ಅದೃಷ್ಟ ನಿಮಗೆ ಒಲಿದು ಬರುತ್ತೆ…ನೋಡಿ

ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದ ಇದ್ದರೆ ಏನೆಲ್ಲಾ ಅದೃಷ್ಟ ಒಲಿದು ಬರುತ್ತದೆ ಗೊತ್ತಾ?ಸಾಮುದ್ರಿಕ ಶಾಸ್ತ್ರದಲ್ಲಿ ಮುಖ ಸಾಮುದ್ರಿಕ, ಹಸ್ತಸಾಮುದ್ರಿಕ ಅಂಗ ಸಾಮುದ್ರಿಕ, ಹಾಗೇ ಪಾದ ಸಾಮುದ್ರಿಕ ಎನ್ನುವ ವಿಭಾಗಗಳಿವೆ. ಈ ಶಾಸ್ತ್ರಗಳಿಗೆ ಉಗಮ ಸ್ಥಾನ ಭಾರತ. ರಾಮಾಯಣ ಮತ್ತು ಮಹಾಭಾರತದಲ್ಲಿ ಕೂಡ ಸಾಮುದ್ರಿಕಾಶಾಸ್ತ್ರದ ಉಲ್ಲೇಖವಿದೆ. ರಾಮಾಯಣದಲ್ಲಿ ಹನುಮಂತನು ಸೀತಾಮಾತೆಯನ್ನು ಹುಡುಕಿಕೊಂಡು ಲಂಕೆಗೆ ಹೋದಾಗ ರಾವಣನ ಪಕ್ಕದಲ್ಲಿ ಮಂಡೋದರಿ ಮಲಗಿರುವುದನ್ನು ಕಂಡು ಆಕೆಯನ್ನೇ ಸೀತೆ ಎಂದು ಭ್ರಮಿಸಿ ದುಃಖಿಸುವ ಸಂದರ್ಭದಲ್ಲಿ ಮಂಡೋದರಿಯ ಕಾಲುಗಳನ್ನು ನೋಡುತ್ತಾನೆ. ಅದರಲ್ಲಿ ಪದ್ಮರೇಖೆ ಗಳಿರುವುದಿಲ್ಲ. ಕೈಯಲ್ಲಿ ಮತ್ಸ್ಯ ರೇಖೆಗಳಿಲ್ಲ. ವಿಧವೆಯ ಸೂಚನೆಗಳು ಕಾಣಿಸುತ್ತಿರುವುದರಿಂದ ಆಕೆಯು ಸೀತಾಮಾತೆ ಅಲ್ಲ ಎನ್ನುವುದನ್ನು ಧೃಡಪಡಿಸಿ ಕೊಳ್ಳುತ್ತಾನೆ. ಪಾದ ಸಾಮುದ್ರಿಕ ಶಾಸ್ತ್ರದಲ್ಲಿ ಸಮುದ್ರ ಋಷಿ ತಿಳಿಸಿದ ಪ್ರಕಾರ ಕಾಲು ಪುಷ್ಟವಾಗಿರಬೇಕು, ಮಾಂಸ ತುಂಬಿರಬೇಕು, ನರ ಕಾಣುವಂತೆ ಇರಬಾರದು ಕಾಲುಗಳು ಹೊಳೆಯುತ್ತಿರಬೇಕು.ಒಡೆದ ಹಾಗೆ ಹಾಗೂ ಚರ್ಮ ಕಿತ್ತು ಬಂದ ಹಾಗೆ ಇರಬಾರದು.

ಮುಟ್ಟಿ ನೋಡಿದಾಗ ಕಾಲುಗಳು ಬಿಸಿ ಆಗಿರಬೇಕು, ತಣ್ಣಗಿರಬಾರದು, ಕಾಲುಗಳು ಸುಂದರವಾಗಿರಬೇಕು, ಕಾಲುಗಳ ಮುಂಭಾಗ ಎದ್ದಂತೆ ಇರಬೇಕು, ಚಪ್ಪಟೆಯಾಗಿರಬಾರದು. ಬೆರಳುಗಳ ಕಡೆ ಧನುಷಾಕಾರದ ತಿರುವುಗಳು ಇರಬೇಕು, ಕಾಲುಗಳಲ್ಲಿ ಬೆವರು ಬರಬಾರದು, ಕಾಲಿನ ಗಾತ್ರ ಒಂದೇ ಸಮವಾಗಿರಬಾರದು. ಕಾಲಿನ ಬೆರಳುಗಳು ಚಿಕ್ಕದಾಗಿಯೂ ಇರಬಾರದು ಅತಿ ದೊಡ್ಡದಾಗಿಯೂ ಇರಬಾರದು. ಉಗುರು ತಿರುಗಿರಬಾರದು ಹಾಗೂ ಉಗುರ ರಹಿತವಾಗಿರಬಾರದು. ಈ ರೀತಿ ಲಕ್ಷಣಗಳುಳ್ಳ ಕಾಲುಗಳನ್ನು ಹೊಂದಿದ್ದರೆ ಅವರು ಶ್ರೇಷ್ಠ ಮಾನವರಾಗಿರುತ್ತಾರೆ. ಹಿಮ್ಮಡಿಯ ಮೇಲೆ ಕಾಲಿನ ಇಕ್ಕೆಗಳ ಸಂದುಗಳು ಎದ್ದು ಕಾಣುವಂತಿರಬೇಕು. ಕಾಲಿನಲ್ಲಿ ಹೆಬ್ಬೆರಳಿನ ಪಕ್ಕದ ಬೆರಳು ಹೆಬ್ಬೆರಳಿಗಿಂತ ಚಿಕ್ಕದಾಗಿರಬೇಕು. ಉಳಿದ ಬೆರಳುಗಳು ಕ್ರಮಪ್ರಕಾರ ಎಂಟನೇ ಒಂದರಷ್ಟು ಭಾಗ ಚಿಕ್ಕದಾಗಿ ಇದ್ದರೆ ಅದನ್ನು ಶುಭ ಎಂದು ಪರಿಗಣಿಸಬಹುದು. ಇದು ಹೇಗೆ ಎಂದರೆ ದೊಡ್ಡ ಬೆರಳಿನ ಉಗುರಿನ ತಳಕ್ಕೆ ಪಕ್ಕದ ಬೆರಳು ಇರಬೇಕು.

WhatsApp Group Join Now
Telegram Group Join Now

ಹಾಗೆ ಉಗುರುಗಳು ಜೋಡಿಸಿದ ರೀತಿ ಇರಬೇಕು. ಹಿಮ್ಮಡಿಯ ತಳದಿಂದ ಹೆಬ್ಬೆರಳಿನ ತುದಿಯವರೆಗೆ ಅಂಗಾಲನ್ನು ಅಳೆದಾಗ 14 ಇಂಚು ಇರಬೇಕು. ಹಾಗೆ ಅಗಲ ಆರು ಅಂಗುಲ ವಿದ್ದರೆ ಉತ್ತಮ ಎಂದು ತಿಳಿಯಬೇಕು. ಹಿಮ್ಮಡಿಯು 4 ಅಂಗುಲ ಇರಬೇಕು ಅದಕ್ಕಿಂತ ಜಾಸ್ತಿಯೂ ಇರಬಾರದು, ಕಡಿಮೆಯೂ ಇರಬಾರದು. ಈ ವಿಷಯದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವೀಡಿಯೋವನ್ನು ಪೂರ್ತಿಯಾಗಿ ನೋಡಿ.

[irp]