ಕನ್ನಡಿಗರಿಗೆ ಇಡೀ ಜಗತ್ತನ್ನೇ ತೋರಿಸುತ್ತೇನೆ ಅಂದ ಡಾಕ್ಟರ್ ಬ್ರೋ ಯಾರು ಗೊತ್ತಾ.ಡಾಕ್ಟರ್ ಬ್ರೋ ಈ ಹೆಸರು ಸಧ್ಯಕ್ಕೆ ಯೂಟ್ಯೂಬ್ ನಲ್ಲಿ ಲೋಕದಲ್ಲಿ ಒಂದು ಸಂಚಾಲನಾತ್ಮಕ ಹೆಸರು ಡಾಕ್ಟರ್ ಬ್ರೋ ಎಂಬ ಕನ್ನಡದ ಯುಟ್ಯೂಬ್ ಚಾನಲ್ ನಲ್ಲಿ ಇದೀಗ ಲಕ್ಷಾಂತರ ಅನುಯಾಯಿಗಳು ಇರುವುದನ್ನು ನೋಡಬಹುದು. ಈ ಹುಡುಗನ ಹಠ ಛಲ ಮತ್ತು ಹೊಸ ಸ್ಥಳಗಳಿಗೆ ಹೋಗಿ ನಡೆಸುವಂತಹ ಆಪರೇಷನ್ ಇವೆಲ್ಲವೂ ಕೂಡ ಕನ್ನಡಿಗರನ್ನು ರೋಮಾಂಚನವಾಗಿಸುವಂತೆ ಮಾಡಿದೆ. ಒಬ್ಬ ಮನುಷ್ಯ ಇಷ್ಟೊಂದು ಸ್ವತಂತ್ರವಾಗಿ ಇರುವುದಕ್ಕೆ ಸಾಧ್ಯನ ಜೀವನದ ಎಲ್ಲಾ ಬಂಧನಗಳಿಂದ ಬಂಧಿತನಾಗಿದ್ದಂತಹ ವ್ಯಕ್ತಿಗಳ ನಡುವೆ ಯಾವುದೇ ರೀತಿಯಾದಂತಹ ಬಂದ ಇಲ್ಲದೆ ಸ್ವಚ್ಛಂದವಾಗಿ ಹಾರಾಡುವಂತಹ ಈ ಗಗನ್ ಯಾರು ಇತ ಹುಟ್ಟುತ್ತ ಆಗರ್ಭ ಶ್ರೀಮಂತನ ಅಥವಾ ಬಡವನಾ ಈತನ ಜೀವನದ ಹಿನ್ನೆಲೆ ಏನು ಎಂಬುದರ ಬಗ್ಗೆ ಇಂದು ನಿಮಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ.ದಿನವೂ ಕೂಡ ಒಂದಲ್ಲ ಒಂದು ಊರುಗಳಿಗೆ ಸುತ್ತುವ ಈತ ಯಾರು ಈತನಿಗೆ ಇಷ್ಟು ಹಣ ಬರುವುದಕ್ಕೆ ಹೇಗೆ ಸಾಧ್ಯ ಬಹುಶಃ ಈತ ಒಬ್ಬ ಆಗರ್ಭ ಶ್ರೀಮಂತನ ಮಗನೆ ಇರಬೇಕು ಅಂತ ಬಹಳಷ್ಟು ಜನ ಅಂದುಕೊಂಡಿದ್ದರು. ಆದರೆ ನಾವೆಲ್ಲರೂ ಅಂದುಕೊಂಡಿರುವುದು ಅಕ್ಷರಸಹ ಸುಳ್ಳು ಅಂತನೇ ಹೇಳಬಹುದು ಅಷ್ಟಕ್ಕೂ ಈ ವ್ಯಕ್ತಿ ಯಾರು ಈತನ ಜೀವನದ ಮೂಲ ಉದ್ದೇಶ

ಏನು ಪ್ರಪಂಚವನ್ನೇ ಸುತ್ತುವಂತಹ ಗುರಿಯನ್ನು ಹೊಂದಿರುವುದು ಯಾಕೆ ಗೊತ್ತ.? ಪರ್ಯಾಟನೆಗೆ ಸಂಬಂಧಪಟ್ಟಂತಹ ಹಲವಾರು ವಿಡಿಯೋಗಳನ್ನು ಮಾಡಿರುವಂತಹ ಡಾಕ್ಟರ್ ಬ್ರೋ ಮನೆ ಮನೆ ಮಾತಾಗಿರುವ ಗಗನ್ ಅವರು ಮೂಲತಹ ಬೆಂಗಳೂರಿನ ಗ್ರಾಮಾಂತರ ಪ್ರದೇಶದ ಒಂದು ಪುಟ್ಟ ಹಳ್ಳಿಯವರು. ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿದವರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದಂತಹ ವ್ಯಕ್ತಿ. ಇವರ ರಂದೆ ಶ್ರೀನಿವಾಸ ತಾಯಿ ಪದ್ಮಾವತಿ ಅವರ ಇಬ್ಬರು ಪುತ್ರರಲ್ಲಿ ಗಗನ್ ಅವರು ಹಿರಿಯವರು ಎರಡನೇ ಪುತ್ರ ವಿದ್ಯಾಭ್ಯಾಸದಲ್ಲಿ ನಿರತರಾಗಿದ್ದಾರೆ. ಇನ್ನು ಗಗನ್ ಅವರ ತಂದೆ ಶ್ರೀನಿವಾಸ್ ಅವರು ಒಂದು ದೇವಸ್ಥಾನದಲ್ಲಿ ಪೂಜಾರಿಯಾಗಿದ್ದಾರೆ ಮೂಲತಃ ಧಾರ್ಮಿಕ ಕುಟುಂಬದವರೇ ಆಗಿದ್ದಂತಹ ಕಾರಣ ಗಗನ್ ಅವರು ಸುಮಾರು ಎರಡನೇ ತರಗತಿ ಓದುತ್ತಿರುವಾಗಲೇ ತಮ್ಮ ತಂದೆಯ ಜೊತೆ ದೇವಸ್ಥಾನಕ್ಕೆ ಹೋಗಿ ವಿಧಿವಿಧಾನಗಳನ್ನು ನಡೆಸುತ್ತಿದ್ದರು. ಕೆಲವೊಮ್ಮೆ ತಂದೆ ಇಲ್ಲದೆ ಇರುವಂತಹ ಅನುಪಸ್ಥಿತಿಯಲ್ಲಿ ಗಗನ್ ಅವರ ದೇವಸ್ಥಾನಕ್ಕೆ ಹೋಗಿ ಪೂಜೆ ಪುನಸ್ಕಾರಗಳನ್ನು ಮಾಡಿ ಅಲ್ಲಿ ಬರುವಂತಹ ಭಕ್ತಾದಿಗಳಿಗೆ ಅರ್ಚನೆ ಮತ್ತು ಪೂಜೆಯನ್ನು ಮಾಡಿಕೊಡುತ್ತಿದ್ದರು.

By admin

Leave a Reply

Your email address will not be published. Required fields are marked *