ನಿಮ್ಮ ಬ್ಲಡ್ ಗ್ರೂಪ್ ನೀವು ಎಂಥವರು ಅಂತ ಹೇಳುತ್ತೆ.ಮನುಷ್ಯನ ರಕ್ತದಲ್ಲಿ ಎರಡು ವಿಧವಾದ ಆಂಟಿಜನ್ಸ್ ಇರುತ್ತದೆ A ಮತ್ತು B ಈ ಆಂಟಿಜನ್ಸ್ ನಿಮ್ಮ ರಕ್ತದಲ್ಲಿ ಇದಿಯಾ ಇಲ್ಲವಾ ಅನ್ನೋದನ್ನ ನೋಡಿ ವಿಜ್ಞಾನದಲ್ಲಿ ರಕ್ತವನ್ನು 4 ಗುಂಪಾಗಿ ವಿಂಗಡಿಸಿದ್ದಾರೆ. ಅವು A,B,AB, ಮತ್ತು O. A ಗ್ರೂಪ್ ಬ್ಲಡ್ ನಲ್ಲಿ ಕೇವಲ A ಎಂಬ ಆಂಟಿಜನ್ಸ್ ಮಾತ್ರ ಇರುತ್ತದೆ. B ಗ್ರೂಪ್ನಲ್ಲಿ B ಎಂಬ ಆಂಟಿಜನ್ಸ್ ಮಾತ್ರ ಇರುತ್ತದೆ ಹಾಗೆಯೇ AB ಬ್ಲಡ್ ಗ್ರೂಪ್ ನಲ್ಲಿ ಮತ್ತು AB ಆಂಟಿಜನ್ಸ್ ಇರುತ್ತದೆ. ಆಗೆಯೆ O ಬ್ಲಡ್ ಗ್ರೂಪ್ ನಲ್ಲಿ ಯಾವುದೇ ರೀತಿಯಾದಂತಹ ಆಂಟಿಜನ್ಸ್ ಗಳು ಇರುವುದಿಲ್ಲ. ಸಾಧಾರಣವಾಗಿ A ಬ್ಲಡ್ ಗ್ರೂಪ್ ನವರು ತುಂಬಾ ಬುದ್ಧಿವಂತಿಕೆಯಿಂದ ಪ್ಯಾಶನೇಟ್ ಹಾಗು ಸೆನ್ಸಿಟಿವ್ ಆಗಿರುತ್ತಾರೆ ಪ್ರತಿ ಕೆಲಸವನ್ನು ಸರಿಯಾಗಿ ಅರ್ಥಮಾಡಿಕೊಂಡು ಯೋಚನೆ ಮಾಡಿ ಪರ್ಫೆಕ್ಟಾಗಿ ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಇವರಿಗೆ ಪ್ರತಿಯೊಂದು ಕೂಡ ನಿಯಮದ ಪ್ರಕಾರ ನೀಟಾಗಿ ನಡೆಯಬೇಕು ಇವರು ಪ್ರತಿಯೊಂದು ವಿಷಯವನ್ನು ತುಂಬಾ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಾರೆ.

B ಬ್ಲಡ್ ಗ್ರೂಪ್ ನವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಯೋಚನೆ ಮಾಡದೆ ಅರ್ಥಮಾಡಿಕೊಳ್ಳದೆ ಶಾಕಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರು ಕೇವಲ ಇವರ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ ಇವರು ತುಂಬಾ ಡಿಫರೆಂಟ್ ಪರ್ಸನ್ ಆಗಿರುತ್ತಾರೆ. ಇವರ ತಲೆಯಲ್ಲಿ ಬರುವಂತಹ ಯೋಚನೆಗಳು ಬೇರೆಯವರು ಯೋಚನೆ ಮಾಡಲಾಗುವುದಿಲ್ಲ ಇವರು ಜವಾಬ್ದಾರಿಯಿಲ್ಲದೆ ಯಾರೂ ಊಹಿಸದ ರೀತಿಯಲ್ಲಿ ಇರುತ್ತಾರೆ.

AB ಗ್ರೂಪ್ ನವರು ಇವರಿಗೆ ಇದ್ದಕ್ಕಿದ್ದಹಾಗೆ ಕೋಪ ಬರುತ್ತದೆ ತಕ್ಷಣವೇ ಸಮಾಧಾನ ಮಾಡಿಕೊಳ್ಳತ್ತಾರೆ ಇವರು ತುಂಬಾ ಕ್ಲೋಸ್ ಆಗಿ ಪರಿಚಯ ಇದ್ದರೆ ಮಾತ್ರ ಇವರ ಬಗ್ಗೆ ಹೇಳಿಕೊಳ್ಳುತ್ತಾರೆ. ಇವರಿಗೆ ಮಾನವ ನಡವಳಿಕೆಯ ಬಗ್ಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ ಇದಕ್ಕಾಗಿ ಇವರಿಗೆ ಲಾಜಿಕಲ್ ಅಬ್ಸರ್ವೇಷನ್ ಸ್ಕಿಲ್ ಇರುತ್ತದೆ. O ಬ್ಲಡ್ ಗ್ರೂಪ್ ಇವರ ರಕ್ತ ಎಂದರೆ ಸೊಳ್ಳೆಗಳಿಗೆ ತುಂಬಾ ಇಷ್ಟ ಇವರು ತುಂಬ ಡಿಫ್ರೆಂಟ್ ಆಗಿರುತ್ತಾರೆ ಇವರು ಅಷ್ಟು ಸುಲಭವಾಗಿ ಯಾರ ಹಿಡಿತಕ್ಕೂ ಸಿಗುವುದಿಲ್ಲ ಸ್ವಲ್ಪ ಕೋಪ ಜಾಸ್ತಿ ಇರುತ್ತದೆ. ಇವರು ತುಂಬ ಶಾಂತಿಯಿಂದ ಸ್ವತಂತ್ರವಾಗಿ ಇರುತ್ತಾರೆ ಇವರನ್ನು ಒಂಟಿಯಾಗಿ ಬಿಟ್ಟರು ಜೀವನವನ್ನು ನಡೆಸುತ್ತಾರೆ.

By admin

Leave a Reply

Your email address will not be published. Required fields are marked *