ಅವತ್ತು ನೋಡಿ‌ ನಕ್ಕವರೇ ಇವತ್ತು ಶಭಾಶ್ ಎನ್ನುವಂತೆ ಬೆಳೆದ ಮಲ್ಲು ಜಮಖಂಡಿ! ಕಟ್ಟಿಂಗ್ ಶಾಪ್ ಇಟ್ಟಿದ್ದ ಈ ಮಲ್ಲು ಜಮಖಂಡಿ ಇಂದು ಯೂಟ್ಯೂಬ್ ಲೋಕದ ತಾರೆ. ಮುದಲಿಸಿದವರ‌ ಎದುರೆ ಹುಬ್ಬೇರಿಸುವಂತೆ ಬೆಳೆದ ಹುಡುಗ! ಕಳೆದ 2- 3 ವರ್ಷಗಳಿಂದ ಹೊಸ ಹೊಸ ಪ್ರತಿಭೆಗಳ ಲೋಕದ ಹೊಸ ಟ್ರೆಂಡ್ ಆರಂಭವಾಗಿದೆ ಎನ್ನಬಹುದು. ನಿಜಕ್ಕು ಇದು ಪ್ರತಿಭಾವಂತರಿಗೆ ಒಂದು ಪರ್ವ ಕಾಲ ಅಥವಾ ಸುವರ್ಣ ಯುಗ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳು ಹಿಂದೆ ಎಂದು ಯಾರು ಕೂಡ ಮಾಡಲಾಗಿರದಂತಹ ಕ್ರಾಂತಿಯನ್ನು ಉಂಟು ಮಾಡಿವೆ. ಇತ್ತೀಚಿಗೆ ಹಲವಾರು ಕಲಾವಿದರುಗಳ ಬಗ್ಗೆ, ಅವರ ಬದುಕು, ಸಾಧನೆ , ಅವರು ಅಲ್ಲಿ ಅನುಭವಿಸುವಂತಹ ಕಷ್ಟಗಳು, ಅಲ್ಲಿಂದನೆ ಸಿಕ್ಕ ಯಶಸ್ಸು ಮುಮತಾದವುಗಳನ್ನು ಚರ್ಚೆ ಮಾಡಲಾಗಿತ್ತು. ಸಾಮಾಜಿಕ‌ ಜಾಲತಾಣಗಳಲ್ಲಿ ನಮ್ಮನ್ನೆಲ್ಲ ವಿಧ ವಿಧವಾಗಿ ರಂಜಿಸುವ ಕಲಾವಿದರ ಹಿಂದಿನ ಅಸಲಿ ಬದುಕು ನಮಗೆ ಕಾಣುವುದಿಲ್ಲ. ನಮ್ಮನ್ನು ರಂಜಿಸುವ ಉದ್ದೇಶದಿಂದ ಅವರು ತಮ್ಮ ಬದುಕಿನ ಎಲ್ಲವನ್ನು ತ್ಯಾಗ ಮಾಡಿ ಮುಂದೆ ಬಂದಿರುತ್ತಾರೆ. ಇಂದು ರಾಜ್ಯದ ಅನೇಕ ಭಾಗಗಳ ಕಲಾವಿದರು ಮುನ್ನೆಲೆಗೆ ಬರುತ್ತಿದ್ದಾರೆ ಅವರ ಪೈಕಿ ಉತ್ತರ ಕರ್ನಾಟಕದ ಪ್ರತಿಭೆಗಳು ಇವತ್ತು ರಾಜ್ಯದ ಮೂಲೆ ಮೂಲೆಗೂ ತಲುಪುತ್ತಿದ್ದಾರೆ.

ಎಲ್ಲೊ ಇರುವ ಉತ್ತರ ಕರ್ನಾಟಕದ ಕಲಾವಿದರಿಗೆ ಬೆಂಗಳೂರಿನಲ್ಲಿ ಅಭಿಮಾನಿಗಳ‌ಮಹಾ ದಂಡೆ ಸೃಷ್ಟಿ ಆಗಿದೆ. ಉತ್ತರ ಕರ್ನಾಟಕದ ಪ್ರತಿಭೆಗಳಲ್ಲಿ ಮಲ್ಲು ಜಮಖಂಡಿ ಕೂಡ ಪ್ರಮುಖರು. ಟಿಕ್ ಟಾಕ್ ಮೂಲಕ ಕರಿಯರ್ ಪ್ರಾರಂಭಿಸಿದ ಇವರು ಇವತ್ತು ಯೂಟ್ಯೂಬ್ ಹಾಸ್ಯ ಲೋಕದಲ್ಲಿ ಒಂದು ಸಂಚಲಾತ್ಮಕ ಹೆಸರು. ತಮ್ಮದೇ ಆದ ಒಂದು ತಂಡವನ್ನು ಕಟ್ಟಿ ಪ್ರತಿ ವೀಡಿಯೋಗಳಲ್ಲಿ ಕೂಡ ಹೊಸ ವಿಧದ ಕಂಟೆಂಟ್ ಅನ್ನು ಸೃಷ್ಟಿ ಮಾಡಿಕೊಂಡು ಅದಕ್ಕೊಂದು ಸೂಕ್ತ ಚೌಕಟ್ಟನ್ನು ರಚಿಸಿ, ಒಂದು ಕಾಮಿಡಿ ಸ್ಪೋಕ್ ಅನ್ನು ಸೃಷ್ಟಿಸಿ ರಂಜಿಸುವಲ್ಲಿ ಮಲ್ಲು ಜಮಖಂಡಿ ಅವರು ಪ್ರಮುಖರು. ಇವರು ಸೃಷ್ಟಿಸಿದ ಕಂಟೆಂಟ್ ಅಂದರೆ ಜನರು ಬಿದ್ದು ಬಿದ್ದು ನಗುತ್ತಾರೆ. ಅವರ ವೀಡಿಯೋಗಳಿಗಾಗಿ ಜನ‌ ಕಾದು ಕುಳಿತಿರುತ್ತಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಅವರಾಗಿರುವ ಇವರು ಆರಂಭದಲ್ಲಿ ಯಾವುದನ್ನು ಊಹೆ ಮಾಡಿರಲಿಲ್ಲ. ಸಾಧಾರಣ ಕುಟುಂಬದಿಂದ ಮೇಲೆ ಬಂದ ಅವರಿಗೆ ಸಿನಿಮಾದ ಹುಚ್ಚು ಬಹಳ ಇತ್ತು. ತಾನು ಕೂಡ ಸಿನಿಮಾ ಕಲಾವಿದನಾಗಬೇಕು ಎಂಬ ತುಮಲ ಅವರಲ್ಲಿತ್ತು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *