ಎಂತಹ ಬಂಗು ಕಲೆಗಳಿಗೂ 6 ಸುಲಭದ ವಿಸ್ಮಯಕಾರಿ ಮನೆ ಮದ್ದುಗಳು.ತುಂಬಾ ಜನರಿಗೆ ಈ ಒಂದು ಪಿಗ್ಮೆಂಟೇಶನ್ ಅಥವಾ ಬಂಗು ಎನ್ನುವಂತಹ ಸಮಸ್ಯೆ ಕಾಡುತ್ತಲೆ ಇರುತ್ತದೆ. ಇದಕ್ಕೋಸ್ಕರ ಡಾಕ್ಟರ್ ಬಳಿ ಹೋಗಿ ಅನೇಕ ರೀತಿಯಾದಂತಹ ಕ್ರೀಂಗಳು ಹಾಗೆಯೇ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ನಾವು ತಿಳಿಸುವುದು ಮನೆಮದ್ದುಗಳನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮುಖದ ಮೇಲೆ ಇರುವಂತಹ ಪಿಗ್ಮೆಂಟೇಶನ್ ಅಥವಾ ಬಂಗು ಎನ್ನುವಂತಹದ್ದು ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಮೊದಲನೆಯದಾಗಿ ಮುಖಕ್ಕೆ ಹಚ್ಚುವಂತಹ ಆಪಲ್ ಸೈಡರ್ ವಿನಿಗರ್ ಅನ್ನು ತೆಗೆದುಕೊಂಡು ಇದನ್ನು ಒಂದು ಟೇಬಲ್ ಸ್ಪೂನ್ ಅಷ್ಟು ಒಂದು‌ ಬೌಲ್ ಗೆ ಹಾಕಿ ನಂತರ ಒಂದು ಟೇಬಲ್ ಸ್ಪೂನ್ ಉಗುರು ಬೆಚ್ಚಗಿನ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ತೆಗೆದುಕೊಂಡು ನಿಮ್ಮ ಮುಖದಲ್ಲಿ ಎಲ್ಲಿ ಪಿಗ್ಮೆಂಟೇಶನ್ ಇರುತ್ತದೆಯೋ ಅಂತಹ ಕಡೆ ಇದನ್ನು ಚೆನ್ನಾಗಿ ಅಪ್ಲೈ ಮಾಡಿ.

ನಂತರ ಅದು ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ ಹೀಗೆ ದಿನದಲ್ಲಿ ಎರಡು ಬಾರಿ ಮಾಡಬೇಕು ನಿಮ್ಮ ಮುಖದಲ್ಲಿರುವ ಬಂಗು ಕಡಿಮೆ ಆಗುವತನಕ ರೀತಿಯಾಗಿ ನೀವು ಮಾಡಬೇಕಾಗುತ್ತದೆ. ಎರಡನೆಯದಾಗಿ ಎಲ್ಲರಿಗೂ ಆಲುವೇರ ಗೊತ್ತಿರುತ್ತದೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ನಾವು ಬೆಳೆಯುತ್ತೇವೆ ಇದನ್ನು ನೀವು ತೆಗೆದುಕೊಂಡು ರಾತ್ರಿ ಮಲಗುವ ಮುನ್ನ ಇದನ್ನು ಬಂಗು‌ ಇರುವ ಕಡೆ ಅಪ್ಲೈ ಮಾಡಿ ಆನಂತರ ಬೆಳಿಗ್ಗೆ ಎದ್ದು ತೆಗೆದುಕೊಳ್ಳಬಹುದು ಅಥವಾ ಅಂಗಡಿಯಲ್ಲಿ ಸಿಗುವಂತಹ ಆಲುವೆರಾ ಜೆಲ್ ಕೂಡ ನೀವು ಬಳಕೆ ಮಾಡಬಹುದು ಇದರಿಂದ ಮುಖದ ಮೇಲೆ ಇರುವಂತಹ ಪಿಗ್ಮೆಂಟೇಶನ್ ಸಮಸ್ಯೆ ಕಡಿಮೆಯಾಗುತ್ತದೆ.

ಮೂರನೆಯದಾಗಿ ಎಲ್ಲರ ಮನೆಯಲ್ಲೂ ಸಹ ಟೊಮ್ಯಾಟೋ ಇದ್ದೇ ಇರುತ್ತದೆ ಈ ಒಂದು ಟೊಮೆಟೋ ಹಣ್ಣನ್ನು ತೆಗೆದುಕೊಂಡು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ ನಂತರ ನಿಮಗೆ ಎಲ್ಲಿ ಬಂಗು ಇರುತ್ತದೆಯೋ ಅಂತಹಕಡೆ ಚೆನ್ನಾಗಿ ಮಸಾಜ್ ಮಾಡಿ ನಂತರ ಇದನ್ನು ಒಣಗಿಸಿ ನಂತರ ಮುಖ ತೊಳೆದುಕೊಳ್ಳಿ. ನಾಲ್ಕನೆಯದಾಗಿ ಸಾಮಾನ್ಯವಾಗಿ ಗ್ರೀನ್ ಟೀ ಬ್ಯಾಗ್ ನಿಮಗೆ ಗೊತ್ತಿರುತ್ತದೆ ಪುಟ್ಟದಾಗಿ ಇರುತ್ತದೆ ಈ ಒಂದು ಗ್ರೀನ್ ಟೀ ಪ್ಯಾಕ್ ಅನ್ನು ತೆಗೆದುಕೊಂಡು ಒಂದು ಲೋಟ ಬಿಸಿನೀರನ್ನು ಚೆನ್ನಾಗಿ ಕಾಯಿಸಿ ಅದರಲ್ಲಿ ಐದು ನಿಮಿಷಗಳ ಇಟ್ಟು ನಂತರ ಪ್ಯಾಕ್ ತೆಗೆದು ತಣ್ಣಗಾದ ನಂತರ ನಿಮ್ಮ ಮುಖದಲ್ಲಿ ಬಂಗು ಇರುವಕಡೆ ಮಸಾಜ್ ಮಾಡಿಕೊಳ್ಳಿ.

By admin

Leave a Reply

Your email address will not be published. Required fields are marked *