ಗಂಡ ನಿಮ್ಮ ಮಾತು ಕೇಳಬೇಕೇ, ಸಾತ್ವಿಕ ವಿಧಾನದಲ್ಲಿ ಉಪಾಯ ಮಾಡಿ.ಗಂಡನನ್ನು ನಂಬಿ ಹೆತ್ತ ತಂದೆ, ತಾಯಿ, ಮನೆ, ಮಠ ಕುಲಬಾಂಧವರನ್ನು ಬಿಟ್ಟು ಮದುವೆಯಾಗಿ ಅರ್ಧಾಂಗಿಯಾಗಿ, ಧರ್ಮಪತ್ನಿಯಾಗಿ ಕಷ್ಟ ಸುಖಕ್ಕೆ ಭಾಗಿಯಾಗಿ ಸಪ್ತ ಸಾಗರದಲ್ಲಿ ಮುಳುಗಿ ಬದುಕಬೇಕು ಎಂದು ಹೆಜ್ಜೆಯನ್ನಿಡುತ್ತಾ ಒಂದು ಹೆಣ್ಣು ಮಗಳು ಗಂಡನ ಮನೆಗೆ ಬರುತ್ತಾಳೆ. ಪ್ರಥಮದಲ್ಲಿ ಸುಖ, ಸಂತೋಷ, ನೆಮ್ಮದಿಯನ್ನು ಸಿಗಬಹುದು ಅದಾದ ಬಳಿಕ ಕೆಲವೊಂದಷ್ಟು ಗೊಂದಲಗಳು ಪ್ರಾರಂಭವಾಗುತ್ತದೆ. ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಹೊಂದಿಕೊಂಡು ಪ್ರೀತಿ, ವಿಶ್ವಾಸ ಅನ್ಯೋನ್ಯತೆಯಿಂದ ಜೀವನ ಸಾಗಬೇಕು ಎಂದು ಅಂದುಕೊಂಡರೆ ಈ ಒಂದು ವಿಧಾನವನ್ನು ನಿಮ್ಮ ಮನೆಯಲ್ಲಿ ಮಾಡಬೇಕು. ಗಂಡ, ಹೆಂಡತಿ ಕಷ್ಟ ಸುಖದಲ್ಲಿ ಸಮಪಾಲು ಹಂಚಿಕೊಂಡು ಹೋಗುವಂತಹದ್ದು ಧರ್ಮ ಆದರೆ ಗಂಡ ಎನ್ನುವಂತಹ ಪ್ರಾಣಿ ಕೋಪ ಆವೇಶಕ್ಕೆ ಬಲಿಯಾ ಪತ್ನಿಯನ್ನು ಅನುಮಾನದ ದೃಷ್ಟಿಯಿಂದ ನೋಡುವಂತಹದ್ದು, ಮಾನಸಿಕವಾಗಿ ನರಳಿಸುವುದು.

ತನ್ನ ಮಾತು ಜ್ಞಾನ, ಅಹಂಕಾರ, ತನ್ನ ಕೆಟ್ಟ ಬುದ್ಧಿ, ದುರಾಲೋಚನೆ, ದುಷ್ಟತನದಿಂದ ರಾವಣನಾಗಿ ನಿಲ್ಲುವಂತಹ ಪ್ರವೃತ್ತಿಯನ್ನು ಹೊಂದಿರುತ್ತಾನೆ. ನಿಮ್ಮ ಗಂಡ ನಿಮ್ಮ ಮಾತನ್ನು ಕೇಳಬೇಕು ನಿಮ್ಮ ಮಾತನ್ನು ಗೌರವಿಸಬೇಕು ಎಂದರೆ ಈ ಒಂದು ವಿಧಾನವನ್ನು ಮಾಡಬೇಕು. ನೀವು 48 ದಿನ ಅಥವಾ 21 ದಿನಗಳ ಕಾಲ ಮನೆಯಲ್ಲಿ ಸಂಜೆ ಗೋಧೂಳಿ ಸಮಯದಲ್ಲಿ ತಪ್ಪದೆ ಬಿಳಿ ಸಾಸಿವೆ ಹಾಗು ಲೋಬಾನ ತಪ್ಪದೆ ಮನೆಯಲ್ಲಿ ಹಾಕಬೇಕು ಅಂದರೆ ಬಿಳಿ ಸಾಸಿವೆಯನ್ನು ನಿಮ್ಮ ಮನೆಯ ಬಾಗಿಲ ಹತ್ತಿರ ಹಾಗು ಲೋಬಾನವನ್ನು ನಿಮ್ಮ ಮನೆಯ ಬಾಗಿಲ ಹತ್ತಿರ ಉದುರಿಸಬೇಕು ಹಾಗೆಯೇ ಲೋಬಾನದ ಹೊಗೆಯನ್ನು ಕೆಂಡಕ್ಕೆ ಹಾಕುವುದರಿಂದ ಹೊಗೆ ಉದ್ಭವವಾಗುತ್ತದೆ.

ನಿಮ್ಮ ಯಜಮಾನರ ಹೆಸರು ನಿಮ್ಮ ಮಕ್ಕಳ ಹೆಸರನ್ನು ಹೇಳಿ ಯಾರು ನಿಮಗೆ ಮನೆಯಲ್ಲಿ ತೊಂದರೆ ಮಾಡುತ್ತಿರುತ್ತಾರೆ ಅವರ ಹೆಸರು ಹೇಳಿ ಕೆಂಡಕ್ಕೆ ಲೋಬಾನದ ಸಮೇತ ಬಿಳಿ ಸಾಸಿವೆಯನ್ನು ಸ್ವಲ್ಪ ಹಾಕಿ ಮನೆಯಲ್ಲಿ ಪೂರ್ಣವಾಗಿ ಹೋಗಿಬಿಡಿ, ಮನೆಯಲ್ಲಿ ನಿಮ್ಮ ಯಜಮಾನರು ಇರುವಂತಹ ಸಂದರ್ಭದಲ್ಲಿ ಈ ಒಂದು ವಿಧಾನವನ್ನು ಮಾಡಿ ಇದರಿಂದ ನಿಮ್ಮ ಗಂಡನ ದುರ್ಬುದ್ಧಿ, ದುರಾಲೋಚನೆ, ದುಷ್ಟತನ ಎನ್ನುವಂತಹದ್ದು ದೂರವಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಮಕ್ಕಳು ಸಹ ನಿಮ್ಮ ಮಾತು ಕೇಳದೆ ಇದ್ದರೆ ಅವರು ಸಹ ಈ ಒಂದು ವಿಧಾನದಿಂದ ಅನುಸರಿಸಬೇಕು.

By admin

Leave a Reply

Your email address will not be published. Required fields are marked *