2050ರಲ್ಲಿ ಹೀಗಿರಲಿದೆ ಕಲಿಯುಗ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಹೇಳಿದ ಕಲಿಯುಗದ ಘೋರ ಸತ್ಯಗಳು.ನಾಲ್ಕು ಯುಗಗಳ ಬಗ್ಗೆ ಈ ಹಿಂದೆಯೇ ಭಗವಾನ್ ಶ್ರೀಕೃಷ್ಣ ಮೊದಲೇ ಹೇಳಿದ್ದಾರೆ ಹಿಂದೂ ಧರ್ಮದಲ್ಲಿ ಈ ನಾಲ್ಕು ಯುಗಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ. ಈ ನಾಲ್ಕು ಯುಗಗಳು ಯಾವುದು ಅಂದರೆ ಸತ್ಯಯುಗ, ತ್ರೇತಯುಗ, ದ್ವಾಪರಯುಗ ಮತ್ತು ಕಲಿಯುಗ, ನಾವು ಪ್ರಸ್ತುತ ಕಲಿಯುಗದಲ್ಲಿ ವಾಸ ಮಾಡುತ್ತಿದ್ದೇವೆ ಎಂಬ ವಿಚಾರ ಎಲ್ಲರಿಗೂ ಕೂಡ ತಿಳಿದೇಯಿದೆ. ಇನ್ನು ಈ ಯುಗ ಎಂಬ ಪದವು ಭಗವದ್ಗೀತೆ ಮತ್ತು ಸೂರ್ಯ ಸಿದ್ಧಾಂತಗಳಲ್ಲಿ ಬಳಕೆಯಾಗಿರುವುದನ್ನು ನೋಡಬಹುದಾಗಿದೆ. ಸಂಸ್ಕೃತದಲ್ಲಿ ಯುಗ ಅಂದರೆ ಎರಡು ಆಯಾಮಗಳಲ್ಲಿ ಸೃಷ್ಟಿಯಾಗುವಂತಹ ಪೀಳಿಗೆ ಹಾಗೂ ದೀರ್ಘಾವಧಿಯಲ್ಲಿ ವಿವರಣೆ ಮಾಡುವುದಕ್ಕೆ ಈ ಯುಗ ಎಂಬ ಪದವನ್ನು ಬಳಕೆ ಮಾಡಲಾಗುತ್ತದೆ. ಯುಗಗಳ ಬಗ್ಗೆ ಶ್ರೀಕೃಷ್ಣ ಪರಮಾತ್ಮನು ಪಾಂಡವರಿಗೆ ಯಾವ ರೀತಿ ವಿವರಿಸುತ್ತಾರೆ ಎಂಬುವುದನ್ನು ನೋಡುವುದಾದರೆ.

ಕಲಿಯುಗದ ಆಯಸ್ಸು 4 ಲಕ್ಷದ 32 ಸಾವಿರ ವರ್ಷ ಆಯಸ್ಸು ತದನಂತರ ಸತ್ಯಯುಗ ಎಂಬ ಯುಗವು ಪ್ರಾರಂಭವಾಗುತ್ತದೆ ಯುಗದ ಆಯಸ್ಸು ಕಲಿಯುಗದ ಕಾಲಕಿಂತ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಾಗಿರುವುದನ್ನು ನೋಡಬಹುದಾಗಿದೆ. ಅಂದರೆ ಒಟ್ಟು ಮೂವತ್ತೆರಡು ಲಕ್ಷ ವರ್ಷ ಈ ಯುಗವನ್ನು ಬಂಗಾರದ ಯುಗ ಎಂದು ವರ್ಣಿಸಲಾಗಿದೆ. ಈ ಯುಗದಲ್ಲಿ ಮನುಷ್ಯನ ಆಯಸ್ಸು ಬರೋಬ್ಬರಿ 500 ವರ್ಷಗಳು ಇರುತ್ತದೆ ಅಷ್ಟೇ ಅಲ್ಲದೆ ನಮಗೆ ತಿಳಿದಿರುವ ಪ್ರಕಾರ ಪುರಾಣಗಳಲ್ಲಿ 12 ಲೋಕಗಳು ಹಾಗೂ ನಾಲ್ಕು ಯುಗಗಳು ಇರುತ್ತದೆ. ಬ್ರಹ್ಮ ಮಾನದ ಕಾಲಕ್ಕೂ ಹಾಗೂ ಭೂಮಿಯ ಮೇಲೆ ಇರುವಂತಹ ಕಾಲಕ್ಕೂ ರೋಚಕವಾದಂತಹ ವ್ಯತ್ಯಾಸವಿದೆ. ಇನ್ನು ಯುಗಗಳ ಬಗ್ಗೆ ನೋಡುವುದಾದರೆ ರಾಮಾಯಣ ನಡೆದಂತಹ ಕಾಲವನ್ನು ನಾವು ತ್ರೇತಾಯುಗ ಅಂತ ಹೇಳುತ್ತೇವೆ.

ಕೌರವರು ಮತ್ತು ಪಾಂಡವರ ನಡುವೆ ನಡೆದಂತಹ ಕುರುಕ್ಷೇತ್ರದ ಯುದ್ಧದ ಕಾಲವನ್ನು ನಾವು ದ್ವಾಪರಯುಗ ಎಂದು ಕರೆಯುತ್ತೇವೆ ಶ್ರೀಕೃಷ್ಣನ ಅಂತ್ಯದ ನಂತರ ಮತ್ತು ಶ್ರೀಕೃಷ್ಣ ವಾಸಮಾಡುತ್ತಿದ್ದಂತಹ ದ್ವಾರಕೆಯ ಅಂತ್ಯದ ನಂತರ ಕಲಿಯುಗ ಪ್ರಾರಂಭವಾಗುತ್ತದೆ. ಇನ್ನು ಪುರಾಣಗಳಲ್ಲಿ 4 ಯುಗಗಳನ್ನು ಹೇಗೆ ವಿವರಿಸಲಾಗಿದೆ ಎಂಬುವುದನ್ನು ನೋಡುವುದಾದರೆ ಮೊದಲನೆಯ ಸತ್ಯಯುಗ ಹೆಸರೇ ಸೂಚಿಸುವಂತೆ ಇಲ್ಲಿ ಸತ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಮತ್ಸ್ಯ ಅವತಾರ, ಕೂರ್ಮ ಅವತಾರ, ನರಸಿಂಹನ ಅವತಾರ ಈ ಅವತಾರಗಳನ್ನು ಭಗವಾನ್ ಶ್ರೀ ವಿಷ್ಣು ಅವತರಿಸಿದ್ದು ಇದೇ ಸತ್ಯಯುಗದಲ್ಲಿ.

By admin

Leave a Reply

Your email address will not be published. Required fields are marked *