ಸೀತಾ ಮಾತೆ ನೀಡಿದಂತಹ 4 ಶಾಪಗಳು ಯಾವುದು ಅರಳಿಮರ ಯಾಕೆ ಎಂದಿಗೂ ಕೂಡ ಬಾಡುವುದಿಲ್ಲ.?ನಮ್ಮ ಭೂಮಿಯ ಮೇಲೆ ಸಾಕಷ್ಟು ಮರ ಇರುವುದನ್ನು ನಾವು ನೋಡಬಹುದು ಆದರೆ ಅರಳಿಮರ ವಿಶೇಷವಾದಂತಹ ಸ್ಥಾನಮಾನವನ್ನು ಪಡೆದಿದೆ ಇದಕ್ಕೆ ಮುಖ್ಯ ಕಾರಣ ಅಂದರೆ ಬ್ರಹ್ಮ, ವಿಷ್ಣು, ಮಹೇಶ್ವರ ಈ ಮೂರ್ತಿಗಳು ಕೂಡ ಒಂದೇ ಮರದಲ್ಲಿ ವಾಸವಾಗಿದೆ ಈ ಒಂದು ಕಾರಣಕ್ಕಾಗಿಯೇ ಅರಳಿ ಮರಕ್ಕೆ ವಿಶೇಷವಾದಂತಹ ಸ್ಥಾನಮಾನವನ್ನು ಶಾಸ್ತ್ರಗಳಲ್ಲಿ ನೀಡಲಾಗಿದೆ. ಈ ಒಂದು ಕಾರಣಕ್ಕಾಗಿಯೇ ನಾವು ಪ್ರತಿನಿತ್ಯ ಅರಳಿ ಮರವನ್ನು ಸುತ್ತ ಬೇಕಾದರೆ “ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣುರೂಪಿಣಿ ಅಗ್ರತಃ ಶಿವರೂಪಾಯ ವೃಕ್ಷರಾಜಯಾ ತೇ ನಮಃ” ಎಂಬ ಮಂತ್ರವನ್ನು ಪಠನೆ ಮಾಡುತ್ತೇವೆ. ಇನ್ನು ಅರಳಿ ಮರವನ್ನು ಬೆಳಗಿನ ಸಮಯ ಮಹಿಳೆಯರು ಪ್ರದಕ್ಷಣೆ ಹಾಕುವುದನ್ನು ನಾವು ನೋಡಬಹುದು ಈ ರೀತಿ ಪ್ರದಕ್ಷಿಣೆ ಹಾಕುವುದರಿಂದ ಅವರ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಅಷ್ಟೇ ಅಲ್ಲದೆ ವಿವಾಹವಾಗದೆ ಇರುವಂತಹ ಕನ್ಯೆಯರು ಈ ಅರಳಿ ಮರವನ್ನು ಸುತ್ತುವುದರಿಂದ ಅವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ನಂಬಿಕೆ ಇದೆ.

ಕೇವಲ ಇದಿಷ್ಟು ಮಾತ್ರವಲ್ಲದೆ ಯಾರು ಉತ್ತಮವಾದಂತಹ ಉದ್ಯೋಗವನ್ನು ಪಡೆದುಕೊಳ್ಳಬೇಕು ಅಂತ ಅಂದುಕೊಂಡಿರುತ್ತಾರೆ ಅವರು ಕೂಡ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದರಿಂದ ಅವರ ಮನಸ್ಸಿನಲ್ಲಿ ಇರುವಂತಹ ಇಚ್ಛೆಗಳು ನೆರವೇರುತ್ತದೆ ಎಂಬ ನಂಬಿಕೆ ಇದೆ. ಇದರ ಜೊತೆಗೆ ಬೆಳಗಿನ ಸಮಯದಲ್ಲಿ ಅರಳಿ ಮರದ ಸುತ್ತಲೂ ಕೂಡ 3, 4 ಸುತ್ತು ಹಾಕುವುದರಿಂದ ಆರೋಗ್ಯವೃದ್ಧಿಯಾಗುತ್ತದೆ ಇನ್ನು ಮದುವೆಯಾದಂತಹ ಸುಮಂಗಲಿಯರು ಅರಳಿ ಮರಕ್ಕೆ ಹೋಗಿ ಪೂಜೆ-ಪುನಸ್ಕಾರ ಮಾಡುವುದರಿಂದ ಅವರ ಪತಿಯ ಆಯಸ್ಸು ದೀರ್ಘಕಾಲದವರೆಗೂ ಕೂಡ ಇರುತ್ತದೆ ಎಂಬ ನಂಬಿಕೆಯಿದೆ. ಈ ಒಂದು ಕಾರಣಕ್ಕಾಗಿಯೇ ಇಂದು ಧರ್ಮದಲ್ಲಿ ಅರಳಿ ಮರಕ್ಕೆ ವಿಶೇಷವಾದಂತಹ ಪೂಜೆಗಳನ್ನು ಮತ್ತು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.

ಸಾಮಾನ್ಯವಾಗಿ ಪ್ರಕೃತಿಯಲ್ಲಿ ಇರುವಂತಹ ಮರ-ಗಿಡಗಳು ನೀರು ಇಲ್ಲದೇ ಇದ್ದರೆ ಬಾಡಿ ಹೋಗುವುದು ಅಥವಾ ಒಣಗಿ ಹೋಗುವುದನ್ನು ನೋಡಬಹುದು. ಆದರೆ ಅಶ್ವತಮರ ವರ್ಷಾನುಗಟ್ಟಲೆ ನೀರು ಇಲ್ಲದೆ ಇದ್ದರೂ ಕೂಡ ಸ್ವಲ್ಪವೂ ಬಾಡುವುದಿಲ್ಲ ಇದಕ್ಕೆ ಮುಖ್ಯ ಕಾರಣ ಏನು ಅಂದರೆ ಇದಕ್ಕೆ ಸೀತಾಮಾತೆಯ ಅನುಗ್ರಹ ಇರುವುದು. ಸೀತಾಮಾತೆ ವರವನ್ನು ನೀಡಿದ್ದಾರೆ ಅದೇನೆಂದರೆ ವರ್ಷವಾದರೂ ಕೂಡ ನೀರು ಇಲ್ಲದೆ ಇದ್ದರೂ ಕೂಡ ನೀನು ಬದುಕಬಹುದು ನೀನು ಎಂದಿಗೂ ಕೂಡ ಬಾಡುವುದಿಲ್ಲ ಎಂಬ ವರರನ್ನು ನೀಡಿದ್ದಾಳೆ. ಈ ವರವನ್ನು ರಾಮಾಯಣದ ಕಾಲದಲ್ಲಿ ನೀಡಿದ್ದಳು ಎಂಬ ಪ್ರತೀತಿಯಿದೆ ಈ ಒಂದು ಕಾರಣಕ್ಕಾಗಿಯೇ ಇಂದಿಗೂ ಕೂಡ ಎಲ್ಲಿಯೂ ಕೂಡ ಅರಳಿಮರ ಒಣಗಿದಂತಹ ಇತಿಹಾಸವೇ ಇಲ್ಲ.

By admin

Leave a Reply

Your email address will not be published. Required fields are marked *