ಮನೆ ಹತ್ತಿರ ಈ ಗಿಡದ ಎಲೆಗಳು ಸಿಕ್ಕರೆ ಈಗಲೇ ತಂದು ಬಳಸಿ ಯಾಕೆಂದರೆ.ಭಾರತೀಯ ನಾಟಿ ವೈದ್ಯ ಪದ್ಧತಿ ಹಾಗೂ ಆಯುರ್ವೇದ ಚಿಕಿತ್ಸೆಯಲ್ಲಿ ಬೇವಿನಮರದ ಪ್ರತಿ ಭಾಗಗಳನ್ನು ಸುಮಾರು 200 ವರ್ಷಗಳ ಹಿಂದಿನಿಂದಲೂ ಬಳಕೆ ಮಾಡುತ್ತಲೇ ಇದ್ದಾರೆ ಬೇವಿನಮರದ ಅಂಗಗಳಾದ ಎಲೆ, ತೊಗಟೆ, ಹೂವು, ಹಣ್ಣು, ಕಡ್ಡಿ, ಬೀಜ, ಎಣ್ಣೆ ಹಾಗೂ ಬೇರುಗಳು ಔಷಧೀಯ ಗುಣಗಳು ಹೊಂದಿರುತ್ತದೆ. ವೈದ್ಯಕೀಯ ಲೋಕಕ್ಕೆ ಬೇವು ಒಂದು ಅದ್ಭುತವಾದಂತಹ ಮರ, ಬೇವಿನ ಮರದಲ್ಲಿ ಸುಮಾರು 135ಕ್ಕು ಹೆಚ್ಚು ರೋಗ ನಿವಾರಕ ಗುಣಗಳು ಇದೆ ಎಂದು ಇತ್ತೀಚಿನ ವರದಿಯ ಪ್ರಕಾರ ತಿಳಿದುಬಂದಿದೆ. ಬೇವಿನ ಮರವು ನಮ್ಮ ಮನೆಯ ಸುತ್ತಮುತ್ತ ಇದ್ದರೆ ನಮ್ಮ ಸುತ್ತಮುತ್ತಲಿನ ಪರಿಸರವು ಕೂಡ ಶುದ್ಧವಾಗಿ ಇರುವುದರ ಜೊತೆಗೆ ವಾಯುವಿನ ಮೂಲಕ ಬರುವ ವೈರಸ್ ಗಳನ್ನು ಈ ಮರದ ಎಲೆಗಳು ಬಡಿದೋಡಿಸುತ್ತದೆ ಮತ್ತು ಬೇವಿನ ಎಲೆಗಳಿಗೆ ತುರಿಕೆಯನ್ನು ನಿವಾರಿಸುವಂತಹ ಶಕ್ತಿ ಇದೆ.

ಬೇವಿನ ಎಲೆಗಳನ್ನು ಅರೆದು ಲೇಪ ತಯಾರಿಸಿ ತುರಿಕೆ ಇರುವ ಸ್ಥಳಕ್ಕೆ ಹಚ್ಚಬೇಕು ಇದನ್ನು ಹಚ್ಚಿದ ನಂತರ ಒಂದು ಗಂಟೆಯ ಕಾಲ ಹಾಗೆ ಬಿಟ್ಟರೆ ಇದರಿಂದ ತುರಿಕೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ನಂತರ ಇದನ್ನು ತಣ್ಣೀರಿನಿಂದ ತೊಳೆಯಬೇಕು. ಬೇವಿನ ಎಲೆಗಳನ್ನು ಸೇವನೆ ಮಾಡುವುದರಿಂದ ನಮ್ಮ ಲಿವರ್ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೆಯೇ ಜೀರ್ಣಕ್ರಿಯೆಯನ್ನು ಸಹ ಉತ್ತಮಗೊಳಿಸುತ್ತದೆ. ಇನ್ನು ಕಣ್ಣಿನ ಉರಿ ಇದ್ದರೆ ಅಥವಾ ಕಣ್ಣು ಕೆಂಪಾಗಿದ್ದರೆ ಕಹಿ ಬೇವನ್ನು ಸೇವನೆ ಮಾಡುವುದರಿಂದ ಶಮನವಾಗುತ್ತದೆ, ಹಾಗೆಯೆ ದೃಷ್ಟಿ ಉತ್ತಮವಾಗುತ್ತದೆ ಮತ್ತು ಮುಖದಲ್ಲಿ ಮೊಡವೆಗಳಿದ್ದರೆ ರಾಮಬಾಣವಾಗಿ ಕೆಲಸ ಮಾಡುತ್ತದೆ.

ಮುಖದಲ್ಲಿ ಮೊಡವೆಗಳು ಇದ್ದರೆ ಬೇವಿನ ಪುಡಿಯನ್ನು ತಣ್ಣೀರಿನಲ್ಲಿ ಬೆರೆಸಿ ನುಣುಪಾದ ಲೇಪನ ತಯಾರಿಸಿ ತೆಳುವಾಗಿ ಹೆಚ್ಚಿಕೊಂಡು ರಾತ್ರಿ ಹಚ್ಚಿ ಬೆಳಿಗ್ಗೆ‌ ಎದ್ದು ತೊಳೆಯುವುದರಿಂದ ಮೊಡವೆಗಳನ್ನು ಹೋಗಲಾಡಿಸುತ್ತದೆ. ಹಾಗೆ ಕಲೆಗಳನ್ನು ಸಹ ಇದು ನಿವಾರಣೆ ಮಾಡುತ್ತದೆ. ಬೇವಿನ ಕಡ್ಡಿಗಳಿಂದ ಹಲ್ಲು ಉಜ್ಜುವುದರಿಂದ ಬಾಯಿಯ ವಾಸನೆ ತಡೆಗಟ್ಟುವುದರ ಜೊತೆಗೆ ಹಲ್ಲುಗಳು ಹುಳುಕಾಗದಂತೆ ತಡೆಗಟ್ಟುತ್ತದೆ ಮತ್ತು ನಮ್ಮ ಹಲ್ಲುಗಳು ಗಟ್ಟಿ ಮುಟ್ಟಾಗಲು ಸಹಾಯಮಾಡುತ್ತದೆ. ಅಷ್ಟೇ ಅಲ್ಲದೆ ಬೇವಿನ ಎಲೆಗಳು ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರ ಹಾಕಿ ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ. ಸೊಳ್ಳೆಗಳನ್ನು ಓಡಿಸಲು ಈ ಒಂದು ಬೇವಿನ ಸಪ್ಪಿಗೆ ಹೊಗೆ ಹಾಕುವುದರಿಂದ ತುಂಬಾ ಉತ್ತಮ.

By admin

Leave a Reply

Your email address will not be published. Required fields are marked *