ದಿನ ಭವಿಷ್ಯ ಮಂಗಳವಾರ 28 ಜೂನ್ 2022

ಮೇಷ ರಾಶಿ :- ಉದ್ಯಮಿಗಳು ಕಚೇರಿಯಲ್ಲಿ ಪ್ರತಿಕೂಲತೆಯನ್ನು ಎದುರಿಸ ಬೇಕಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಶಾಂತರೀತಿಯಲ್ಲಿ ಇಳಿಸಿಕೊಳ್ಳಿ ಆರ್ಥಿಕವಾಗಿ ಇಂದು ಸಾಮಾನ್ಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 2:15 ರಿಂದ ಸಂಜೆ 6 ರವರೆಗೆ.

ವೃಷಭ ರಾಶಿ :- ತಂದೆಯ ವ್ಯವಹಾರ ಮುಂದುವರಿಸುತ್ತಿದ್ದರೆ ನಿಮ್ಮ ತಂದೆಯ ಜೊತೆ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ. ನೀವು ಕಠಿಣ ಕಾರ್ಯಗಳು ಕೂಡ ತುಂಬಾ ಸುಲಭವಾಗಿ ನಿರ್ವಹಿಸುತ್ತಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ.

ಮಿಥುನ ರಾಶಿ :- ಸಣ್ಣ ವಿಚಾರಗಳು ಕೂಡ ನಿಮಗೆ ನೋವು ತರಬಹುದು ನೀವು ದೃಢರಾಗಿ ಇದ್ದರೆ ಉತ್ತಮ. ವ್ಯಾಪಾರಿಗಳಿಗೆ ಹೆಚ್ಚಿನ ಪರಿಹಾರ ಸಿಗುವ ಸಾಧ್ಯತೆ ಇದೆ ಆರೋಗ್ಯದ ದೃಷ್ಟಿಯಿಂದ ಇಂದು ಮಿಶ್ರ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6:45 ರಿಂದ ಮಧ್ಯಾಹ್ನ 1:20 ರವರೆಗೆ.

ಕರ್ಕಾಟಕ ರಾಶಿ :- ಇಂದು ನಿಮಗೆ ಆರ್ಥಿಕವಾಗಿ ನೆಮ್ಮದಿಯ ದಿನವಾಗಿರುತ್ತದೆ ಮನೆಯಲ್ಲಿ ಸಂತೋಷದ ವಾತಾವರಣ ವಿರುತ್ತದೆ. ಹಿರಿಯರ ಆಶೀರ್ವಾದವು ಕೂಡ ಸಿಗುತ್ತದೆ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4 ರಿಂದ ರಾತ್ರಿ 9 ರವರೆಗೆ.

ಸಿಂಹ ರಾಶಿ :- ವಿದ್ಯಾರ್ಥಿಗಳಿಗೆ ತೊಂದರೆ ಎದುರಾದರೆ ಸ್ನೇಹಿತರು ಅಥವಾ ಶಿಕ್ಷಕರೊಂದಿಗೆ ಪರಿಹಾರವನ್ನು ಪಡೆಯಬಹುದು. ನೌಕರಸ್ಥರಿಗೆ ಶುಭ ದಿನವಾಗಲಿದೆ ಹಣಕಾಸಿನ ಸಮಸ್ಯೆ ಇಂದು ಪರಿಹಾರವಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 8:45 ರಿಂದ 12.30 ರವರೆಗೆ.

ಕನ್ಯಾ ರಾಶಿ :- ಕಚೇರಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ವ್ಯಾಪಾರಿಗಳು ತರಾತುರಿಯಿಂದ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಚಿಲ್ಲರೆ ವ್ಯಾಪಾರಿಗಳಿಗೆ ಎಂದು ಉತ್ತಮವಾದ ಲಾಭ ಸಿಗಲಿದೆ ಮನೆಯ ವಾತಾವರಣ ಸಂತೋಷಕರವಾಗಿ ಇರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1.30 ರಿಂದ ಸಂಜೆ 7 ರವರೆಗೆ.

ತುಲಾ ರಾಶಿ :- ಇಂದು ನೀವು ಹಣದ ದೃಷ್ಟಿಯಿಂದ ಉತ್ತಮವಾದ ಫಲವನ್ನು ಪಡೆಯಬಹುದು. ಮನೆಯ ವಾತಾವರಣದಲ್ಲಿ ಕೆಲವು ಬದಲಾವಣೆ ಉಂಟಾಗುತ್ತದೆ. ಉದ್ಯೋಗಸ್ಥರು ಕೆಲವು ಮಾಹಿತಿಗಳನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 12 ರಿಂದ ಸಂಜೆ 5.15 ರವರೆಗೆ.

ವೃಶ್ಚಿಕ ರಾಶಿ :- ಇಂದು ನೀವು ಅಪೂರ್ಣಗೊಂಡಿರುವ ಕೆಲಸವನ್ನು ಪೂರ್ಣಗೊಳಿಸಿ ಆರ್ಥಿಕವಾಗಿ ಇಂದು ನಿಮಗೆ ವಿಶೇಷವಾದ ದಿನವಲ್ಲ. ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಗೆ ಹೆಚ್ಚಿನ ಸಮಯ ನೀಡಿ ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8:45 ರಿಂದ ಮಧ್ಯಾಹ್ನ 2.30 ರವರೆಗೆ.

ಧನಸು ರಾಶಿ :- ಸೋಮಾರಿತನವನ್ನು ತಪ್ಪಿಸಿ ನಿಮ್ಮನ್ನು ನೀವು ಉತ್ಸಾಹದಿಂದ ಇಟ್ಟುಕೊಳ್ಳು ಪ್ರಯತ್ನಿಸಿ. ಯೋಗ ಮಾಡಿದರೆ ಉತ್ತಮ. ಉದ್ಯೋಗಿಗಳ ಕೆಲಸದಲ್ಲಿ ಅಡತಡೆ ಉಂಟಾಗಬಹುದು ಶೀಘ್ರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3 ರಿಂದ 6:15 ರವರೆಗೆ.

ಮಕರ ರಾಶಿ :- ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿದರೆ ಉತ್ತಮ ಮುಖ ಮುಖೀ ಚರ್ಚೆಗಳಲ್ಲಿ ಪಾಲ್ಗೊಳ್ಳಬೇಡಿ. ಹಣದ ಹರಿವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 2 ರಿಂದ 4.30 ರವರೆಗೆ.

ಕುಂಭ ರಾಶಿ :- ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿ ಕೊಳ್ಳಬೇಕು. ನಿಮ್ಮ ಮಾತಿನ ಮೇಲೆ ಗಮನವಿರಲಿ ಕಚೇರಿಯಲ್ಲಿ ಅವಸರ ಮಾಡಬೇಡಿ ವ್ಯಾಪಾರಿಗಳಿಗೆ ಇಂದು ಲಾಭ ಸಿಗಲಿದೆ ಮನೆಗೆ ಕೆಲಸದ ಒತ್ತಡವನ್ನು ತರಬೇಡಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ರವರೆಗೆ.

ಮೀನ ರಾಶಿ :- ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ ವ್ಯಾಪಾರಿಗಳಿಗೆ ಲಾಭ ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿ ಇರುತ್ತದೆ, ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ಕಳೆಯುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಿಗ್ಗೆ 7.30 ರಿಂದ 1 ರವರೆಗೆ.

By admin

Leave a Reply

Your email address will not be published. Required fields are marked *