ಮಕರ ರಾಶಿಯವರಿಗೆ ಜುಲೈ ತಿಂಗಳ ಎಚ್ಚರಿಕೆಗಳು.ಮೊದಲನೆಯದಾಗಿ ಮಕರ ರಾಶಿಯವರಿಗೆ ಎಲ್ಲಾ ವಿಚಾರದಲ್ಲೂ ಕೂಡಾ ತಾತ್ಸಾರದ ಬುದ್ಧಿ ಬರುತ್ತದೆ. ಪ್ರತಿನಿತ್ಯ ಮಾಡುವಂತಹ ಕೆಲಸ ಕಾರ್ಯಗಳು ಕೂಡ ತಾತ್ಸಾರ ಮನೋಭಾವ ಬರುತ್ತದೆ. ಇದನ್ನೆಲ್ಲಾ ಬಿಟ್ಟು ಯಾವುದೇ ಕೆಲಸ ಕಾರ್ಯ ಆಗಲಿ ಯಾವುದೇ ವಿಚಾರದಲ್ಲಾದರೂ ಕೂಡ ಮುನ್ನುಗ್ಗಬೇಕು ಆದಾಗ ಮಾತ್ರ ಅವರು ಮುಂದುವರೆಯಲು ಸಾಧ್ಯವಾಗುತ್ತದೆ ಇಲ್ಲ ಎಂದರೆ ಅವರು ಹಿಂದೆ ಉಳಿಯುತ್ತಾರೆ. ಏನೆ ಕೆಲಸ ಆದರೂ ನಾನು ಇದನ್ನ ಮಾಡಲೇಬೇಕು ಮಾಡಿ ತೀರಿಸಲೇಬೇಕು ಎಂಬ ಚೈತನ್ಯ ಶಕ್ತಿ ನಿಮ್ಮ ಒಳಗಡೆ ಬರಬೇಕು. ಇಲ್ಲ ಎಂದರೆ ಎಲ್ಲವನ್ನು ಕಳೆದುಕೊಳ್ಳುವಂತಹ ಸನ್ನಿವೇಶಗಳು ಎದುರಾಗಬಹುದು ಹಿಂದೆ, ಮಾಡಿದಂತಹ ಎಲ್ಲ ಲಾಭಗಳು ನಷ್ಟವಾಗಬಹುದು.ಎರಡನೆಯದಾಗಿ ಬಹಳ ಪ್ರಮುಖವಾದಂತಹ ಜಾಗ ಅಂದರೆ ನೀವು ಕೆಲಸ ಕಾರ್ಯವನ್ನು ನಿರ್ವಹಿಸುವಂತಹ ಜಾಗದಲ್ಲಿ ಸುಳ್ಳು ಹೇಳಿ ಸಿಕ್ಕಿಹಾಕಿಕೊಳ್ಳುವoತಹ ಸನ್ನಿವೇಶಗಳು ಎದುರಾಗಬಹುದು. ಬಹಳ ಜನ ಸೇರಿದಂತಹ ಸ್ಥಳದಲ್ಲಿ ನೀವು ಈ ಕೆಲಸವನ್ನು ಮಾಡಿದರೆ ನಿಮ್ಮ ಮೇಲೆ ಅವರಿಗೆ ಇದ್ದಂತಹ ಗೌರವವನ್ನು ನೀವು ಕಳೆದುಕೊಳ್ಳುವಂತಹ ಸನ್ನಿವೇಶಗಳು ಎದುರಾಗಬಹುದು. ನೀವು ಒಂದು ಬಾರಿ ಮಾಡಿದಂತಹ ಕೆಲಸದಿಂದ ಕೊನೆಯ ತನಕ ಕೆಟ್ಟ ಹೆಸರನ್ನು ಪಡೆದುಕೊಂಡಂತಾಗುತ್ತದೆ. ಆದಕಾರಣ ನೀವು ಈ ತಿಂಗಳಿನಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಮೂರನೆಯದಾಗಿ ನಿಮ್ಮ ಆರೋಗ್ಯ ಸ್ಥಿತಿಯಲ್ಲಿ ಅಷ್ಟೇನೂ ಚೆನ್ನಾಗಿರುವುದಿಲ್ಲ ಅಂದರೆ ನಿಮಗೆ ಕಾಲಿನಲ್ಲಿ ನೋವು ಕಾಣಿಸಿಕೊಳ್ಳುವoತಹ ಸ್ಥಿತಿ ಎದುರಾಗುತ್ತದೆ. ಮತ್ತು ವಾತ ವೃದ್ಧಿ ಆಗುವಂತಹ ಸನ್ನಿವೇಶಗಳು ಬರುತ್ತದೆ. ಇದು ನಿಮ್ಮ ಆಹಾರ ಪದ್ಧತಿಯಿಂದ ಸಂಭವಿಸುವoತಹ ಸಮಸ್ಯೆಗಳು ಆದಕಾರಣ ನೀವು ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಒಳ್ಳೆಯ ಪೌಷ್ಟಿಕತೆ ಹೊಂದಿರುವoತಹ ಆಹಾರಗಳನ್ನು ಸೇವಿಸುವುದರಿಂದ ಈ ವಾತ ಆಗುವುದನ್ನು ತಡೆಗಟ್ಟಬಹುದು. ಮತ್ತು ಸರಿಯಾದ ಸಮಯದಲ್ಲಿ ಊಟವನ್ನು ಮಾಡಬೇಕು. ಆಲಸ್ಯ ಬಿಟ್ಟು ಚೆನ್ನಾಗಿ ವ್ಯಾಯಾಮವನ್ನು ಮಾಡಬೇಕು.

ನಾಲ್ಕನೆಯದಾಗಿ ಜುಲೈ 16ರ ತನಕ ಶತ್ರುಗಳ ಕಾಟ ಜಾಸ್ತಿಯಾಗುತ್ತದೆ. ಅಂದರೆ ನಿಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾರೂ ಕೂಡ ನಿಮಗೆ ಸಹಾಯ ಮಾಡಲು ಬರುವುದಿಲ್ಲ ಅಂತಹ ಸನ್ನಿವೇಶಗಳು ಎದುರಾಗುತ್ತವೆ. ಮತ್ತು ನಿಮಗೆ ಆಗುತ್ತಿರುವoತಹ ನ್ಯಾಯದ ಬಗ್ಗೆ ಯಾರು ಕೂಡ ನಿಮಗೆ ಸಹಾಯ ಮಾಡಲು ಬರುವುದಿಲ್ಲ. ಹಾಗೆಯೇ ನಿಮ್ಮ ಮನೆಯಲ್ಲಿಯೂ ಕೂಡ ನಿಮಗೆ ಏನೆ ಅನ್ಯಾಯ ಆಗಿದೆ ಎಂದರೆ, ಯಾರು ಕೂಡ ನಿಮ್ಮ ಪರವಾಗಿ ಮಾತನಾಡಲು ಮುಂದೆ ಬರುವುದಿಲ್ಲ. ಇದೆಲ್ಲದಕ್ಕೂ ಒಂದೇ ಉತ್ತರ ನೀವು ದೇವರನ್ನು ನಂಬಬೇಕು ಶನೇಶ್ಚರನ ಅನುಗ್ರಹ ನಿಮ್ಮನ್ನು ಕಾಪಾಡುತ್ತದೆ ಶಷ್ಯಾಧಿಪತಿಯಾದಂತಹ ಬುಧ, ಷಷ್ಟದಲ್ಲಿ ರವಿ, ಷಷ್ಟದಲ್ಲಿ ಶುಕ್ರ, ಎಲ್ಲಾ ಗ್ರಹಗಳು ಬುಧನ ಆರಾಧನೆ ತುಂಬಾ ಅನುಕೂಲ ಮಾಡಿಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *