2022 ರ ಮಣ್ಣೆತ್ತಿನ ಅಮವಾಸ್ಯೆ‌ ಫಲಾಫಲಗಳು.ಪ್ರತಿವರ್ಷವೂ ಮಿಥುನರಾಶಿಯಲ್ಲಿ ಸೂರ್ಯ-ಚಂದ್ರ ಸೇರುವಾಗ ಪ್ರತಿವರ್ಷ ಅಮಾವಾಸ್ಯೆಯ ನೋಡುತ್ತೇವೆ. ಮೇಷ ರಾಶಿ:- 12ನೇ ತಾರೀಕು ಜುಲೈ ನಂತರ ಶನಿಮಹಾತ್ಮನ ಶಾಂತಿಯನ್ನು ಮಾಡಿಕೊಳ್ಳಿ. ಸ್ವಸ್ಥಾನದಲ್ಲಿರುವುದರಿಂದ ಅಂತಹದ್ದೇನು ಕೆಟ್ಟದ್ದು ಆಗುವುದಿಲ್ಲ ಆರು ತಿಂಗಳು ಶನಿ ಮಕರ ರಾಶಿಯಲ್ಲಿದ್ದು ನಂತರ ಕುಂಭ ರಾಶಿಗೆ ಬರುತ್ತದೆ. ತದನಂತರ ಭಾಗ್ಯೋದಯ ಆರು ತಿಂಗಳು ಇರುತ್ತದೆ ಜುಲೈ 12ನೇ ತಾರೀಖಿನ ನಂತರ ಆರು ತಿಂಗಳುಗಳ ಕಾಲ ಶನಿಮಹಾತ್ಮನ ಪೂಜೆಯನ್ನು ಮಾಡಿ. ನೀವು ಶುಭಕಾರ್ಯಗಳಿಗೆ ಧನ ವ್ಯಯ ಮಾಡುವಂತಹ ಸಂದರ್ಭ ಒದಗಿ ಬರುತ್ತದೆ. ಕೇತು ಗ್ರಹದ ದೃಷ್ಟಿ ಇರುತ್ತದೆ, ನಿಮಗೆ ಸರ್ಪದೋಷ ಇರುವುದರಿಂದ ಸರ್ಪ ಶಾಂತಿಯನ್ನು ಮಾಡಿಕೊಳ್ಳಬೇಕು, ನಿಮ್ಮ ಸಂಕಟಗಳು ದೂರವಾದರೆ ನಿಮಗೆ ಶುಭ, ಲಾಭ, ಜಯ ಎನ್ನುವಂತಹದ್ದು ಉಂಟಾಗುತ್ತದೆ. ಎರಡನೇ ಮನೆಯಲ್ಲಿ ಬುಧ, ಶುಕ್ರ ಆರ್ಥಿಕವಾಗಿ ವೃದ್ಧಿ.

ಮೂರನೇ ಮನೆಯಲ್ಲಿ ಸೂರ್ಯ ಪರಾಕ್ರಮದಿಂದ, ವಿಕ್ರಮ ದಿಂದ ಯಾವುದೇ ಕೆಲಸಕ್ಕೋ ಕೈ ಹಾಕಿದರು 16ನೇ ತಾರೀಖಿನ ಜುಲೈ ವರೆಗೂ ನಿಮಗೆ ತುಂಬಾ ಜಯ ಮತ್ತು ಲಾಭ ಉಂಟಾಗುತ್ತದೆ. ತದನಂತರ ಸೂರ್ಯನಾರಾಯಣ ಮೇಷ ರಾಶಿಗೆ ನಾಲ್ಕನೇ ಮನೆಗೆ ಪ್ರವೇಶ ಮಾಡುತ್ತಾನೆ. ವೃಷಭ ರಾಶಿ:- ಜಾತಕದಲ್ಲಿ ಶುಭ, ಗೋಚಾರದಲ್ಲಿ ಶುಭ, ಏಕೆಂದರೆ ವೃಷಭದಲ್ಲಿ ಬುಧ, ಶುಕ್ರ ಇರುವುದರಿಂದ ಬುಧ ಮತ್ತು ಶುಕ್ರ ಸೇರುವುದರಿಂದ ರಾಜಯೋಗ ಎನ್ನುವಂತಹದ್ದು ನೀವು ಅನುಭವಿಸುತ್ತೀರ. ವಿವಾಹ ಭಾಗ್ಯ ಉಂಟಾಗುತ್ತದೆ ಸಂತಾನಭಾಗ್ಯ ಉಂಟಾಗುತ್ತದೆ ಶತ್ರುವಿನ ಧ್ವಂಸವಾಗುತ್ತದೆ ಉಂಟಾಗುತ್ತದೆ. ನರಸಿಂಹ ಸ್ವಾಮಿಯ ಪೂಜೆಯನ್ನು ನೀವು ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಆರ್ಥಿಕ ವೃದ್ಧಿಯಾಗುತ್ತದೆ ಸಾಲಸೋಲ ಇದ್ದರೆ ಅದು ಸಹ ನಿಮಗೆ ತೀರುತ್ತದೆ.

ಮಿಥುನ ರಾಶಿ:- ಮಿಥುನರಾಶಿಗೆ ಅಷ್ಟಮಶನಿ ಬರುತ್ತಾಯಿದೆ ಶನಿಮಹಾತ್ಮನ ಶಾಂತಿ ಮಾಡಿಕೊಳ್ಳಿ, ವಕ್ರವಾಗಿ ಶನಿಮಹಾತ್ಮನ ಮನೆಗೆ ಬಂದು ಆದ್ದರಿಂದ ಶಾಂತಿ ಮಾಡಿಕೊಂಡರೆ ನಿಮ್ಮ ಸಂಕಟ ದೂರವಾಗುತ್ತದೆ, ಪಾರಾಗುತ್ತದೆ. ಮುಂದಿನ ವರ್ಷ ಏಪ್ರಿಲ್ ಅನಂತರ ನಿಮಗೆ ಗುರುಬಲ ಎಲೆಕ್ಟ್ರಾನಿಕ್ ಇಂಜಿನಿಯರ್ ಗಳಿಗೆ ತುಂಬಾ ಒಳ್ಳೆಯದು, ಮುಂದಿನ ವರ್ಷ ಯುಗಾದಿ ವರೆಗೂ ಶ್ರಮಪಟ್ಟರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ದೂರದೇಶದ ಪ್ರಯಾಣ ಉಂಟಾಗುತ್ತದೆ, ರಾಜಕಾರಣಿಗಳಿಗೆ ಒಳ್ಳೆಯದಾಗುತ್ತದೆ. ಉಳಿದ ರಾಶಿ ಫಲಗಳ ಬಗ್ಗೆ ತಿಳಿಯಲು ಮೇಲಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *