ಮನೆಯ ಒಳಭಾಗದಲ್ಲಿ ಇರುವೆಗಳು ಇದ್ದರೆ ಏನಾದರೂ ಮುನ್ಸೂಚನೆಯಿರುತ್ತಾ/?ಮನೆಯ ಒಳಭಾಗದಲ್ಲಿ ಇರುವೆಗಳು ಇದ್ದರೆ ಕೆಲವರು ಕೆಡುಕು ಹೇಳುವವರು ಇದ್ದಾರೆ, ಕೆಲವರು ಒಳಿತು ಹೇಳುವವರು ಇದ್ದಾರೆ, ನಿಜವಾಗಿಯೂ ಇದು ಒಳಿತೋ ಕೆಡುಕೋ, ಇರುವೆಗಳಲ್ಲಿಯೂ ಸಹಿತವಾಗಿ ಅನೇಕ ಜಾತಿಗಳಿವೆ, ಕಟ್ಟಿರುವೆ, ಕಚ್ಚುವ ಇರುವೆ ಇದೆ. ಬೆಲ್ಲದ ಮೇಲೆಲ್ಲಾ ಹರಿದಾಡುವಂತಹ ಇರುವೆಗಳೇ ಬೇರೆ ಇವೆ, ಸಣ್ಣ ಸಣ್ಣ ಇರುವೆಗಳು ಸಾಕಷ್ಟು ಇದೆ, ಆದರೆ ಹೂ ಇರುವೆ ಅಂತ ಒಂದು ಇರುವೆ ,ಇದೆ ಅದನ್ನು ನೋಡಿದ್ದೀರಾ ನೀವು, ಇನ್ನೂ ಕೆಲವರು ಮಳ್ಳಿರುವೆ ಅಂತ ಕರೆಯುತ್ತಾರೆ, ಇದನ್ನು ಮುಟ್ಟಿದ ತಕ್ಷಣ ಎಲ್ಲಾ ಕಡೆಗೂ ಹರಡಿಕೊಳ್ಳುತ್ತದೆ.ಜಂಬಿರುವೆ ಕೂಡ ಇದೆ ಮುಟ್ಟಿದರೆ ಒಂದು ರೀತಿಯಾದಂತಹ ಕೆಟ್ಟ ವಾಸನೆ ಬರುತ್ತದೆ.ಹೀಗಿರುವಾಗ ಈ ಇರುವೆಯಲ್ಲಿ ವಿಶೇಷವಾಗಿ ಹೂ ಇರುವೆ ಅತ್ಯಂತ ಪ್ರಿಯವಾಗಿರುವಂತಹದ್ದು. ಮನೆಯಲ್ಲಿ ಏನಾದರೂ ಶುಭಕಾರ್ಯ ನಡೆಯುತ್ತದೆ ಎಂಬ ಮುನ್ಸೂಚನೆಯನ್ನು ಕೊಡುವುದೇ ಈ ಹೂ ಇರುವೆ. ಬಾಗಿಲಿನ ಸಂಧಿಗಳಲ್ಲಿ ,ಚಿಕ್ಕ-ಚಿಕ್ಕ ಪೊಟರೆಗಳಲ್ಲಿ, ಗೋಡೆಯ ಸಂದುಗಳಲ್ಲಿ, ಇರುವೆಗಳು ಹೊರಗೆ ಬಿದ್ದು ಸದಾ ಕಾಲದಲ್ಲೂ ಸಹಿತವಾಗಿ ತೊಂದರೆ ಕೊಡುವಂತಹ ಸಾಧ್ಯತೆ ಇರುವಂತಹದ್ದು. ಆದ್ದರಿಂದ ಇದರಲ್ಲಿ ಹೂ ಇರುವೆ ತುಂಬಾ ವಿಶೇಷವಾದದ್ದು ಸಾಲುಸಾಲಾಗಿ ಎದ್ದು ಬರುವಂತಹ ಇರುವೆಗಳು. ಎಲ್ಲಾ ಇರುವೆಗಳನ್ನು ವೀಕ್ಷಣೆ ಮಾಡಿ ತಲೆಯ ಭಾಗದಲ್ಲಿ ಒಂದು ಹೂ ಅಥವಾ ಹೂ ಅನ್ನು ಮುಡಿದಿರುವಂತಹ ರೂಪದಲ್ಲಿ ಸಾಕಷ್ಟು ಇದೆ, ಅವು ಮನೆ ಒಳಗೆ ಬಂದಾಗ ಮನೆಯ ಒಡೆಯನಿಗಾಗಲಿ, ಮನೆಯ ಒಡತಿಗಾಗಲಿ‌

ಅಥವಾ ಕುಟುಂಬದವರಿಗೆ ಆಗಲಿ ತೊಂದರೆ ಆಗುವುದಿಲ್ಲ ಅಥವಾ ಕೇಡು ಉಂಟಾಗುವುದಿಲ್ಲ. ಆಪತ್ತು ಆಗುವುದಿಲ್ಲ.ಹೀಗಾಗಿಯೇ ಆ ಹೂ ಇರುವೆಗೆ ವಿಶೇಷವಾದ ಸ್ಥಾನವನ್ನು ಕೊಟ್ಟಿದ್ದಾರೆ ಪೂರ್ವಜರು. ಅವು ಬಾಗಿಲಿನಿಂದ ಹೊರಬಂದು ಮನೆಯಲ್ಲೆಲ್ಲಾ ಹರಿದಾಡುವಾಗ ಅವುಗಳಿಗೆ ಒಂದು ಸಂತೋಷ, ನಿಮಗೂ ಒಂದು ರೀತಿ ಸಂತೋಷ, ನಮ್ಮ ಮನೆಯಲ್ಲಿಯೂ ಕೂಡ ಒಂದು ಮಂಗಳಕಾರ್ಯ ನಡೆಯುತ್ತದೆಯೇ, ನಡೆಯುವ ಸಂದರ್ಭ ಬಂದಿದೆಯೇ, ಎಲ್ಲರೂ ಒಪ್ಪಿಕೊಂಡಿದ್ದಾರೆಯೇ ಇತ್ಯಾದಿ ಕಂಡುಬರುವಂತಹ ಸಾಧ್ಯತೆ ಇರುವಂತಹದ್ದು. ಆದ್ದರಿಂದ ಪ್ರತಿಯೊಂದು ಮನೆಯಲ್ಲಿಯೂ ಸಹಿತವಾಗಿ ವಿಶೇಷವಾಗಿ ಬಾಗಿಲಿನ ಮುಂಭಾಗದಲ್ಲಿ ಎದ್ದು ಹರಿದು ಬರುವಂತಹ ಇರುವೆಗಳು ತಂಪಾದ ಪ್ರದೇಶದಲ್ಲಿ, ತಂಪಾದ ತಳಭಾಗದಲ್ಲಿ ವಿಶೇಷವಾಗಿ ಆಗಾಗ ಕಂಡುಬರುವಂತಹ ಸಾಧ್ಯತೆ ಇರುವಂತಹದ್ದು.

ಕೆಲವರು ಇರುವೆಗಳು ಬಂದಿದೆ ಎಂದು ಬಿಸಿನೀರನ್ನು ಹಾಕುವುದು ಮತ್ತು ಅರಿಶಿನ ಪುಡಿಯನ್ನು ಹಾಕುವುದು ಅಥವಾ ಪೊರಕೆಯಿಂದ ಅವುಗಳನ್ನು ಗೂಡಿಸಿಕೊಂಡು ಹೊರಗೆ ಹಾಕುವುದು ಇವೆಲ್ಲವೂ ಸಹಿತವಾಗಿ ನಮ್ಮ ಮನೆಯ ಲಕ್ಷ್ಮಿಯನ್ನು ಹೊರ ಹಾಕಿದ ಹಾಗೆ. ಇರುವೆಯಲ್ಲಿಯೂ ನಾವು ಲಕ್ಷ್ಮಿಯನ್ನು ನೋಡಬಹುದು, ತಾನಾಗಿಯೇ ಬಂದಂತಹ ಇರುವೆಗಳು ಇವು ನಮಗೆ ಜೀವನ ಪರ್ಯಂತ ನಮಗೆ ಸುಖವನ್ನು ಕೊಡುತ್ತವೆ ಒಳ್ಳೆಯ ಮಾರ್ಗವನ್ನು ತೋರಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *