ಶಾಪಗಳು ಎಷ್ಟು ಭಯಂಕರ ಹಾಗೂ ಅಪಾಯಕಾರಿ ಅನ್ನುವುದಕ್ಕೆ ಈ ವಿಡಿಯೋ ನೋಡಿ.ಮಹಾಭಾರತದ ಯುದ್ಧದ ನಂತರ ಕುಂತಿಯು ಪಾಂಡವರಿಗೆ ಕರ್ಣನು ಅವಳ ಮಗ ಎಂದು ತಿಳಿಸುತ್ತಾಳೆ ಆಗ ಪಾಂಡವರಿಗೆ ಕರ್ಣನೂ ತಮ್ಮ ಅಣ್ಣನೆಂದು ತಿಳಿದು ಬಹಳ ದುಃಖವಾಗುತ್ತದೆ. ಇದರಿಂದ ವಿಪರೀತ ಕೋಪ ಬಂದು ಧರ್ಮರಾಜನಿಗೆ ಈ ವಿಚಾರವನ್ನು ಏಕೆ ತಿಳಿಸಲಿಲ್ಲ ಎಂದು ತೀವ್ರವಾಗಿ ಆಕ್ಷೇಪಿಸುತ್ತಾನೆ ಇದರಿಂದ ಕೋಪಗೊಂಡ ಧರ್ಮರಾಯನು ಇನ್ನು ಮುಂದೆ ಸ್ತ್ರೀಯರಲ್ಲಿ ಯಾವುದೇ ಗುಟ್ಟು ನಿಲ್ಲಬಾರದು ಎಂದು ಶಾಪವನ್ನು ಕೊಡುತ್ತಾನೆ ಇದೇ ಕಾರಣಕ್ಕೆ ಇಂದಿಗೂ ಮಹಿಳೆಯರು ಯಾವುದೇ ಒಂದು ಗುಟ್ಟನ್ನು ರಹಸ್ಯವಾಗಿಡಲು ವಿಫಲರಾಗುತ್ತಾರೆ. ಪಾಂಡು ಮಹಾರಾಜನಿಗೆ ಕಿಂದಾಮ ಋಷಿಗಳ ಶಾಪ ಒಮ್ಮೆ ಪಾಂಡು ಮಹಾರಾಜರು ಬೇಟೆ ಮಾಡುವಾಗ ದೂರದಲ್ಲಿ ಜಿಂಕೆ ಇರುವುದನ್ನು ನೋಡಿ ತನ್ನ ಬಾಣವನ್ನ ಪ್ರಯೋಗಿಸುತ್ತಾರೆ.

ಆದರೆ ಕಿಂದಾ‌ಮ ಋಷಿಗಳು ಅವರ ಹೆಂಡತಿ ಸಂಗಡ ಜಿಂಕೆ ರೂಪದಲ್ಲಿ ಪ್ರಣಯ ಮಾಡುತ್ತಿರುತ್ತಾರೆ ಪಾಂಡು ಮಹಾರಾಜರು ಬಿಟ್ಟ ಬಾಣದಿಂದ ಅವರು ಹತರಾಗುತ್ತಾರೆ. ಕಿಂದಮಾ ಋಶಿಗಳ ಹೆಂಡತಿ ಸಾಯುವ ಮುಂಚೆ ಪಾಂಡು ಮಹಾರಾಜನಿಗೆ ನೀನು ನಿನ್ನ ಹೆಂಡತಿಯ ಸಂಗಡ ಸಂಭೋಗ ಮಾಡಿದರೆ ಸಾಯುತ್ತೀಯಾ ಎನ್ನುವ ಶಾಪವನ್ನು ಕೊಡುತ್ತಾರೆ ಇದೆ ಕಾರಣ ಮುಂದೆ ಪಾಂಡವರು ಬೇರೆ ಬೇರೆ ವರಗಳಿಂದ ಹುಟ್ಟುತ್ತಾರೆ. ಇಂದ್ರ ಮತ್ತು ಅಹಲ್ಯೆ ಗೆ ಗೌತಮ ಮುನಿಗಳು ಕೊಟ್ಟಂತಹ ಶಾಪ ಅಹಲ್ಯೆಯಿಂದ ಆಕರ್ಷಿತನಾದ ಇಂದ್ರನು ಗೌತಮ ಗೌತಮ ಋಷಿಗಳಂತೆ ರೂಪಧರಿಸಿ ಅಹಲ್ಯೆಯೊಂದಿಗೆ ಪ್ರಣಯ ಮಾಡುತ್ತಾನೆ. ಗೌತಮ ಋಷಿಗಳಿಗೆ ವಿಷಯ ತಿಳಿದು ಇಂದ್ರನಿಗೆ ಶಾಸ್ತ್ರ ಯೋನಿ ಮತ್ತು ಅಹಲ್ಯಗೆ ಕಲ್ಲಾಗು ಎಂದು ಶಾಪ ಕೊಡುತ್ತಾರೆ.

ರಾವಣನಿಗೆ ರಂಬೆ ಕೊಟ್ಟಂತಹ ಶಾಪ ಒಂದು ದಿನ ರಾವಣ ಕೈಲಾಸ ಪರ್ವತವನ್ನು ನೋಡಲು ಹೋಗುತ್ತಾನೆ ಕೈಲಾಸವನ್ನು ತಲುಪಿದಾಗ ರಾತ್ರಿ ಕುಬೇರನ ಅರಮನೆಯಿಂದ ಅಪ್ಸರೆಯರ ಶಬ್ದ ಕೇಳಿಬರುತ್ತಿತ್ತು, ಹೂವುಗಳ ಸುಗಂಧ ರಾವಣನ ಮನಸ್ಸಿನಲ್ಲಿ ಕಾಮವನ್ನು ಹೆಚ್ಚಿಸುತ್ತದೆ. ಸ್ವರ್ಗಲೋಕದ ಅಪ್ಸರೆಯ ಮೇಲೆ ರಾವಣನ ಕಣ್ಣು ಬೀಳುತ್ತದೆ, ರಾವಣನು ಆಕೆಯನ್ನು ಕಂಡು ಆಕರ್ಷಿತನಾಗಿ ಆಕೆಯ ಕೈಯನ್ನು ಹಿಡಿಯುತ್ತಾನೆ ಆಗ ರಂಭೆ ನೀನು ಬಲವಂತ ಮಾಡುವುದು ನನಗೆ ಇಷ್ಟ ಇಲ್ಲ ಎಂದು ರಾವಣನಿಗೆ ನೀನು ಮುಂದೆ ಯಾವುದೇ ಪರಸ್ಪರ ಮೇಲೆ ಕೈ ಹಾಕಿದರೆ ಆಕೆಯ ಪತಿಯಿಂದ ಹತನಾಗುತ್ತೀಯ ಎಂದು ಶಾಪ ಕೊಡುತ್ತಾಳೆ.

By admin

Leave a Reply

Your email address will not be published. Required fields are marked *