ಧನಸು ರಾಶಿ 2022 ಜುಲೈ ತಿಂಗಳ ಭವಿಷ್ಯ.ಮೊದಲನೆಯದಾಗಿ ಜುಲೈ ತಿಂಗಳಲ್ಲಿ ಆಶಾಡ ಮಾಸ ಇರುತ್ತದೆ. ಆಶಾಡ ಮಾಸ ಎಂದ ಕೂಡಲೇ ವಿವಾಹ, ಗೃಹಪ್ರವೇಶ, ಶುಭ ಕಾರ್ಯಕ್ರಮಗಳು ಕಡಿಮೆ ಯಾರೂ ಮಾಡುವುದಿಲ್ಲ. ಆದರೆ ದೇವತಾ ಪೂಜೆ ದೇವಾಲಯಗಳ ದರ್ಶನ,ಅದರಲ್ಲೂ ವಿಶೇಷವಾಗಿ ಲಕ್ಷ್ಮೀ ಪೂಜೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ತುಂಬಾ ಭಕ್ತಿಯಿಂದ ತುಂಬ ಶ್ರದ್ಧೆಯಿಂದ ಮಾಡುತ್ತಾರೆ. ಇನ್ನೊಂದು ವಿಶೇಷವೇನೆಂದರೆ ಆಶಾಡ ಮಾಸದಲ್ಲಿ ಬರುವ ಪೌರ್ಣಮಿ ವಿಶೇಷವೇ, ಗುರು ಪೌರ್ಣಮಿ. ಹದಿಮೂರನೇ ತಾರೀಖು ಜುಲೈ ಅಮಾವಾಸ್ಯೆಯು ವಿಶೇಷವೇ 28ನೇ ತಾರೀಖು ಜುಲೈ. ಜ್ಯೋತಿರ್ ಭೀಮೇಶ್ವರ ವ್ರತ, ನಾಗರ ಅಮಾವಾಸ್ಯೆ ಅಂತ ಹೇಳುತ್ತೇವೆ ನಾವು. ಇದನ್ನು ದೇವತಾ ಮಾಸ ಅಂತ ಹೇಳಬಹುದಾಗಿದೆ.ಈ ತಿಂಗಳಿನಲ್ಲಿ ಏನು ಬದಲಾವಣೆ ಇದೆ ಅಂತ ನೋಡುವುದಾದರೆ, ಈ ತಿಂಗಳಿನಲ್ಲಿ ಅಷ್ಟೇನು ಬದಲಾವಣೆ ಇಲ್ಲ ಆದರೂ ಕೂಡ .ಜುಲೈ ಎರಡನೇ ತಾರೀಖು ಬುಧ ಮಿಥುನ ರಾಶಿಗೆ ಅಂದರೆ ತನ್ನ ಸ್ವಂತ ಮನೆಗೆ ಪ್ರವೇಶ ಮಾಡುತ್ತಾರೆ.

ಹಾಗೆಯೇ ಜುಲೈ 12 ನೇ ತಾರೀಖು ಶನಿ ಕುಂಭ ರಾಶಿ ಇಂದ ವಕ್ರಗತಿ ಯಾಗಿ ಬಂದು ಮಕರ ರಾಶಿಗೆ ಪ್ರವೇಶವಾಗುತ್ತಾನೆ. ಮತ್ತೆ 13ನೇ ತಾರೀಖು ಶುಕ್ರ ಮಿಥುನ ರಾಶಿಗೆ ಮಿತ್ರನ ಮನೆಗೆ ಪ್ರವೇಶವಾದರೆ, 16ನೇ ತಾರೀಖು ಮತ್ತೆ ಬುಧ ಕರ್ಕಾಟಕ ರಾಶಿಗೆ ಶತ್ರು ಮನೆಗೆ ಪ್ರವೇಶ ಆಗುತ್ತಾರೆ. 17ನೇ ತಾರೀಖು ರವಿ ಕರ್ಕಾಟಕ ರಾಶಿಗೆ ಪ್ರವೇಶ ಆಗುತ್ತಾರೆ ಹಾಗೂ ಐದನೇ ಮನೆಯಲ್ಲಿ ಕುಜ ಇರುವುದರಿಂದ ಈ ಸಲ ಕುಜನ ಫಲ ತುಂಬಾ ಚೆನ್ನಾಗಿದೆ. ಕುಜ ಏನು ಹೇಳುತ್ತಾನೆ ಎಂದರೆ, ಪಂಚಮ ಭಾವದಲ್ಲಿ ಕುಜ ಇದ್ದರೆ (5 ನೇ ಭಾವದಲ್ಲಿ). ಧನಸ್ಸು ರಾಶಿಯವರಿಗೆ 12ನೇ ಮನೆ ಅಧಿಪತಿ ಕೂಡ ಕುಜನೇ ಮತ್ತು 5ನೇ ಮನೆ ಅಧಿಪತಿ ಕೂಡ ಕುಜನೇ ಆಗಿದ್ದಾನೆ. ಒಂದು ಕಡೆ ಪೂರ್ವ ಪುಣ್ಯ, ಸಂತಾನ, ಇನ್ನೊಂದು ಕಡೆ ವ್ಯಯ, ಭೋಗ, ವಿದೇಶಿ ಪ್ರಯಾಣ ಎಲ್ಲದಕ್ಕೂ ಅಧಿಪತಿ ಕುಜ, ಐದನೇ ಮನೆಯಲ್ಲಿ ಪಂಚಮಾದಿಪತಿ ಪಂಚಮದಲ್ಲಿ, ಚತುರ್ಥಾಧಿಪತಿ ಚತುರ್ಥದಲ್ಲಿ, ಷಷ್ಟಾಧಿಪತಿ ಷಷ್ಟದಲ್ಲಿ, ಸಪ್ತಮಾಧಿಪತಿ ಸಪ್ತಮದಲ್ಲಿ ಹೇಗೆ ಇದೆ ನೋಡಿ ನಾಲ್ಕು ಗ್ರಹಗಳು ತಮ್ಮ ಸ್ವoತ ಕ್ಷೇತ್ರದಲ್ಲಿಯೇ ಇದೆ.

ಇದು ಏನು ಹೇಳುತ್ತದೆ ಅಂದರೆ ಮೊದಲನೆಯದಾಗಿ, ಸುಖವನ್ನು ಅನುಭವಿಸುವ ಎಲ್ಲಾ ಯೋಗ ಭಾಗ್ಯತೆ ಪ್ರಾಪ್ತಿ, ಬುದ್ಧಿಯಲ್ಲಿ ವಿಪರೀತವಾದಂತಹ ಅಭಿವೃದ್ಧಿ, ಎಷ್ಟೇ ಕಷ್ಟ ಬಂದರೂ ಅದನ್ನು ನಿಭಾಯಿಸುವಂತಹ ಶಕ್ತಿ, ಸ್ವಲ್ಪಮಟ್ಟಿಗೆ ಆರೋಗ್ಯದಲ್ಲಿ ಏರುಪೇರು, ಅಣ್ಣ-ತಮ್ಮಂದಿರ ನಡುವೆ ಸ್ವಲ್ಪ ಕಿರಿಕಿರಿ ಬರುವಂತಹ ಸಾಧ್ಯತೆಯಿರುತ್ತದೆ, ವಿದೇಶಿ ಯೋಗ, ವೃತ್ತಿ ವ್ಯಾಪಾರದಲ್ಲಿರುವಂತವರಿಗೆ ಅಭಿವೃದ್ಧಿ, ವ್ಯವಸಾಯದಲ್ಲಿ ತುಂಬಾ ಫಲ. ಧನಸ್ಸು ರಾಶಿಯವರಿಗೆ ಶನಿ 80%, ಬುದ್ಧ80%, ಶುಕ್ರ 80%, ಕುಜ80%, ಗುರು 80%, ಈ ಐದು ಗ್ರಹಗಳು 80% ಆಯಿತು ಆದರೆ ಸಂಪೂರ್ಣ ಮಾಸ ಅಲ್ಲ, 16 ನೇ ತಾರೀಖು ಬುಧ ಸ್ವಲ್ಪ ಬದಲಾಗುತ್ತಾನೆ.

ಕರ್ಕಾಟಕ ರಾಶಿಗೆ ಬಂದಾಗ ಧನಸ್ಸು ರಾಶಿಯವರಿಗೆ ಬುಧನ ಫಲ ಕಡಿಮೆಯಾಗುತ್ತದೆ 20% ಆಗುತ್ತದೆ. 13 ನೇ ತಾರೀಖಿನ ನಂತರ ಶುಕ್ರ 60% ಗೆ ಬರುತ್ತಾರೆ. ಈ ರಾಶಿಯವರಿಗೆ ಒಂದು ರೀತಿ ಹೇಳಬೇಕು ಅಂದರೆ ಭಾಗ್ಯಾಧಿಪತಿ ಸೂರ್ಯ ತುಂಬಾ ಚೆನ್ನಾಗಿದ್ದಾನೆ, ಪಂಚಮಾಧಿಪತಿ ಕುಜನೂ ಕೂಡ ಚೆನ್ನಾಗಿದ್ದಾನೆ, ಲಗ್ನಾಧಿಪತಿ ಗುರು ನೂ ಕೂಡ ತುಂಬಾ ಚೆನ್ನಾಗಿದ್ದಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *