ವಿರುದ್ಧ ಆಹಾರ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಹಾನಿಕಾರವಿದೆ ಗೊತ್ತಾ.? ಆಯುರ್ವೇದ ಆರೋಗ್ಯ ಆಹಾರಗಳು.ಆಯುರ್ವೇದ ಒಂದು ಅದ್ಭುತ ವಿಜ್ಞಾನ ಇದರಲ್ಲಿ ರೋಗವಾಸಿ ಮಾಡುವುದರ ಬಗ್ಗೆ ಎಷ್ಟು ಹೇಳಿದ್ದಾರೋ, ಅಷ್ಟೇ ರೋಗ ಬರದಂತೆ ತಡೆಯುವುದರ ಬಗ್ಗೆಯೂ ಸಹ ಹೇಳಿದ್ದಾರೆ. ಅದರಲ್ಲಿ ವಿರುದ್ಧ ಆಹಾರಗಳನ್ನು ಸೇವಿಸದೇ ಇರುವುದು ಸಹ ಒಂದು. ಆಯುರ್ವೇದದ ಪ್ರಕಾರ ವಿರುದ್ಧ ಆಹಾರಗಳ ಸೇವನೆ ಮಾಡುವುದರಿಂದ ಅದು ನಿಧಾನವಾಗಿ ವಿಷದಂತೆ ಕೆಲಸ ಮಾಡುತ್ತದೆ. ವಿರುದ್ಧ ಆಹಾರಗಳ ಸೇವನೆಯಿಂದ ನಿಧಾನವಾಗಿ ನಮ್ಮನ್ನು ರೋಗಿಗಳನ್ನಾಗಿ ಮಾಡುವಂತಹ ಸಾಧ್ಯತೆ ಇರುತ್ತದೆಇರುತ್ತದೆ ವಿರುದ್ದ ಆಹಾರಗಳ ಸೇವನೆಯಿಂದ ಚರ್ಮದ ಸಮಸ್ಯೆಗಳು ಬೇಗ ಬರುವುದು, ಮಾನಸಿಕ ಸಮಸ್ಯೆಗಳು, ನಪುಂಸಕತೆ, ದೈಹಿಕ ಶಕ್ತಿ ಕಡಿಮೆಯಾಗುತ್ತಾ ಹೋಗುವುದು, ನೆನಪಿನ ಶಕ್ತಿ ಕಡಿಮೆಯಾಗುವುದು, ಜ್ವರ ಬರುವುದು, ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಮಧುಮೇಹ, ಅಜೀರ್ಣ, ಇಂತಹ ಎಷ್ಟೋ ಸಮಸ್ಯೆಗಳು ಬರುವಂತಹ ಸಾಧ್ಯತೆ ಇರುತ್ತದೆ.
ಯಾವ ವಿರುದ್ಧ ಆಹಾರಗಳನ್ನು ಸೇವನೆ ಮಾಡಬಾರದು ಎಂದರೆ ಬಿಸಿ ಮತ್ತು ತಣ್ಣಗಿನ ಆಹಾರವನ್ನು ನಾವು ಸೇವನೆ ಮಾಡಬಾರದು ಎಲ್ಲರ ಮನೆಯಲ್ಲೂ ಸಹ ಫ್ರಿಜ್ ಇರುತ್ತದೆ ನಾವು ಬಿಸಿಯಾಗಿ ಮಾಡಿರುವಂತಹ ಆಹಾರ ಪದಾರ್ಥಕ್ಕೆ ಫ್ರಿಜ್ನಲ್ಲಿ ಇರುವಂತಹ ತಣ್ಣನೆಯ ಪದಾರ್ಥಗಳನ್ನು ಸೇರಿಸಿ ಸೇವನೆ ಮಾಡುವುದರಿಂದ ಇದು ನಮಗೆ ಸ್ಲೋ ಪಾಯಿಸನ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಹಾಲು ಮತ್ತು ಮೊಸರು ವಿರುದ್ಧ ಆಹಾರ, ಮಜ್ಜಿಗೆ ಮತ್ತು ಹಾಲು ವಿರುದ್ಧ ಆಹಾರ, ಬೆಣ್ಣೆ ಮತ್ತು ತುಪ್ಪ ವಿರುದ್ಧ ಆಹಾರ, ತೊಗರಿ ಬೇಳೆ ಸಾಂಬಾರ್ ಮತ್ತು ಮೀನು ಮತ್ತು ಹಾಲು ವಿರುದ್ಧ, ತುಳಸಿ ಮತ್ತು ಹಾಲು ವಿರುದ್ದ ಆಹಾರ, ಹುಳಿ ಬಾಳೆಹಣ್ಣು ಮತ್ತು ಹಾಲು ವಿರುದ್ಧ ಆಹಾರ, ಮಜ್ಜಿಗೆ ಮತ್ತು ಸಿಹಿ ಬಾಳೆಹಣ್ಣು ವಿರುದ್ಧ ಆಹಾರ, ಹುಳಿ ಮತ್ತು ಸಿಹಿ ವಿರುದ್ಧ ಆಹಾರ ಗಳಾಗುತ್ತವೆ. ವಿರುದ್ಧ ಹಾರಗಳನ್ನು ಸೇವನೆ ಮಾಡುವುದರಿಂದ ಜಠರದಲ್ಲಿ ಅದು ಸಪರೇಟ್ ಆಗುವುದಿಲ್ಲ ಇದರಿಂದ ನಮಗೆ ಇಂತಹ ಸಮಸ್ಯೆಗಳು ಲಿವರ್ ಸಮಸ್ಯೆ, ಜಠರದಲ್ಲಿನ ಸಮಸ್ಯೆಗಳು ಉಂಟಾಗಬಹುದು. ಕಿಡ್ನಿ ಸ್ಟೋನ್ ಅಂತಹ ಸಮಸ್ಯೆ ಹೀಗೆ ಅನೇಕ ರೀತಿಯಾದಂತಹ ಸಮಸ್ಯೆಗಳು ಕಂಡುಬರುತ್ತದೆ. ಅದ್ದರಿಂದ ವಿರುದ್ದ ಆಹಾರಗಳನ್ನು ನಾವು ಸೇವನೆ ಮಾಡಬಾರದು, ನಾವು ಆಹಾರವನ್ನು ಸೇವನೆ ಮಾಡುವಾಗ ಶಾಂತಿಯುತವಾಗಿ ನೆಮ್ಮದಿಯಿಂದ ಆಹಾರವನ್ನು ಸೇವನೆ ಮಾಡಬೇಕು.
