ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇಡಲು ಈ ಒಂದು ಮನೆಮದ್ದು ಬಹಳ ಉಪಯುಕ್ತ!!ಸಕ್ಕರೆ ಕಾಯಿಲೆ ಹಿಂದಿನ ಕಾಲದಲ್ಲಿ ಬಹಳ ಶ್ರೀಮಂತರಿಗೆ ಮಾತ್ರ ಬರುತ್ತಿತ್ತು ಈಗ ಕಾಲ ಬದಲಾಗಿದೆ ಮನೆಯಲ್ಲಿ ಒಬ್ಬರಿಗಾದರೂ ಸಕ್ಕರೆ ಕಾಯಿಲೆ ಇರುತ್ತದೆ. ಸಕ್ಕರೆ ಕಾಯಿಲೆ ಒಂದು ಸಲ ಬಂತು ಎಂದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದೆ ಹೋದರು, ಸೂಕ್ತ ಜೀವನಶೈಲಿ ಒಳ್ಳೆಯ ಆಹಾರ ಪದ್ಧತಿ ಮತ್ತು ವೈದ್ಯರು ಸಲಹೆ ನೀಡಿದ ಔಷಧಿಗಳನ್ನು ಸೇವನೆ ಮಾಡುವುದರ ಮೂಲಕ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ವಿವಿಧ ವೈದ್ಯ ಪದ್ಧತಿಯಲ್ಲಿ ಇಂದು ವಿವಿಧ ರೀತಿಯ ಚಿಕಿತ್ಸೆಗಳು ಸಿಗುತ್ತವೆ, ಆದರೆ ದುಬಾರಿಯಾದ ಈ ಔಷಧಿಗಳನ್ನು ಕೊಳ್ಳಲು ಎಲ್ಲರಿಗೂ ಸಾಧ್ಯವಾಗದೇ ಇರಬಹುದು. ಈ ಔಷಧಿಗಳು ನೀಡುವಷ್ಟೇ ಪರಿಣಾಮಕಾರಿ ಫಲಿತಾಂಶವನ್ನು ನಮ್ಮ ಮನೆಯಲ್ಲಿಯೇ ಇರುವಂತಹ ಆಹಾರ ವನ್ನು ಸೇವನೆ ಮಾಡುವುದರ ಮುಖಾಂತರ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಹಾಗಾದರೆ ನಮ್ಮ ಮನೆಯಲ್ಲಿಯೇ ಇರುವಂತಹ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಈ ಸಕ್ಕರೆ ಕಾಯಿಲೆಯನ್ನು ನಾವು ಯಾವ ರೀತಿ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು, ಈ ಮನೆ ಮದ್ದನ್ನು ಮಾಡಲು ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದರೆ ಮೆಂತ್ಯೆ ಕಾಳು, ಜೀರಿಗೆ, ಮತ್ತು ನೆರಳಿನಲ್ಲಿ ಒಣಗಿಸಿಟ್ಟಂತಹ ಕರಿಬೇವಿನ ಸೊಪ್ಪು ಬೇಕಾಗುತ್ತದೆ. ಇದನ್ನು ಯಾವ ರೀತಿ ಮಾಡಿಕೊಳ್ಳ ಬಹುದು ಎಂದು ನೋಡುವುದಾದರೆ ಮೊದಲು ಒಂದು ಬಾಣಲೆಯನ್ನು ತೆಗೆದುಕೊಂಡು ಒಂದಷ್ಟು ಪ್ರಮಾಣದ ಮೆಂತ್ಯ ಕಾಳನ್ನು ಹುರಿದುಕೊಳ್ಳಬೇಕು(ಹಲವಾರು ಜನ ಈ ಮೆಂತ್ಯೆ ಕಾಳನ್ನು ತಿಂದರೆ ಕಹಿ ಎಂದು ಅದನ್ನು ಉಪಯೋಗಿಸಲು ಮುಂದೆ ಬರುವುದಿಲ್ಲ ಆದರೆ ಈ ಮೆಂತ್ಯಕಾಳು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಉಪಯೋಗಕಾರಿ ಮನೆಮದ್ದಾಗಿದೆ) ಮೆಂತ್ಯೆ ಕಾಳಿನಲ್ಲಿ ನಾರಿನ ಅಂಶ ಇರುವುದರಿಂದ ಇದನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹೀರಿಕೊoಡು ನಿಯಂತ್ರಣದಲ್ಲಿ ಇಡುತ್ತದೆ.

ಎರಡನೆಯದು ಜೀರಿಗೆ, ಎಷ್ಟು ಪ್ರಮಾಣದಲ್ಲಿ ಮೆಂತ್ಯೆ ಕಾಳನ್ನು ತೆಗೆದು ಕೊಂಡಿರುತ್ತೀರೋ ಅಷ್ಟೇ ಪ್ರಮಾಣದಲ್ಲಿ ಜೀರಿಗೆಯನ್ನು ತೆಗೆದುಕೊಂಡು ಅದನ್ನು ಸಹ ಹುರಿದಿಟ್ಟುಕೊಳ್ಳಬೇಕು.(ಈ ಜೀರಿಗೆ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಹಾಗೆ ಈ ಜೀರಿಗೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಇರುವುದರಿಂದ ಇವುಗಳು ಸೋಂಕು ವಿರುದ್ಧವಾಗಿ ಕೆಲಸ ಮಾಡುತ್ತದೆ). ಹೀಗೆ ಇವೆರಡನ್ನು ಉರಿದಿಟ್ಟುಕೊಂಡ ನಂತರ ಇವೆರಡನ್ನು ಒಂದಾದನಂತರ ಒಂದನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಬೇಕು ಕೊನೆಗೆ ಕರಿಬೇವಿನ ಸೊಪ್ಪಿನ ಎಲೆಗಳನ್ನು ಸಹ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಇವೆರಡರ ಜೊತೆ ಇದನ್ನು ಮಿಕ್ಸ್ ಮಾಡಿ ಅದನ್ನು ಗಾಳಿ ಆಡದೇ ಇರುವಂತಹ ಒಂದು ಗಾಜಿನ ಬಾಕ್ಸ್ ನಲ್ಲಿ ಶೇಖರಿಸಿಟ್ಟುಕೊಂಡು ಪ್ರತಿನಿತ್ಯ ಖಾಲಿ ಹೊಟ್ಟೆಗೆ ಬಿಸಿ ನೀರಿನ ಜೊತೆ ಮಿಶ್ರಣ ಮಾಡಿ ತೆಗೆದುಕೊಳ್ಳುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *