100% ಪರ್ಫೆಕ್ಟ್ ಆಗಿ ಮೆಣಸಿನ ಕಾಯಿ ಬಜ್ಜಿ ಮಾಡಬೇಕಾ? ಹಾಗಾದರೆ ಈ ಲೋಟದ ಟ್ರಿಕ್ಸ್ ಮಾಡಿ||ಸಾಮಾನ್ಯವಾಗಿ ಎಲ್ಲರಿಗೂ ಮೆಣಸಿನ ಕಾಯಿ ಬಜ್ಜಿ ಎಂದರೆ ಅಚ್ಚುಮೆಚ್ಚು ಆದರೆ ಎಲ್ಲರಿಗೂ ಸಹ ಇದನ್ನು ಸರಿಯಾಗಿ ಮಾಡುವ ವಿಧಾನ ಗೊತ್ತಿರುವುದಿಲ್ಲ ಹಿಟ್ಟನ್ನು ಹಾಕಿ ಹೆಣ್ಣಿಗೆ ಬಿಡುವಾಗ ತೊಟ್ಟು ಕಿತ್ತು ಹೋಗುತ್ತದೆ ಅಥವಾ ಹಿಟ್ಟು ಸರಿಯಾಗಿ ಅಂಟಿಕೊಳ್ಳುವುದಿಲ್ಲ ಹೀಗೆ ಅನೇಕರು ಹೇಳುತ್ತಾರೆ. ಆದರೆ ನಾವು ಇಲ್ಲಿ ಒಂದು ಲೋಟದ ಟ್ರಿಕ್ಸ್ ಅನ್ನು ಬಳಸುತ್ತಾ ಈ ಲೋಟದ ಸಹಾಯದಿಂದ ಟ್ರಿಕ್ಸ್ ಬಳಸಿಕೊಂಡು ಇದರಲ್ಲಿ ಚಿಕ್ಕ ಮಕ್ಕಳು ಸಹ ಬಜ್ಜಿಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಹೇಗೆ ಪರ್ಫೆಕ್ಟ್ ಆಗಿ ಮೆಣಸಿನಕಾಯಿ ಬಜ್ಜಿ ಮಾಡುವುದು ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ.ಮೊದಲು ನಾವು ಬಜ್ಜಿ ಹಿಟ್ಟನ್ನು ರೆಡಿ ಮಾಡಿಕೊಳ್ಳೋಣ ಅದನ್ನು ಹೇಗೆ ಮಾಡಿಕೊಳ್ಳುವುದು ಎಂದರೆ, ಒಂದು ಕಪ್ ನಷ್ಟು ಕಡಲೆ ಹಿಟ್ಟು, ಕಾಲು ಕಪ್ಪಿನ ಅಳತೆ ಯಷ್ಟು ಅಕ್ಕಿ ಹಿಟ್ಟು, ಹಾಗೆಯೇ ಕಾರಕ್ಕೆ ಸ್ವಲ್ಪ ಅಚ್ಚಕಾರದಪುಡಿ, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಇದನ್ನು ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು.

ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಇವತ್ತಿನ ಸ್ಪೆಷಲ್ ಈ ಹಿಟ್ಟಲ್ಲ ಲೋಟದ ಟ್ರಿಕ್ಸ್. ಬಜ್ಜಿ ಹಿಟ್ಟನ್ನು ನೀವು ನಿಮ್ಮ ಮನೆಗಳಲ್ಲಿ ಹೇಗೆ ಮಾಡಿಕೊಳ್ಳುತ್ತೀರೋ ಹಾಗೆ ಮಾಡಿಕೊಳ್ಳಬಹುದು. ಕೆಲವರು ಈ ಅಕ್ಕಿ ಹಿಟ್ಟಿನ ಬದಲು ಉದ್ದಿನ ಹಿಟ್ಟನ್ನು ಸೇರಿಸುತ್ತಾರೆ. ಮತ್ತು ಕೊನೆಯಲ್ಲಿ ಸ್ವಲ್ಪ ಅಡಿಗೆ ಸೋಡವನ್ನು ಹಾಕಿ ಕಲಸಿಕೊಳ್ಳಬೇಕು. ಕೆಲವರು ಅಡಿಗೆ ಸೋಡವನ್ನು ಹಾಕುವುದಿಲ್ಲ ಅಂತವರು ಇದನ್ನು ಸ್ಕಿಪ್ ಮಾಡಬಹುದು. ಸೋಡವನ್ನು ಹಾಕಿದ ನಂತರ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಬೇಕು ಆನಂತರ ಹಿಟ್ಟು ಒಂದು ಹದಕ್ಕೆ ಬರುತ್ತದೆ.

ಇಲ್ಲಿ ಸುಮಾರು ನಾನು ಏಳರಿಂದ ಎಂಟು ಮೆಣಸಿಕಾಯಿಯನ್ನು ತೆಗೆದುಕೊಂಡಿದ್ದೇನೆ ಅದನ್ನು ಸೀಳಿಕೊಳ್ಳಬೇಕು ಅಥವಾ ಕೆಳಗಡೆ ಕತ್ತರಿಸಿಕೊಂಡಿರಬೇಕು ಏಕೆಂದರೆ ಅದನ್ನು ಎಣ್ಣೆಯಲ್ಲಿ ಹಾಕಿದಾಗ ಅದು ಸಿಡಿಯುವ ಸಂಭವವಿರುತ್ತದೆ ಆದ್ದರಿಂದ ಅದನ್ನು ನಾನು ಇಲ್ಲಿ ಸ್ವಲ್ಪ ಕತ್ತರಿಸಿ ಕೊಂಡಿದ್ದೇನೆ. ನಂತರ ಯಾವುದಾದರೂ ಒಂದು ಮೆಣಸಿನ ಕಾಯಿ ಇರುವಷ್ಟು ಉದ್ದದ ಲೋಟವನ್ನು ತೆಗೆದುಕೊಂಡು ಆ ಲೋಟದ ಒಳಗೆ ಈ ಹಿಟ್ಟನ್ನು ಹಾಕಿ ಮೆಣಸಿನ ಕಾಯಿಯನ್ನು ಲೋಟದ ಒಳಗೆ ಅಜ್ಜಿ ಎಣ್ಣೆ ಒಳಗೆ ಬಿಡುವುದು. ಹೀಗೆ ಮಾಡುವುದರಿಂದ ಮೆಣಸಿನ ಕಾಯಿ ಬಜ್ಜಿ ಹದವಾಗಿ ಬರುತ್ತದೆ ಮೆಣಸಿನ ಕಾಯಿಗೆ ಎಲ್ಲಾ ಹಿಟ್ಟು ಚೆನ್ನಾಗಿ ಕೂರುತ್ತದೆ. ಹೀಗೆ ಮಾಡುವುದರಿಂದ ಪರ್ಫೆಕ್ಟ್ ಬಜ್ಜಿ ರೆಡಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *