30 ರಿಂದ 50 ರ ಅಮ್ಮಂದಿರು ಈ ನ್ಯಾಚುರಲ್ ಡೈ ತಿಂಗಳಿಗೆ ಒಮ್ಮೆ ಹಚ್ಚಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ.ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚಾಗಿ ಹೊರಗಿನಿಂದ ತಂದಂತಹ ಡೈಗಳನ್ನು ಹಚ್ಚಿಕೊಳ್ಳುತ್ತಿದ್ದೇವೆ ಆದರೆ ಅದಕ್ಕೆ ಹೆಚ್ಚಾಗಿ ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸಿ ಮಾಡಿರುತ್ತಾರೆ ಇದರಿಂದ ನಮಗೆ ಹೆಚ್ಚಾಗಿ ಕೂದಲು ಉದುರುವಂತಹ ಸಮಸ್ಯೆಗಳು ಹಾಗೆ ದಿನೇ ದಿನೇ ಹೆಚ್ಚು ಬಿಳಿ ಕೂದಲುಗಳು ಸಹ ಉಂಟಾಗುವಂತಹ ಸಂದರ್ಭಗಳು ಬರುತ್ತದೆ. ಆದ್ದರಿಂದ ನಾವು ಹೆಚ್ಚಾಗಿ ಹೊರಗಡೆಯಿಂದ ತಂದಂತಹ ಈ ಡೈಗಳನ್ನು ಹೆಚ್ಚಾಗಿ ಬಳಸುವುದನ್ನು ನಿಲ್ಲಿಸಿ ಪ್ರಕೃತಿದತ್ತವಾಗಿ ಸಿಗುವಂತಹ ಅಂದರೆ ನ್ಯಾಚುರಲ್ ಆಗಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ಹೇರ್ ಡೈಗಳನ್ನು ಮಾಡಿ ಹಚ್ಚುವುದರಿಂದ ನಮ್ಮ ಕೂದಲಿನ ಆರೋಗ್ಯವು ಹೆಚ್ಚಾಗುತ್ತದೆ ಹಾಗೆಯೇ ಕೂದಲು ಸಹ ಸಮೃದ್ಧಿಯಾಗಿ ಬೆಳೆಯುತ್ತದೆ. ರಾಸಾಯನಿಕ ಡೈ ಗಳನ್ನು ಹಚ್ಚುವುದರಿಂದ ಹೆಚ್ಚಿನ ಚರ್ಮ ಕಾಯಿಲೆಗಳು ಉಂಟಾಗಬಹುದು ಆದ್ದರಿಂದ ನಾವು ನಾವೇ ತಯಾರಿಸಿದ ನ್ಯಾಚುರಲ್ ಡೈ ಹಚ್ಚುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಈ ನ್ಯಾಚುರಲ್ ಡೈ ಅನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ಈ ಕೆಳಗೆ ನೋಡೋಣ. ಮೊದಲನೆಯದಾಗಿ ಮೆಹೆಂದಿ ಪೌಡರ್ ಇದು ನಮ್ಮ ಕೂದಲಿಗೆ ತುಂಬಾ ಒಳ್ಳೆಯದು. ಮೆಹಂದಿ ಪೌಡರ್ ಅನ್ನು ಹಚ್ಚುವುದರಿಂದ ಕೂದಲಿಗೆ ಹೊಳಪನ್ನು ಕೊಡುತ್ತದೆ ಮತ್ತು ಕೂದಲು ದಟ್ಟವಾಗಿ ಬೆಳೆಯಲು ಇದು ತುಂಬಾ ಸಹಾಯ ಮಾಡುತ್ತದೆ. ಇನ್ನು ಕೆಲವರಿಗೆ ಹೆಚ್ಚಾಗಿ ಕೂದಲು ಉದುರುತ್ತಿದ್ದು ಕೂದಲು ಸೀಳುತ್ತಿದ್ದರೆ ಅಂಥವರಿಗೆ ಈ ಮೆಹಂದಿ ಪೌಡರ್ ತುಂಬಾ ಬಹಳ ಉಪಯುಕ್ತಕಾರಿಯಾಗಿದೆ.

ಮೊದಲು ಮೆಹಂದಿ ಪೌಡರ್ ಅನ್ನು ಎರಡು ಚಮಚ ಅಳತೆಯಷ್ಟು ತೆಗೆದುಕೊಳ್ಳಬೇಕು ನಂತರ ಇದಕ್ಕೆ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಈ ಮೆಹಂದಿ ಪೌಡರ್ ಗೆ ಸ್ವಲ್ಪ ಸ್ವಲ್ಪ ಹಾಕಿ ಯಾವುದೇ ಗಂಟು ಇರದ ಹಾಗೆ ಒಂದು ಪೇಸ್ಟ್ ಹದಕ್ಕೆ ಕಲಸಿಕೊಳ್ಳಬೇಕು. ಕಲಸಿದ ನಂತರ ಇಡೀ ರಾತ್ರಿ ಹಾಗೆ ಇಡಬೇಕು ಸುಮಾರು 12 ಗಂಟೆಗಳ ಕಾಲ ಇದು ಚೆನ್ನಾಗಿ ನೆನೆಯಬೇಕು ನಂತರ ಅದು ಚೆನ್ನಾಗಿ ಬಣ್ಣವನ್ನು ಬಿಟ್ಟುಕೊಳ್ಳುತ್ತದೆ. ನಂತರ ಇದಕ್ಕೆ ಇಂಡಿಗೋ ಪೌಡರ್ ಅನ್ನು ( ಇದು ಕೂದಲನ್ನು ಕಪ್ಪಾಗಿಸುವುದಕ್ಕೆ ಸಹಕಾರಿಯಾಗುತ್ತದೆ) ಸಹ ಎರಡು ಚಮಚ ಅಳತೆಯಷ್ಟೇ ತೆಗೆದುಕೊಳ್ಳಬೇಕು. ಇದನ್ನು ಸಹ ಉಗುರು ಬೆಚ್ಚಗಿನ ನೀರನ್ನು ಹಾಕಿ ಯಾವುದೇ ಗಂಟು ಇರದ ಹಾಗೆ ಚೆನ್ನಾಗಿ ಕಲಸಿಕೊಳ್ಳಬೇಕು ನಂತರ ಇದನ್ನು ಹಚ್ಚಿಕೊಂಡು ಎರಡರಿಂದ ಮೂರು ಗಂಟೆಗಳ ತನಕ ಬಿಟ್ಟು ನಂತರ ತಲೆ ಸ್ನಾನ ಮಾಡುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *