ವಿಟಮಿನ್ B12 ಕೊರತೆ ದೇಹಕ್ಕೆ ಭಾರಿ ನಷ್ಟ ಈ‌ ರೋಗಗಳು ತಪ್ಪಿದ್ದಲ್ಲ.ಈಗಲೇ ಹುಷಾರಾಗಿರಿ.. » Karnataka's Best News Portal

ವಿಟಮಿನ್ B12 ಕೊರತೆ ದೇಹಕ್ಕೆ ಭಾರಿ ನಷ್ಟ ಈ‌ ರೋಗಗಳು ತಪ್ಪಿದ್ದಲ್ಲ.ಈಗಲೇ ಹುಷಾರಾಗಿರಿ..

ವಿಟಮಿನ್ b12 ಕೊರತೆಯಿಂದ ಉಂಟಾಗುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರವೇನು ಗೊತ್ತಾ?ಮನುಷ್ಯನ ದೇಹ ಆರೋಗ್ಯದಿಂದ ಇರಬೇಕು ಎಂದರೆ ದೇಹಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಪೋಷಕಾಂಶಗಳು ಸಿಗಬೇಕು. ಆಗಿದ್ದಾಗ ಮಾತ್ರ ಮನುಷ್ಯ ಯಾವುದೇ ಕಾಯಿಲೆಗಳು ಇಲ್ಲದೆ ನೆಮ್ಮದಿಯಾಗಿ ಇರಬಹುದು. ಮನುಷ್ಯನಿಗೆ ಆಕಾಶದಷ್ಟು ಎತ್ತರಕ್ಕೆ ಆಸೆಗಳು ಖಂಡಿತ ಇದೆ ಆದರೆ ಎಲ್ಲವನ್ನು ಸಾಧಿಸಲು ಮೊದಲು ಆರೋಗ್ಯ ಸುಸ್ಥಿತಿಯಲ್ಲಿ ಇರಬೇಕು. ಹಾಗಾಗಿ ಮೊದಲು ಆರೋಗ್ಯಕ್ಕೆ ಗಮನಕೊಟ್ಟರೆ ಉಳಿದೆಲ್ಲವೂ ಸರಾಗವಾಗಿ ಸಾಗುತ್ತದೆ ಎನ್ನಬಹುದು. ಆದರೆ ಈಗಿನ ಕಾಲದಲ್ಲಿ ಆಹಾರ ಪದ್ದತಿ ಅನುಸರಣೆ ಸಂಪೂರ್ಣವಾಗಿ ಹದಗೆಟ್ಟು ಹೋಗಿರುವುದರಿಂದ ಮನುಷ್ಯ ಆಹಾರವನ್ನು ಸೇವಿಸಿದರು ಕೂಡ ಅಗತ್ಯವಾದ ಪೋಷಕಾಂಶಗಳು ಅದರಿಂದ ದೊರೆಯದೆ ಅವುಗಳ ಕೊರತೆಗೆ ಈಡಾಗುತ್ತಾನೆ. ಅದರಲ್ಲೂ ಮುಖ್ಯವಾಗಿ ವಿಟಮಿನ್ ಗಳ ಕೊರತೆ. ಮನುಷ್ಯನ ದೇಹಕ್ಕೆವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ವಿಟಮಿನ್ ಡಿ ಮತ್ತು ವಿಟಮಿನ್ ಕೆ ಎನ್ನುವ 5 ತರಹದ ವಿಟಮಿನ್ ಗಳು ಅವಶ್ಯಕತೆ ಇದೆ.

ಅವುಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ವಿಟಮಿನ್ ಬಿ12 ಕೊರತೆ ಅನುಭವಿಸುತ್ತಿರುವವರನ್ನು ಪ್ರತಿದಿನವೂ ಕೂಡ ನಾವು ನಮ್ಮ ಕುಟುಂಬಗಳಲ್ಲಿ, ಸ್ನೇಹಿತರಲ್ಲಿ ಮತ್ತು ನಮ್ಮ ಸುತ್ತಮುತ್ತ ಇರುವವರಲ್ಲಿ ನೋಡುತ್ತಿರುತ್ತೇವೆ. ವಿಟಮಿನ್ 12 ಕೊರತೆ ಉಂಟಾದವರು ನರ ದೌರ್ಬಲತೆಯಿಂದ ಬಳಲುತ್ತಾರೆ, ಹೃದಯ ಸಂಬಂಧಿತ ಸಮಸ್ಯೆಗೆ ತುತ್ತಾಗುತ್ತಾರೆ. ಇವರಿಗೆ ಮಾಂಸ ಖಂಡಗಳ ಸೆಳೆತ ಹೆಚ್ಚಾಗಿ ಕಾಡುತ್ತಿರುತ್ತದೆ. ಕಣ್ಣಿಗೆ ಸಂಬಂಧಪಟ್ಟ ದೋಷಗಳಾದ ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ಇರುಳುಗುರುಡುತನ, ಕಣ್ಣಿನ ನರಗಳ ಸಮಸ್ಯೆ ಇವರಲ್ಲಿ ಹೆಚ್ಚಾಗಿ ಬಾಧಿಸುತ್ತದೆ. ಈ ರೀತಿ ಸಮಸ್ಯೆಗಳು ನಮಗೆ ಬರಬಾರದು ಎಂದರೆ ವಿಟಮಿನ್ ಬಿ 12 ಕೊರತೆ ಆಗದಂತೆ ನೋಡಿಕೊಳ್ಳಬೇಕು ಆದರೆ ಇವುಗಳ ಕೊರತೆ ಉಂಟಾದಾಗ ಹೆಚ್ಚಿನ ಜನರು ವಿಟಮಿನ್ b12 ಮಾತ್ರೆಗಳನ್ನು ಸೇವಿಸಲು ಆರಂಭಿಸುತ್ತಾರೆ.

WhatsApp Group Join Now
Telegram Group Join Now

ಆದರೆ ಇದು ಸರಿಯಾದ ಮಾರ್ಗ ಅಲ್ಲ ಆದಷ್ಟು ನೈಸರ್ಗಿಕವಾಗಿ ನಾವು ನಮ್ಮ ದೇಹಕ್ಕೆ ವಿಟಮಿನ್ ಬಿ ಪೋಷಕಾಂಶ ದೊರೆಯುವ ಆಹಾರಗಳನ್ನು ಸೇವಿಸಿ ಅವುಗಳ ಕೊರತೆಯನ್ನು ನೀಗಿಸಿಕೊಳ್ಳಬೇಕು. ಏಕದಳ ಧಾನ್ಯಗಳಾದ ರಾಗಿ ಮತ್ತು ಜೋಳ ಗಳಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ವಿಟಮಿನ್ ಬಿ 12 ಕೊರತೆ ಸರಿ ಮಾಡಿಕೊಳ್ಳಬಹುದು. ಮತ್ತು ಹಣ್ಣು ಹಾಗೂ ತರಕಾರಿಗಳು ಮತ್ತು ಹಸಿರು ಸೊಪ್ಪುಗಳನ್ನು ಸೇವಿಸುವುದರಿಂದ ಕೂಡ ವಿಟಮಿನ್ ಬಿ12 ದೇಹಕ್ಕೆ ಸೇರುತ್ತದೆ. ಇವುಗಳ ಜೊತೆ ಧೂಮಪಾನ ಮತ್ತು ಮಧ್ಯಪಾನ ಈ ರೀತಿ ದುಶ್ಚಟಗಳು ಇರುವ ವ್ಯಕ್ತಿಗಳು ಅವುಗಳನ್ನು ತ್ಯಜಿಸುವುದರಿಂದ ಕೂಡ ದೇಹಕ್ಕೆ ವಿಟಮಿನ್ b12 ಕೊರತೆ ಉಂಟಾಗುವುದು ಕಡಿಮೆ ಆಗುತ್ತದೆ.



crossorigin="anonymous">