ದ್ರೌಪದಿ ಮುರ್ಮು ಸಂಕ್ಷಿಪ್ತ ಜೀವನ ಚರಿತ್ರೆ ..ಇವರು ಯಾರು ಇವರ ತಂದೆ ತಾಯಿ,ಊರು ಸಂಪೂರ್ಣ ವಿವರ ನೋಡಿ - Karnataka's Best News Portal

ದ್ರೌಪದಿ ಮುರ್ಮು ಸಂಕ್ಷಿಪ್ತ ಜೀವನ ಚರಿತ್ರೆ ..ಇವರು ಯಾರು ಇವರ ತಂದೆ ತಾಯಿ,ಊರು ಸಂಪೂರ್ಣ ವಿವರ ನೋಡಿ

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಸಂಕ್ಷಿಪ್ತ ಜೀವನ ಚರಿತ್ರೆ.ಭಾರತದ ನೂತನ ರಾಷ್ಟ್ರಪತಿ ಆದಂತಹ ದ್ರೌಪದಿ ನಿರ್ಮಾಣವರು 20 ಜೂನ್ 1958 ರಲ್ಲಿ ಒಡಿಸ್ಸಾ ರಾಜ್ಯದ ಬೈದಪೋಸಿ ಎಂಬ ಗ್ರಾಮದಲ್ಲಿ ಜನಿಸುತ್ತಾರೆ. ಇವರ ತಂದೆಯ ಹೆಸರು ಬಿರಂಚಿ ನಾರಾಯಣ ತುಡು ಹಾಗೆಯೆ ದ್ರೌಪದಿ ಮುರ್ಮು ಅವರ ತಾತನ ಹೆಸರು ಮಯೂರ್ಭಂಜ್ ಇವರ ಸಹೋದರನ ಹೆಸರು ಭಗತ್ ತುಡು. ಹಾಗೆಯೇ ಇವರ ಸಹೋದರಿಯ ಹೆಸರು ಸರಣಿ ತುಡು, ಇವರ ಪತಿಯ ಹೆಸರು ಶ್ಯಾಮ್ ಚರಣ್ ಮುರ್ಮು ಇವರು 2014ರಲ್ಲಿ ನಿಧನರಾಗಿದ್ದಾರೆ. ಹಾಗೆಯೆ ಇವರಿಗೆ ಇಬ್ಬರು ಗಂಡು ಮಕ್ಕಳು ಒಬ್ಬಳು ಮಗಳಿದ್ದಾಳೆ ಇವರ ಮೊದಲನೆಯ ಮಗ ಲಕ್ಷ್ಮಣ್ ಮುರ್ಮು ಹಾಗೆಯೇ ಇವರ ಮಗಳ ಹೆಸರು ಇತಿಶ್ರೀ. ಇವರು ಮೂಲತಃ ಹಿಂದೂ ಧರ್ಮದವರಾಗಿದ್ದು ಸಂತಾಲ್ ಎಂಬಂತಹ ಜಾತಿ ವರ್ಗದವರಾಗಿದ್ದಾರೆ.

ಇವರು ರಮಾದೇವಿ ಮಹಿಳಾ ಮಹಾ ವಿಶ್ವವಿದ್ಯಾಲಯದಲ್ಲಿ ಇವರು ಪದವಿಯನ್ನು ಮಾಡುತ್ತಾರೆ. ಇವರು ಶಿಕ್ಷಕಿಯಾಗಿ, ಸಮಾಜ ಸೇವಕಿಯಾಗಿ, ರಾಜಕಾರಣಿಯಾಗಿ ಇವರು ಸೇವೆಯನ್ನು ಸಲ್ಲಿಸಿದ್ದಾರೆ. ದ್ರೌಪದಿ ಮುರ್ಮು ಅವರು 1997ರಲ್ಲಿ ರಾಜಕೀಯಕ್ಕೆ ಪಾದರ್ಪಣೆಯನ್ನು ಮಾಡಿರುತ್ತಾರೆ. ಇವರು ಭಾರತೀಯ ಜನತಾ ಪಕ್ಷದ ಪರವಾಗಿದ್ದಾರೆ ಹಾಗೆ ಇವರು ರಾಯರಂಗಾಪುರದಲ್ಲಿ ಪಂಚಾಯತ್ ಅಧ್ಯಕ್ಷರಾಗಿಯೂ ಸಹ ಸೆಲೆಕ್ಟ್ ಆಗುತ್ತಾರೆ, ರಾಯರಂಗಾಪುರದ ಕಡೆಯಿಂದ ಇವರು 2000 ನೇ ಇಸವಿಯಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾರೆ, ಎರಡನೇ ಬಾರಿಯೂ ಸಹ 2004 ಅದೇ ಸ್ಥಳದಲ್ಲಿ ಇವರು ಶಾಸಕರಾಗಿ ಆಯ್ಕೆಯಾಗುತ್ತಾರೆ. 2007 ರಲ್ಲಿ ಒಡಿಸ್ಸಾ ವಿಧಾನ ಸಭೆಯಿಂದ ಅತ್ಯುತ್ತಮ ಶಾಸಕಿ ನೀಲಕಂಠ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಾರೆ.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಅಷ್ಟೇ ಅಲ್ಲದೆ ಇವರು ರಾಜ್ಯಪಾಲರಾಗಿಯು ಸಹ ಸೇವೆಯನ್ನು ಸಲ್ಲಿಸಿದ್ದಾರೆ. ಜಾರ್ಖಂಡ್ ನ ಪ್ರಥಮ ಮಹಿಳಾ ರಾಜ್ಯಪಾಲಾಗುತ್ತಾರೆ 2015 ರಿಂದ 2021 ರವರೆಗೆ ರಾಜ್ಯಪಾಲರಾಗಿ ಕೆಲಸವನ್ನು ನಿರ್ವಹಿಸುತ್ತಾರೆ. ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ಮಹಿಳಾ ಬುಡಕಟ್ಟು ಸಮುದಾಯದ ನಾಯಕಿ ಇವರಾಗಿದ್ದಾರೆ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ 21 ಜುಲೈ 2022 ರಲ್ಲಿ ನೇಮಕವಾಗುತ್ತಾರೆ ಇವರು ಭಾರತದ 15 ನೇ ರಾಷ್ಟ್ರಪತಿಯಾಗಿದ್ದಾರೆ. ಇವರ ವಯಸ್ಸು ನೋಡುವುದಾದರೆ ಇವರಿಗೆ 64 ವರ್ಷ, ಅಷ್ಟೇ ಅಲ್ಲದೆ ರಾಷ್ಟ್ರಪತಿ ಆದಂತಹ ಮೊದಲ ಆದಿವಾಸಿ ಮಹಿಳೆ ಇವರಾಗಿದ್ದಾರೆ. ಭಾರತ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎಂಬ ಪಟಕ್ಕೆ ಇವರು ಒಳಗಾಗಿದ್ದಾರೆ ಇದಿಷ್ಟು ನೂತನ ರಾಷ್ಟ್ರಪತಿ ಆದಂತಹ ದ್ರೌಪದಿ ಮುರ್ಮು ಅವರ ಬಗೆಗಿನ ಸಂಕ್ಷಿಪ್ತ ಮಾಹಿತಿ.

[irp]


crossorigin="anonymous">