ವರಮಹಾಲಕ್ಷ್ಮಿ ಹಬ್ಬ ಯಾವಾಗ ಆಗಸ್ಟ್ 5 ಅಥವಾ 12 ವರಮಹಾಲಕ್ಷ್ಮಿ ಪೂಜೆ ಹೇಗೆ ಹಾಗೂ ಯಾವ ಸಮಯದಲ್ಲಿ ಮಾಡಬೇಕು ನೋಡಿ.. » Karnataka's Best News Portal

ವರಮಹಾಲಕ್ಷ್ಮಿ ಹಬ್ಬ ಯಾವಾಗ ಆಗಸ್ಟ್ 5 ಅಥವಾ 12 ವರಮಹಾಲಕ್ಷ್ಮಿ ಪೂಜೆ ಹೇಗೆ ಹಾಗೂ ಯಾವ ಸಮಯದಲ್ಲಿ ಮಾಡಬೇಕು ನೋಡಿ..

ವರಮಹಾಲಕ್ಷ್ಮಿ ಹಬ್ಬ ಯಾವಾಗ ? ಆಗಸ್ಟ್ 5 ಅಥವಾ 12 | ವರಮಹಾಲಕ್ಷ್ಮಿ ಪೂಜೆ ಮಾಡುವ ಸಂಪೂರ್ಣ ಮಾಹಿತಿ..
ವರಮಹಾಲಕ್ಷ್ಮಿ ಹಬ್ಬ 2022 ಆಗಸ್ಟ್ ತಿಂಗಳಲ್ಲಿ ಶ್ರಾವಣ ಮಾಸದಲ್ಲಿ ಬರುವಂತಹ ಈ ವರಮಹಾಲಕ್ಷ್ಮಿ ಹಬ್ಬ 5ನೇ ತಾರೀಖು ಶುಕ್ರವಾರ ಮಾಡಬೇಕಾ ಅಥವಾ 12ನೇ ತಾರೀಖು ಶುಕ್ರವಾರ ಮಾಡಬೇಕಾ ಎಂಬುದು ಹಲವಾರು ಜನ ಅನುಮಾನದಲ್ಲಿ ಇದ್ದಾರೆ, ಶ್ರಾವಣ ಮಾಸದ ಎರಡನೇ ಶುಕ್ರವಾರ ನಮಗೆ ವರಮಹಾಲಕ್ಷ್ಮಿ ಹಬ್ಬ ಅಥವಾ ಶ್ರಾವಣ ಮಾಸದ ಪೌರ್ಣಮಿ ಗೂ ಮೊದಲು ಬರುವಂತಹ ಶುಕ್ರವಾರ ನಮಗೆ ವರಮಹಾಲಕ್ಷ್ಮಿ ಹಬ್ಬ ಎಂದು ಕರೆಯುತ್ತೇವೆ ಆದರೆ ಹಲವಾರು ಜನ ಎರಡನೇ ವಾರ ಮಾಡುವುದಕ್ಕೆ ಆಗುವುದಿಲ್ಲ ಎಂದು ಮೂರನೇ ವಾರವು ಮಾಡುತ್ತಾರೆ ನಾಲ್ಕನೇ ವಾರ ಮಾಡುವಂತಹ ಪದ್ಧತಿಯನ್ನು ನಾವು ನೋಡಿದ್ದೇವೆ ಕೆಲವೊಂದು ಕಾರಣಗಳಿಂದ ನಾಲ್ಕನೇ ವಾರವು ಮಾಡಿರುವುದನ್ನು ನಾವು ಹಲವಾರು ಬಾರಿ ನೋಡಿರುತ್ತೇವೆ.

ವರಮಹಾಲಕ್ಷ್ಮಿ ಹಬ್ಬ ಎಂದರೆ ವರವನ್ನು ಕೊಡುವಂತಹ ಲಕ್ಷ್ಮಿ ಎಂದೇ ಹೇಳುತ್ತಾರೆ ಆದರೆ ಹಲವಾರು ಜನ ವರಮಹಾಲಕ್ಷ್ಮಿ ಎಂದರೆ ದುಡ್ಡು ಎಂಬರ್ಥವಲ್ಲ ಧನ ಧಾನ್ಯ ಕೀರ್ತಿ ಸಂಪತ್ತು ವೃದ್ಧಿ ಜಯ ಇವೆಲ್ಲದಕ್ಕೂ ವೃದ್ಧಿಯನ್ನು ಕೊಡುವಂಥವಳು ಮಹಾಲಕ್ಷ್ಮಿ ಭೀಮನ ಅಮಾವಾಸ್ಯೆ ಆದಂತಹ ಮೊದಲನೇ ಶುಕ್ರವಾರ ಹಾಗಾಗಿ ಎರಡನೇ ಶುಕ್ರವಾರ ನಿಮಗೆ ಐದನೇ ತಾರೀಖು ಬರುತ್ತದೆ 12ನೇ ತಾರೀಖು ನಿಮಗೆ ಪೌರ್ಣಮಿ ದಿನದಂದೇ ಶುಕ್ರವಾರ ಇದೆ ಆದರೆ ಬೆಳಿಗ್ಗೆ 7 ಗಂಟೆ 31 ನಿಮಿಷಕ್ಕೆ ಪೌರ್ಣಮಿ ಮುಗಿದು ಹೋಗುತ್ತದೆ ಹಾಗಾಗಿ ನಾವು ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಹಾಗಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಶ್ರಾವಣ ಮಾಸ ಶುಕ್ಲ ಪಕ್ಷದಲ್ಲಿ ಅಷ್ಟಮಿ ತಿಥಿ ದಿನ ಬರುತ್ತದೆ ಈ ಸಲ.

WhatsApp Group Join Now
Telegram Group Join Now
See also  2024 ಏಪ್ರಿಲ್ ಗುರು,ಮೇಷ ರಾಶಿಯಿಂದ ವೃಷಭಕ್ಕೆ ಪ್ರವೇಶ 12 ರಾಶಿಗಳ ಫಲ ಶ್ರೀ ಸಚ್ಚಿದಾನಂದ ಗುರೂಜಿ ಅವರಿಂದ

ಅಂದರೆ ಆಗಸ್ಟ್ 5ನೇ ತಾರೀಖು ಶುಕ್ರವಾರ ಬೆಳಿಗ್ಗೆ ನೀವು ವರಮಹಾಲಕ್ಷ್ಮಿ ಹಬ್ಬವನ್ನು ಮಾಡಬೇಕು ಈ ದಿನ ಸ್ವಾತಿ ನಕ್ಷತ್ರವು ಇರುವಂತದ್ದು ವಿಶೇಷವಾಗಿಯೇ ಇದೆ ನೀವು ಪೂಜೆ ಮಾಡುವಂತಹ ಸಮಯ ಅಂದರೆ ಬೆಳಿಗ್ಗೆ 6 ಗಂಟೆ 53 ನಿಮಿಷದಿಂದ 8 ಗಂಟೆ 27 ನಿಮಿಷದ ವರೆಗೆ ಬಹಳ ಪ್ರಶಸ್ತವಾದoತಹ ಸಮಯವಾಗಿದೆ. ಸಾಧಾರಣವಾಗಿ ಯಾರು ಕೂಡ ವರಮಹಾಲಕ್ಷ್ಮಿ ಹಬ್ಬಕ್ಕೆ ರಾಹುಕಾಲ ಯಮಗಂಡ ಕಾಲ ಯಾವುದೇ ಸಮಯವನ್ನು ನೋಡುವುದಿಲ್ಲ ಹಾಗಾಗಿ ಬೆಳಗ್ಗಿನ ಸಮಯದಲ್ಲಿ ಮಾಡೋದು ಉತ್ತಮ ಮತ್ತು ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ಬಾಗಿನವನ್ನು ಕೊಟ್ಟು ಸಿಹಿ ತಿನಿಸುಗಳನ್ನು ಕೊಡುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">