ಈ ವರಮಹಾಲಕ್ಷ್ಮಿ ಹಬ್ಬದ ದಿನ ಹೀಗೆ ಮಾಡಿದರೆ ಧನ ಪ್ರಾಪ್ತಿ 5-8-2022 ಮಹಾಲಕ್ಷ್ಮಿ ಅನುಗ್ರಹದಿಂದ ಕುಟುಂಬ ಸೌಖ್ಯ,ಐಶ್ವರ್ಯ ಪ್ರಾಪ್ತಿ.. » Karnataka's Best News Portal

ಈ ವರಮಹಾಲಕ್ಷ್ಮಿ ಹಬ್ಬದ ದಿನ ಹೀಗೆ ಮಾಡಿದರೆ ಧನ ಪ್ರಾಪ್ತಿ 5-8-2022 ಮಹಾಲಕ್ಷ್ಮಿ ಅನುಗ್ರಹದಿಂದ ಕುಟುಂಬ ಸೌಖ್ಯ,ಐಶ್ವರ್ಯ ಪ್ರಾಪ್ತಿ..

ಈ ವರಮಹಾಲಕ್ಷ್ಮಿ ಹಬ್ಬದ ದಿನ ಹೀಗೆ ಮಾಡಿದರೆ ಧನಪ್ರಾಪ್ತಿ ಆಗುತ್ತದೆ.ಈ ವರ್ಷದ ವರಮಹಾಲಕ್ಷ್ಮಿ ಹಬ್ಬ ಆಗಸ್ಟ್ 5 ಶ್ರಾವಣ ಶುಕ್ಲ ಪಕ್ಷ ಶುಕ್ರವಾರದಂದು ಬರಲಿದೆ ಸೂರ್ಯೋದಯಕ್ಕೆ ಸ್ವಲ್ಪ ಮುಂಚಿತವಾಗಿ ಸಪ್ತಮಿ ಇರುತ್ತೆ ನಂತರ ಅಷ್ಠಮಿ ಪ್ರಾರಂಭವಾಗುತ್ತದೆ. ಈ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಏನೆಂದರೆ, ಈ ದಿನದ ಸೂರ್ಯೋದಯಕ್ಕೆ ಒಂದು ಅದ್ಭುತ ಗ್ರಹ ಸ್ಥಿತಿ ಇರುತ್ತದೆ ಈ ದಿನದಲ್ಲಿ ಸೂರ್ಯೋದಯವು ಬೆಳಿಗ್ಗೆ 6 ಗಂಟೆ 9 ನಿಮಿಷ 20 ವರೆ ಸೆಕೆಂಡಿಗೆ ಸಂಭವಿಸುತ್ತದೆ. ನಿಮ್ಮ ಮನೆಯಲ್ಲಿ ಇಷ್ಟು ದಿನಗಳಿಂದ ಹೇಗೆ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೀರೋ ಹಾಗೆಯೇ ಆಚರಣೆ ಮಾಡಿ. ಬಹಳ ಜನರು ಈ ದಿನ ಒಂದು ದೊಡ್ಡ ತಪ್ಪನ್ನು ಮಾಡುತ್ತಾರೆ ಅದು ಏನೆಂದರೆ, ಅವರ ಒಡವೆಗಳನ್ನ ಹಾಗೂ ದುಡ್ಡನ್ನು ಪೂಜಾ ತಟ್ಟೆಯಲ್ಲಿ ಇಟ್ಟು ಎಲ್ಲರಿಗೂ ಪ್ರದರ್ಶನವನ್ನು ಮಾಡುತ್ತಾರೆ ಇದರಿಂದಾಗಿ ದೃಷ್ಟಿ ಬೀಳುವಂತಹ ಸಂದರ್ಭ ಹೆಚ್ಚಾಗಿ ಕಂಡುಬರುತ್ತದೆ ಇದರಿಂದ ಹಾನಿಯೂ ಕೂಡ ಉಂಟಾಗಬಹುದು.

ಇನ್ನೊಂದು ಮುಖ್ಯ ವಿಶೇಷ ಏನೆಂದರೆ, ಈ ಒಂದು ವರಮಹಾಲಕ್ಷ್ಮಿ ಹಬ್ಬದಲ್ಲಿ ಮಾಂಸ ಆಹಾರ ತ್ಯಜಿಸುವುದು ತುಂಬಾ ಒಳ್ಳೆಯದು ಹಬ್ಬದ ದಿನದಿಂದ 21 ದಿನಗಳ ಕಾಲ ಮಾಂಸವನ್ನು ತ್ಯಜಿಸಬೇಕು. ಹಬ್ಬಕ್ಕೆ ಮೂರು ದಿನಗಳ ಮುಂಚೆ ಹಾಗೂ ಮೂರು ದಿನಗಳ ನಂತರ ಬ್ರಹ್ಮಚರ್ಯ ಪಾಲನೆ ಮಾಡಿದರೆ ತುಂಬಾ ಒಳ್ಳೆಯದು. ಹಾಗೆ ಈ ದಿನಗಳಲ್ಲಿ ಆದಷ್ಟು ಮಟ್ಟಿಗೆ ಹೊರಗೆ ಅಥವಾ ಬೇರೆಯವರ ಮನೆಯಲ್ಲಿ ಊಟ ಮಾಡಬೇಡಿ. ನಿಮ್ಮ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸ್ತ್ರೀಯರು ಅಥವಾ ಪುರುಷರು ಮದುವೆ ಆಗದೆ ಇರುವ 16 ವರ್ಷ ತುಂಬಿದವರು ಸಹ ಈ ಒಂದು ವಿಧಾನವನ್ನು ಮಾಡಬಹುದು.

WhatsApp Group Join Now
Telegram Group Join Now
See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಹಬ್ಬಕ್ಕೆ ಎರಡು ಅಥವಾ ಮೂರು ದಿನಗಳ ಮುಂಚೆ 4 ರಿಂದ7 ಪುಷ್ಯರಾಗ ಹರಳು ಹಾಗೆಯೇ 4 ರಿಂದ 7 ಮುತ್ತು, 4 ರಿಂದ 7 ಬಿಳಿ ಹವಳ ಮನೆಗೆ ತಂದು ಒಂದು ಸಣ್ಣ ಮಡಿಕೆಯಲ್ಲಿ ಅದನ್ನು ಹಾಕಿಡಿ. ಶುದ್ಧೀಕರಣ ಎಂದರೆ ಕನಿಷ್ಠ ಎರಡು ಗಂಟೆಗಳ ಕಾಲ ಒಂದು ಬೆಳ್ಳಿ ಲೋಟದಲ್ಲಿ ಹಸಿ ಹಾಲು ಮಿಶ್ರಿತ ಜೇನುತುಪ್ಪದಲ್ಲಿ ನೆನೆಸಿಡಬೇಕು ಆನಂತರ ನೀರಲ್ಲಿ ತೊಳೆಯಬೇಕು. ಆ ಒಂದು ಮಡಿಕೆಗೆ ಹಳದಿ ಅಥವಾ ಅರಿಶಿನದ ಬಟ್ಟೆಯನ್ನು ಸುತ್ತಿ ಅದನ್ನು ದೇವರ ಕೋಣೆ ಅಥವಾ ಪೂಜಾ ಸ್ಥಳದಲ್ಲಿ ಇಡಬೇಕು ಹಬ್ಬದ ದಿನ ಬೆಳಗ್ಗೆ ಅಮ್ಮನವರ ಪೂಜೆ ಪ್ರಾರಂಭವಾಗುವ ಮುಂಚೆಯೇ ಕುಬೇರೆ ಲಕ್ಷ್ಮಿ ಸ್ತೋತ್ರವನ್ನು ಜಪಿಸಿ.

[irp]


crossorigin="anonymous">