ಮನೆಯಲ್ಲಿ ಗಡಿಯಾರವನ್ನು ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಇಡಬೇಡಿ,ಯಾವ ದಿಕ್ಕಿಗೆ ಗಡಿಯಾರ ಹಾಕಿದರೆ ಒಳ್ಳೆಯದು ಗೊತ್ತಾ ? » Karnataka's Best News Portal

ಮನೆಯಲ್ಲಿ ಗಡಿಯಾರವನ್ನು ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಇಡಬೇಡಿ,ಯಾವ ದಿಕ್ಕಿಗೆ ಗಡಿಯಾರ ಹಾಕಿದರೆ ಒಳ್ಳೆಯದು ಗೊತ್ತಾ ?

ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಡರೆ ಒಳ್ಳೆಯದು ಗೊತ್ತ.ಮನೆಯಲ್ಲಿ ನೀವು ರೂಮ್ ಗಳಲ್ಲಿ ಎದ್ದ ತಕ್ಷಣ ಗಡಿಯಾರಗಳನ್ನ ನೋಡಬೇಡಿ ನಿಮ್ಮ ರೂಮ್ ನಲ್ಲಿ ಗಡಿಯಾರ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎದ್ದ ತಕ್ಷಣ ಗಡಿಯಾರ ನೋಡುವುದು ಗಾಬರಿಯಲ್ಲಿ ಎದ್ದೇಳುವುದು ಒಳ್ಳೆಯದಲ್ಲ ಯಾವಾಗಲೂ ನೀವು ಗಡಿಯಾರವನ್ನ ಹಾಲ್ ಗಳಲ್ಲಿ ಹಾಕಿ, ಅಥವಾ ರೂಮ್ ಗಳಲ್ಲಿ ನೀವು ಗಡಿಯಾರವನ್ನು ಹಾಕಿಕೊಂಡರು ಸಹ ಎದ್ದ ತಕ್ಷಣ ನಿಮಗೆ ಕಾಣುವ ರೀತಿಯಲ್ಲಿ ಹಾಕಿಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ಯಾವಾಗಲೂ ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಗಡಿಯಾರವನ್ನು ಹಾಕಿಕೊಳ್ಳುವುದು ತುಂಬಾ ಒಳ್ಳೆಯದು ಯಾವ ರೀತಿ ಒಳ್ಳೆಯದಾಗುತ್ತೆ ಎಂದರೆ ಯಾವುದೋ ಒಂದು ಕೆಲಸ ನಿಂತು ಹೋಗಿದ್ದರೆ ಅಥವಾ ಯಾವುದೋ ಒಂದು ಹಣ ನಿಮಗೆ ಬರಬೇಕಾಗಿದ್ದರೆ, ಯಾವುದೇ ಸರ್ಕಾರಕ್ಕೆ ಸಂಬಂಧಿಸಿದ ಕೆಲಸ ತುಂಬಾ ದಿನದಿಂದ ಆಗಬೇಕು ಅಂದುಕೊಂಡಿದ್ದರೆ ನಿಂತಿರುವ ಕೆಲಸಗಳಿಗೆ ಚಾಲನೆ ಕೊಡಬೇಕಾದರೆ ನಾವು ಉತ್ತರ ದಿಕ್ಕಿನಲ್ಲಿ ಗಡಿಯಾರವನ್ನು ಹಾಕಬೇಕು.

WhatsApp Group Join Now
Telegram Group Join Now

ಹಾಗೆಯೇ ಪೂರ್ವಕ್ಕೆ ಗಡಿಯಾರವನ್ನು ಹಾಕಿದರೂ ಸಹ ಒಳ್ಳೆಯದಾಗುತ್ತದೆ ನಿಮ್ಮ ಮನಸ್ಸು ಸುಭೀಕ್ಷವಾಗಿ, ಆರೋಗ್ಯವಾಗಿ ಮನೆಯಲ್ಲಿ ಎಲ್ಲರಿಗೂ ಏಳಿಗೆ ಆಗಬೇಕು ಎಂದರೆ ಪೂರ್ವಕ್ಕೆ ನೀವು ಗಡಿಯಾರವನ್ನು ಹಾಕಿಕೊಳ್ಳಬೇಕು. ತುಂಬಾ ಜನರ ಮನೆಯಲ್ಲಿ ಗಡಿಯಾರವನ್ನು 5 ನಿಮಿಷ 10 ನಿಮಿಷ ಫಾಸ್ಟ್ ಆಗಿ ಇಟ್ಟು ಕೊಂಡಿರುತ್ತೀರಾ ಆದರೆ ಆ ರೀತಿಯಾದಂತಹ ಕೆಲಸವನ್ನು ಯಾವತ್ತಿಗೂ ಮಾಡಿಕೊಳ್ಳಬೇಡಿ ಇದರಿಂದ ನಿಮ್ಮ ಮನಸ್ಸಿಗೆ ಗಾಬರಿ ಉಂಟಾಗುವುದು ಇದರಿಂದ ನಿಮ್ಮ ಆರೋಗ್ಯ ಹದಗಿಡುತ್ತದೆ. ಆದ್ದರಿಂದ ಯಾವಾಗಲೂ ಸಹ ಗಡಿಯಾರವನ್ನು ಸ್ಲೋ ಅಥವಾ ಫಾಸ್ಟ್ ನಲ್ಲಿಯೂ ಇಡಬಾರದು ಪರ್ಫೆಕ್ಟ್ ಟೈಮ್ ಅನ್ನು ನೀವು ಗಡಿಯಾರದಲ್ಲಿ ಇಟ್ಟುಕೊಳ್ಳಬೇಕು.

ಹಾಗೆಯೇ ನಿಂತಿರುವಂತಹ ಗಡಿಯಾರಗಳು ಮನೆಯಲ್ಲಿ ಇಡಬಾರದು ಇದು ನೆಗೆಟಿವ್ ಎನರ್ಜಿಯನ್ನ ಉಂಟುಮಾಡುತ್ತದೆ ಆದ್ದರಿಂದ ನೀವು ನಿಮ್ಮ ಮನೆಗಳಲ್ಲಿ ನಿಂತಿರುವಂತಹ ಗಡಿಯಾರಗಳನ್ನ ಯಾವತ್ತಿಗೂ ಇಟ್ಟುಕೊಳ್ಳಬೇಡಿ. ಹಾಗೆಯೇ ಯಾರಿಗಾದರೂ ಸಹ ಗಡಿಯಾರವನ್ನು ದಾನ ಮಾಡಲು ಹೋಗಬೇಡಿ ಈ ರೀತಿಯಾಗಿ ಮಾಡುವುದರಿಂದ ನಿಮಗೆ ಒಳ್ಳೆಯ ಸಮಯ ಇದ್ದರೆ ನೀವು ಆ ಒಳ್ಳೆಯ ಸಮಯವನ್ನು ಬೇರೆಯವರಿಗೆ ಶೇರ್ ಮಾಡಿಕೊಂಡಂತೆ ಆಗುತ್ತದೆ, ಅಥವಾ ನಿಮಗೆ ಕೆಟ್ಟ ಸಮಯ ಆಗಿದ್ದರೆ ನಿಮ್ಮ ಕೆಟ್ಟ ಸಮಯವನ್ನು ಅವರೊಂದಿಗೆ ಶೇರ್ ಮಾಡಿಕೊಂಡಿದ್ದಂತೆ ಆಗುತ್ತದೆ ಆದ್ದರಿಂದ ನೀವು ಗಡಿಯಾರಗಳನ್ನು ಎಂದಿಗೂ ದಾನ ಮಾಡಬೇಡಿ. ಹಾಗೆಯೇ ಯಾವ ಸಮಾರಂಭಗಳಿಗಾದರೂ ಸರಿ ಗಡಿಯಾರಗಳನ್ನ ಗಿಫ್ಟ್ ಗಳನ್ನಾಗಿ ನೀಡುವುದನ್ನು ತಪ್ಪಿಸಿ. ಹಾಗೆ ನೀವು ದಕ್ಷಿಣ ಭಾಗದಕ್ಕೆ ಗಡಿಯಾರಗಳನ್ನು ಹಾಕಬಾರದು.



crossorigin="anonymous">