ಇಂದು ಶಕ್ತಿಶಾಲಿ ಭೀಮನ ಅಮವಾಸ್ಯೆ ಹಾಗೂ ಗುರು ಪುಷ್ಯಮಿ ಯೋಗದ ದಿನ ಈ 8 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ,ಹಣದ ಲಾಭ ಅಖಂಡ ಏಳಿಗೆ ಖಚಿತ‌. » Karnataka's Best News Portal

ಇಂದು ಶಕ್ತಿಶಾಲಿ ಭೀಮನ ಅಮವಾಸ್ಯೆ ಹಾಗೂ ಗುರು ಪುಷ್ಯಮಿ ಯೋಗದ ದಿನ ಈ 8 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ,ಹಣದ ಲಾಭ ಅಖಂಡ ಏಳಿಗೆ ಖಚಿತ‌.

ಮೇಷ ರಾಶಿ: ಕುಟುಂಬದ ಹಿರಿಯ ಸದಸ್ಯರೊಂದಿಗೆ ಮುಂದಿನ ಭವಿಷ್ಯವನ್ನು ಚಿಂತನೆ ಮಾಡಿ. ಇದರ ಜೊತೆಗೆ ಮನೆಯ ಹಿರಿಯರಂತೆಗೆ ಕೆಲವು ಸಮಯವನ್ನು ಕಳೆಯಿರಿ ಹಾಗೂ ಸೇವೆ ಮಾಡುತ್ತಾ ಇಂದು ಅವರ ಆರೋಗ್ಯದ ಬಗ್ಗೆ ವಿಚಾರ ಕೂಡ ಮಾಡಿ. ಹಣಕಾಸು ವಿಚಾರದಲ್ಲಿ ಈ ದಿನ ಉತ್ತಮವಾಗಿರುವುದಿಲ್ಲ.ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ:ಬಿಳಿ ಉತ್ತಮ ಸಮಯ: ಬೆಳಗ್ಗೆ 07:00ರಿಂದ ಮಧ್ಯಾಹ್ನ 2:30 ವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ: ಇಂದಿನ ನಿಮ್ಮ ಪರಿಸ್ಥಿತಿಯು ಕೆಲವು ಸಂದರ್ಭಗಳಲ್ಲಿ ಉತ್ತಮವಾಗಿರುತ್ತದೆ ಹಾಗೆಯೇ ಕೆಲವು ಸಂದರ್ಭಗಳಲ್ಲಿ ಪ್ರತಿಕೂಲವಾಗಿರುತ್ತದೆ. ಮಗುವಿನ ವಿಷಯದ ಕುರಿತಾದ ಸಂತೋಷದ ಸುದ್ದಿಯನ್ನು ಕೂಡ ಇಂದು ನೀವು ಕೇಳುವ ಸಾಧ್ಯತೆಗಳಿವೆ. ಇದರಿಂದ ಮನೆಯಲ್ಲಿ ಸಂತೋಷದ ವಾತಾವರಣ ಉಂಟಾಗುತ್ತದೆ.
ಅದೃಷ್ಟದ ಸಂಖ್ಯೆ:5 ಅದೃಷ್ಟದ ಬಣ್ಣ:ನೇರಳೆ ಉತ್ತಮ ಸಮಯ: ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಮಿಥುನ ರಾಶಿ: ಈ ದಿನ ಹಣಕಾಸು ವಿಷಯದ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಿ. ಮತ್ತು ನಿಮ್ಮ ವಿರೋಧಿಗಳ ಜೊತೆಗೂ ಕೂಡ ಬಹಳ ಜಾಗ್ರತೆಯಿಂದ ಇರುವುದು ಮುಖ್ಯವಾಗುತ್ತದೆ. ವ್ಯಾಪಾರಸ್ಥರಿಗೆ ಹಣದ ಕೊರತೆಯಿಂದಾಗಿ ಕೆಲಸಗಳು ಸ್ಥಗಿತಗೊಳ್ಳಬಹುದು. ಆದರೆ ಆದಷ್ಟು ಬೇಗ ನಿಮ್ಮ ಎಲ್ಲ ತೊಂದರೆಗಳು ಕೂಡ ಪರಿಹಾರವಾಗುವ ಮಾರ್ಗಗಳು ಗೋಚರಿಸುತ್ತದೆ.
ಅದೃಷ್ಟದ ಸಂಖ್ಯೆ:4 ಅದೃಷ್ಟದ ಬಣ್ಣ:ಹಳದಿ ಉತ್ತಮ ಸಮಯ: ಬೆಳಗ್ಗೆ 11:30 ರಿಂದ ಮಧ್ಯಾಹ್ನ 2 ರವರೆಗೆ.

ಕಟಕ ರಾಶಿ: ಅನಗತ್ಯ ಖರ್ಚು ಮಾಡುವುದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಾರಿ ಆರ್ಥಿಕ ಒಡತೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗದಲ್ಲಿ ಇರುವ ಜನರ ಕಷ್ಟಪಟ್ಟು ಕೆಲಸವನ್ನು ಮಾಡಬೇಕಾಗುತ್ತದೆ. ವ್ಯಾಪಾರಿಗಳು ದೊಡ್ಡ ಪರಿಹಾರವನ್ನು ಕೂಡ ಪಡೆಯಬಹುದು.
ಅದೃಷ್ಟದ ಸಂಖ್ಯೆ:5 ಅದೃಷ್ಟದ ಬಣ್ಣ:ಕೇಸರಿ ಉತ್ತಮ ಸಮಯ: ಬೆಳಗ್ಗೆ 8:30 ರಿಂದ 10ರವರೆಗೆ.

ಸಿಂಹ ರಾಶಿ: ಇಂದು ನೀವು ಆದಷ್ಟು ಧೈರ್ಯ ಹಾಗೂ ಬುದ್ದಿವಂತಿಕೆಯಿಂದ ವರ್ತಿಸಿ. ನಿಮ್ಮ ಸ್ವಲ್ಪ ಆಜಾಗರಿಕತೆ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ವೈಯುಕ್ತಿಕ ಜೀವನದಲ್ಲಿ ಜೀವನ ಸಂಗಾತಿಯೊಂದಿಗೆ ಬಿರುಕು ಉಂಟಾಗುವ ಸಾಧ್ಯತೆಗಳಿವೆ. ಇದರಿಂದ ಇಂದು ನೀವು ನಿಮ್ಮ ಮಾತುಗಳು ಹಾಗೂ ನಡವಳಿಕೆ ಬಗ್ಗೆ ಗಮನ ಇಟ್ಟುಕೊಳ್ಳಬೇಕಾಗುತ್ತದೆ.
ಅದೃಷ್ಟದ ಸಂಖ್ಯೆ:2 ಅದೃಷ್ಟದ ಬಣ್ಣ:ಹಳದಿ ಉತ್ತಮ ಸಮಯ: ಬೆಳಗ್ಗೆ 07:00ರಿಂದ ಮಧ್ಯಾಹ್ನ 02:00ರವರೆಗೆ.

ಕನ್ಯಾ ರಾಶಿ: ನೀವು ಇಂದು ನಿಮ್ಮ ಕಚೇರಿಯಲ್ಲಿ ಗೌರವವನ್ನು ಪಡೆಯುತ್ತೀರಿ. ಹಾಗೇ ಉನ್ನತ ಸ್ಥಾನವನ್ನು ಕೂಡ ಪಡೆಯುವ ಬಲವಾದ ಸಾಧ್ಯತೆಗಳಿವೆ. ಇದೆಲ್ಲವು ಹಿಂದೆ ನೀವು ಮಾಡಿರುವ ಕಠಿಣ ಪರಿಶ್ರಮದ ಫಲವಾಗಿರುತ್ತದೆ. ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟ ಜನರಿಗೆ ಇಂದು ಬಹಳ ಉತ್ತಮವಾದ ದಿನವಾಗಿರುತ್ತದೆ.
ಅದೃಷ್ಟದ ಸಂಖ್ಯೆ:4 ಅದೃಷ್ಟದ ಬಣ್ಣ:ಬಿಳಿ ಉತ್ತಮ ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ.

ತುಲಾ ರಾಶಿ: ಕೆಲಸ ಮಾಡುವವರಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ಏಕೆಂದರೆ ಕೆಲಸದ ಜಾಗದಲ್ಲಿ ಹೊಸ ಜವಾಬ್ದಾರಿಗಳು ನಿಮಗಾಗಿ ಬರಲಿವೆ. ಇದರಿಂದ ನಿಮಗೆ ಬಹಳ ಸಂತೋಷ ಕೂಡ ಆಗುತ್ತದೆ ಈ ಅವಕಾಶದೊಂದಿಗೆ ನಿಮಗೆ ಪ್ರಗತಿಯ ಹಾದಿಯೂ ಕೂಡ ತೆರೆದುಕೊಳ್ಳುತ್ತದೆ ಹಾಗಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಬಳಸಿಕೊಳ್ಳಿ.
ಅದೃಷ್ಟದ ಸಂಖ್ಯೆ:2 ಅದೃಷ್ಟದ ಬಣ್ಣ:ಕೇಸರಿ ಉತ್ತಮ ಸಮಯ: ಬೆಳಿಗ್ಗೆ 09:30ರಿಂದ 12:00ರವರೆಗೆ.

ವೃಶ್ಚಿಕ ರಾಶಿ: ವಿನಾಕಾರಣ ಕಚೇರಿಯಲ್ಲಿ ಯಾರ ಮೇಲೂ ಆರೋಪ ಮಾಡಲು ಹೋಗಬೇಡಿ. ಈ ದಿನ ಆಹಾರದ ವಿಷಯದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಿ. ಇಲ್ಲವಾದಲ್ಲಿ ಅನಾರೋಗ್ಯದ ಸಮಸ್ಯೆಗಳಿಗೆ ನೀವು ಗುರಿಯಾಗುತ್ತೀರಿ. ಕಾನೂನು ಹಾಗೂ ವ್ಯಾಜ್ಯಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳಿಂದ ಇಂದು ನೀವು ಮುಕ್ತಿ ಹೊಂದುತ್ತೀರಿ.
ಅದೃಷ್ಟದ ಸಂಖ್ಯೆ:6 ಅದೃಷ್ಟದ ಬಣ್ಣ:ಕೆಂಪು ಉತ್ತಮ ಸಮಯ: ಬೆಳಗ್ಗೆ 07:00ರಿಂದ ಮಧ್ಯಾಹ್ನ 12:00ರವರೆಗೆ.

ಧನಸ್ಸು ರಾಶಿ: ಇಂದು ನೀವು ಹೊಸ ವಿಷಯಗಳನ್ನು ಕಲಿಯಲು ಬಹಳ ಆಸಕ್ತಿ ಹೊಂದಿರುತ್ತೀರಿ. ಆದರೂ ಕೂಡ ಪರಿಸ್ಥಿತಿಗೆ ಅನಿವಾರ್ಯವಾಗಿ ಅದಕ್ಕೆ ಸರಿಹೊಂದುವ ರೀತಿ ನಿಮ್ಮನ್ನು ನೀವು ರೂಪಿಸಿಕೊಳ್ಳುವುದು ಅಥವಾ ಬದಲಾಯಿಸಿಕೊಳ್ಳುವುದು ಉತ್ತಮ. ಇಂದು ನೀವು ನಿಮ್ಮಲ್ಲೇ ನೀವು ಬದಲಾವಣೆ ತರಲು ಕೂಡ ಪ್ರಯತ್ನ ಮಾಡುತ್ತೀರಿ ಮತ್ತು ಯಶಸ್ವಿಯಾಗುತ್ತೀರಿ.
ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ:ಹಸಿರು ಉತ್ತಮ ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 02:00ರವರೆಗೆ.

ಮಕರ ರಾಶಿ: ಆರೋಗ್ಯದ ದೃಷ್ಟಿಯಿಂದ ಈ ದಿನ ಅಷ್ಟೊಂದು ಉತ್ತಮವಾದ ದಿನವಲ್ಲ. ಇಂದು ನಿಮಗೆ ಆಯಾಸ ಹಾಗೂ ನಿದ್ರಾಹೀನತೆ ಸಮಸ್ಯೆ ಕಾಡಬಹುದು. ಅದರಿಂದ ನೀವು ಮಲಗುವುದು ಹಾಗೂ ಊಟ ಮಾಡೋದು ಇವುಗಳನ್ನೆಲ್ಲ ಕ್ರಮಬದ್ಧವಾಗಿ ಸರಿಯಾದ ಸಮಯಕ್ಕೆ ಮಾಡಬೇಕಾಗುತ್ತದೆ.
ಅದೃಷ್ಟದ ಸಂಖ್ಯೆ:1 ಅದೃಷ್ಟದ ಬಣ್ಣ:ಹಸಿರು ಉತ್ತಮ ಸಮಯ: ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:30ರವರೆಗೆ.

ಕುಂಭ ರಾಶಿ: ಇಂದು ಹೊಸ ವ್ಯಾಪಾರವನ್ನು ಪ್ರಾರಂಭಿಸಲು ಯೋಚನೆ ಮಾಡುತ್ತೀರಿ. ಇದಕ್ಕೆ ಕಾರಣವೂ ನಿಮ್ಮ ಹಳೆಯ ವ್ಯವಹಾರವು ಇದುವರೆಗೆ ಹೇಳಿಕೊಳ್ಳುವಂತಹ ಸಮಾಧಾನ ನೀಡುತ್ತಿಲ್ಲ. ಇದರಿಂದ ನೀವು ವಿಚಲಿತರಾಗುವ ಬದಲು ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವ ಉಪಾಯದ ಬಗ್ಗೆ ಯೋಚಿಸುವುದು ಒಳ್ಳೆಯದು.
ಅದೃಷ್ಟದ ಸಂಖ್ಯೆ:9 ಅದೃಷ್ಟದ ಬಣ್ಣ:ನೀಲಿ ಉತ್ತಮ ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 01:00ವರೆಗೆ.

ಮೀನ ರಾಶಿ: ಈ ದಿನ ಹಣದ ವಿಚಾರದ ನಿರ್ಧಾರಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಿ. ನೀವೇನಾದರೂ ಸಾಲ ತೆಗೆದುಕೊಂಡಿದ್ದರೆ ಮುಂದಿನ ದಿನಗಳಲ್ಲಿ ಅದನ್ನು ಬೇಗನೆ ತೀರಿಸುವ ಪ್ರಯತ್ನ ಮಾಡಿ. ಉದ್ಯೋಗಿಗಳಿಗೆ ಬಹಳ ಕಾರ್ಯನಿರತವಾದ ದಿನವಾಗಿರುತ್ತದೆ. ಮತ್ತು ಈ ದಿನ ಕಚೇರಿಯಲ್ಲಿ ಬಹಳ ಕೆಲಸದ ಹೊರೆ ಇರುತ್ತದೆ.
ಅದೃಷ್ಟದ ಸಂಖ್ಯೆ:5 ಅದೃಷ್ಟದ ಬಣ್ಣ:ಕೇಸರಿ ಉತ್ತಮ ಸಮಯ: ಬೆಳಗ್ಗೆ 07:30ರಿಂದ ಮಧ್ಯಾಹ್ನ 2ರವರೆಗೆ.

[irp]


crossorigin="anonymous">