ನಮ್ಮ ಹಾಡು ಮಾರಿಕೊಂಡು ಕೋಡಿಗಟ್ಟಲೆ ದುಡ್ಡು ಮಾಡಿದ್ದಾವೆ ಕ್ಯಾಸೆಟ್ ಕಂಪೆನಿಗಳು.ಮಳವಳ್ಳಿ ಮಹದೇವಸ್ವಾಮಿ ಅವರ ಭಾವುಕ ಮಾತುಗಳು.. » Karnataka's Best News Portal

ನಮ್ಮ ಹಾಡು ಮಾರಿಕೊಂಡು ಕೋಡಿಗಟ್ಟಲೆ ದುಡ್ಡು ಮಾಡಿದ್ದಾವೆ ಕ್ಯಾಸೆಟ್ ಕಂಪೆನಿಗಳು.ಮಳವಳ್ಳಿ ಮಹದೇವಸ್ವಾಮಿ ಅವರ ಭಾವುಕ ಮಾತುಗಳು..

ನಮ್ಮ ಹಾಡು ಮಾರಿಕೊಂಡು ಕೋಟಿಗಟ್ಟಲೆ ದುಡ್ಡು ಮಾಡಿದ್ದಾರೆ ಕ್ಯಾಸೆಟ್ ಕಂಪನಿಗಳು.ಜನಪದ ಗೀತೆಗಳನ್ನೇ ತಮ್ಮ ಉಸಿರನ್ನಾಗಿಸಿ ಕೊಂಡಿರುವ ಮಹಾದೇವಸ್ವಾಮಿ ಅವರು ಹಳ್ಳಿ, ಹಳ್ಳಿಗಳಲ್ಲಿ ತಮ್ಮ ಹಾಡನ್ನು ಆಡುತ್ತ ಭಿಕ್ಷೆ ಬೇಡುತ್ತಾ ಇದ್ದವರು. ಅವರ ಬದುಕೆ ಜನಪದ ಗೀತೆಗಳ ಬಂಡಾರ ಸಾವಿರಾರು ಗೀತೆಗಳು ಕೇಳುಗರ ಮನಸ್ಸನ್ನು ಒಂದು ಕ್ಷಣ ಮನಸೂರುಗೊಳ್ಳುವಂತೆ ಮಾಡುತ್ತದೆ. ಇವರು ಸಿದ್ದಪ್ಪಾಜಿ ಹಾಡುಗಳು, ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ, ಮಹದೇಶ್ವರ ಗೀತೆಗಳು ಮೈಗೂಡಿಸಿಕೊಂಡು ರಾಜ್ಯದಾದ್ಯಂತ ತಮ್ಮ ಹಾಡುಗಳನ್ನು ಕೇಳಿಸುತ್ತಾರೆ. ಅಷ್ಟೇ ಅಲ್ಲದೆ ಇವರು ಸಂಕಮ್ಮ, ನಂಜುಂಡೇಶ್ವರ, ಬಿಳಿಗಿರಿರಂಗನಾಥ, ನೀಲವೇಣಿ, ಚಾಮುಂಡೇಶ್ವರಿ ಮುಂತಾದ ಜನಪದ ಕಥೆಗಳನ್ನು ತಮ್ಮ ನೆನಪಿನ ಅಂಗಳದಲ್ಲಿ ತುಂಬಿಕೊಂಡಿದ್ದಾರೆ. ಇವರು 7 ರಾತ್ರಿಗಳ ಕಾಲ ಮಲೆ ಮಹದೇಶ್ವರನ 7 ಅಧ್ಯಾಯದ ಕಥೆಗಳನ್ನು ಹೇಳುತ್ತಾರೆ ಹಾಗೆ 4 ರಾತ್ರಿಗಳ ಕಾಲ ಮಂಟೇಸ್ವಾಮಿ ಕಥೆಯನ್ನು ಹೇಳುವಂತಹ ಸಾಮರ್ಥ್ಯ ಇವರಿಗೆ ಇದೆ.

WhatsApp Group Join Now
Telegram Group Join Now

ಇವರು ಮನೆಯಲ್ಲಿಯೇ ಜನಪದ ಗೀತೆಗಳನ್ನು ಮೈಗೂಡಿಸಿಕೊಂಡವರು ಎಲ್ಲಾ ಹಾಡುಗಳು ಮತ್ತು ಕಥೆಗಳನ್ನು ತಮ್ಮ ಬುದ್ಧಿಶಕ್ತಿಯಲ್ಲಿ ತುಂಬಿಕೊಂಡಿರುವ ಇವರು ಡಾಕ್ಟರ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಪ್ರಾರಂಭದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಗೀತೆಗಳನ್ನು ಹಾಡುತ್ತಿದ್ದರು. ಅವರ ಪ್ರತಿಭೆ ಗುರುತಿಸಿದ ಉಳ್ಳಂಬಳ್ಳಿ ಮಹದೇವಪ್ಪ ಅವರು ಜನಪದ ಕಥೆಗಳ ಪಾಠ ಹೇಳಿಕೊಟ್ಟರು. ಇವರು ಸಾಕಷ್ಟು ಕಡೆ ಹಾಡುಗಳು ಕಥೆಗಳನ್ನು ಹೇಳಿರುವುದು ಅಷ್ಟೇ ಅಲ್ಲದೆ ಕ್ಯಾಸೆಟ್ ಲೋಕದಲ್ಲಿಯೂ ಸಹ ತಮ್ಮ ಸಾಧನೆಯನ್ನು ಬಹು ದೊಡ್ಡ ಮಟ್ಟದಲ್ಲಿ ಮಾಡಿದ್ದಾರೆ. ಸಿದ್ದಪ್ಪಾಜಿ ಪವಾಡ, ಮಹದೇಶ್ವರ ಮಹಿಮೆ, ಶಿವಶರಣೆ ಶಂಕಮ್ಮ, ಬೇವಿನಹಟ್ಟಿ ಕಾಳಮ್ಮ, ಆಳಂಬಡಿ ಜುಂಜೇಗೌಡ, ನೀಲವೇಣಿ, ಚಾಮುಂಡೇಶ್ವರಿ ಸೇರಿ 150ಕ್ಕೂ ಹೆಚ್ಚು ಕ್ಯಾಸೆಟ್ ಗಳು ಸಿಡಿಗಳು ಹೊರಬಂದಿವೆ.

ಮಹದೇಶ್ವರ ದಯೆಬಾರದೇ ಬರಿದಾದ ಬಾಳಲ್ಲಿ ಬರಬಾರದೆ ಗೀತೆ ಈಗಲೂ ಜನರ ನಾಲಿಗೆಯ ಮೇಲೆ ನಲಿದಾಡುತ್ತದೆ. ಸಾಕಷ್ಟು ಕಷ್ಟದ ಜೀವನದಿಂದ ಮೇಲೆ ಬಂದಿರುವಂತಹ ಮಹದೇವಸ್ವಾಮಿ ಅವರು ಪ್ರಾರಂಭದ ದಿನಗಳು ಅಷ್ಟೇನೂ ಚೆನ್ನಾಗಿರಲಿಲ್ಲ ಇವರ ಈ ಜಾನಪದ ಲೋಕದಲ್ಲಿ ಸಾಕಷ್ಟು ಸೋಲು ಮತ್ತು ಅವಮಾನಗಳನ್ನು ಸಹ ಮಹದೇವ ಸ್ವಾಮಿಯವರು ಅನುಭವಿಸಿದ್ದಾರೆ. ಮಹದೇವಸ್ವಾಮಿ ಅವರು ಹೇಳುವ ಹಾಗೆ ಸಾಕಷ್ಟು ಜನ ಜಾನಪದ ಕಲಾವಿದರ ಕಥೆಗಳನ್ನು ಕೇವಲ ಕಡಿಮೆ ದುಡ್ಡಿಗೆ ತೆಗೆದುಕೊಂಡಂತಹ ಕ್ಯಾಸೆಟ್ ಕಂಪನಿಗಳು ಅತಿ ದೊಡ್ಡ ಮಟ್ಟದ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಹೌದು ಸಾಕಷ್ಟು ಜನ ಕಲಾವಿದರ ಕಲೆಯನ್ನು ಸಾಕಷ್ಟು ಕಂಪನಿಗಳು ಕಡಿಮೆ ಬೆಲೆಯಲ್ಲಿ ಕೊಂಡು ದುಬಾರಿ ಹಣನ್ನು ಗಳಿಸಿಕೊಂಡಿದ್ದಾರೆ.



crossorigin="anonymous">