ಮಲವಿಸರ್ಜನೆ ಸಮಸ್ಯೆ ಇದ್ದವರು ತಪ್ಪದೇ ಪವರ್ ಪುಲ್ ಔಷಧಿಗಳನ್ನು ಅನುಸರಿಸಿ...ಮಲಬದ್ಧತೆ ಸಮಸ್ಯೆ ದೂರವಾಗುತ್ತೆ » Karnataka's Best News Portal

ಮಲವಿಸರ್ಜನೆ ಸಮಸ್ಯೆ ಇದ್ದವರು ತಪ್ಪದೇ ಪವರ್ ಪುಲ್ ಔಷಧಿಗಳನ್ನು ಅನುಸರಿಸಿ…ಮಲಬದ್ಧತೆ ಸಮಸ್ಯೆ ದೂರವಾಗುತ್ತೆ

ಕುಳಿತ ತಕ್ಷಣ ಮಲವಿಸರ್ಜನೆ ಆಗಲು ಇಲ್ಲಿವೆ ಪವರ್ ಫುಲ್ ಔಷಧಿಗಳು.ಮಲಬದ್ಧತೆ ಎನ್ನುವಂತಹದ್ದು ಹಲವಾರು ರೋಗಗಳ ಮೂಲ. ಸಾಮಾನ್ಯವಾಗಿ ಮಲಬದ್ಧತೆಯಿಂದ ಶುರುವಾಗಿ ಪೈಲ್ಸ್ ಪಿಸ್ತೂಲ ಇನ್ನು ಅನೇಕ ರೋಗಗಳಿಗೆ ಈ ಮಲಬದ್ಧತೆ ಕಾರಣವಾಗುತ್ತದೆ. ಈ ಒಂದು ಮಲಬದ್ಧತೆ ಸಮಸ್ಯೆಗಳಿಗೆ ಕೆಲವರು ಔಷಧಿಗಳನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ ಇದು ಅವರ ಜೀವನದಲ್ಲಿ ಅಡಿಕ್ಟ್ ಆಗಿಬಿಡುತ್ತದೆ. ಈ ಒಂದು ಔಷಧಿಗಳನ್ನು ತೆಗೆದುಕೊಳ್ಳುವುದು ಅಷ್ಟೊಂದು ಒಳ್ಳೆಯದಲ್ಲ ಹಾಗಾಗಿ ನಾವು ಕೆಲವೊಂದು ಆಹಾರಗಳನ್ನು ತೆಗೆದುಕೊಂಡರೆ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಈ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಒಂದು ಮುಖ್ಯವಾದಂತಹ ಪದಾರ್ಥ ಎಂದರೆ ತ್ರಿಫಲ ಚೂರ್ಣ. ತ್ರಿಫಲ ಚೂರ್ಣವನ್ನು ನಿತ್ಯ ಅರ್ಧ ಟೇಬಲ್ ಸ್ಪೂನ್ ನಿಂದ ಒಂದು ಟೇಬಲ್ ಸ್ಪೂನ್ ವರೆಗೂ ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ ಹಾಕಿಕೊಂಡು ಕುಡಿದರೆ ಆಗ ರಕ್ತ ಶುದ್ಧಿ ಆಗುತ್ತದೆ.

WhatsApp Group Join Now
Telegram Group Join Now

ಆದರೆ ತ್ರಿಫಲ ಚೂರ್ಣವನ್ನು ಗರ್ಭಿಣಿಯರು ತೆಗೆದುಕೊಳ್ಳಬಾರದು ಯಾರ ದೇಹ ಡ್ರೈ ಇರುವಂತಹ ಅವರು ಇದನ್ನು ತೆಗೆದುಕೊಳ್ಳುವುದು ಸರಿಯಲ್ಲ. ಎರಡನೆಯದು ಆಲುವೆರಾದ ಪಲ್ಪನ್ನು ತೆಗೆದುಕೊಳ್ಳುವುದು ಬೆಳಗ್ಗೆ ಎದ್ದ ತಕ್ಷಣ ಲೋಳೆಸರ ಸಿಪ್ಪೆ ತೆಗೆದು ಅದರ ತಿರುಳನ್ನು ಎರಡರಿಂದ ನಾಲ್ಕು ಚಮಚದವರೆಗೂ ಬೆಳಗ್ಗೆ ಖಾಲಿ ಹೊಟ್ಟೆಗೆ ತೆಗೆದುಕೊಂಡರೆ ಆಗ ಸಹ ಮೋಷನ್ ಈಸಿಯಾಗಿ ಆಗುತ್ತದೆ. ಯಾರಿಗೆ ಲಿವರ್ ನ ಸಮಸ್ಯೆ ಇದೆ ಹಾಗೆ ಯಾರಿಗೆಲ್ಲ ಮೋಶನ್ ತುಂಬಾ ಗಟ್ಟಿಯಾಗಿ ಹೋಗುತ್ತದೆ ಹಾಗೆಯೇ ಯಾರಿಗೆಲ್ಲ ಮೋಶನ್ ಹೋಗುವಾಗ ರಕ್ತ ಬರುವುದು ಹಾಗೆಯೇ ಕ್ರ್ಯಾಕ್ಸ್ ಆಗುವಂತಹ ಸಮಸ್ಯೆ ಇರುತ್ತದೆ, ಮೂಲವ್ಯಾಧಿ ಇರುವಂತಹವರು ಈ ಒಂದು ಲೋಳೆಸರವನ್ನು ತೆಗೆದುಕೊಂಡರೆ ತುಂಬಾ ಒಳ್ಳೆಯದು.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಇದನ್ನು ಗರ್ಭಿಣಿಯರು ತೆಗೆದುಕೊಳ್ಳುವುದು ಸರಿಯಲ್ಲ ಹಾಗೆಯೇ ತುಂಬಾ ಕಫದ ಸಮಸ್ಯೆ ಇರುವವರು ಸಹ ಈ ಒಂದು ಅಲುವೆರವನ್ನು ತೆಗೆದುಕೊಳ್ಳುವುದು ಅಷ್ಟು ಸರಿಯಲ್ಲ. ಮೂರನೆಯದು ಬಸಳೆ ಸೊಪ್ಪು ಈ ಒಂದು ಬಸಳೆ ಸೊಪ್ಪನ್ನು ಸಾಂಬಾರ್ ರೀತಿಯಲ್ಲಿ ಅಲ್ಲದೆ ಪಲ್ಯ ಮಾಡಿಕೊಂಡು ಇಲ್ಲವಾದರೆ ನೀವು ದಿನಕ್ಕೆ ಎರಡು ಎಲೆಯನ್ನು ಸ್ವಲ್ಪ ಬೇಯಿಸಿಕೊಂಡು ಆ ಪೇಸ್ಟನ್ನು ನೀರಿಗೆ ಹಾಕಿಕೊಂಡು ಕುಡಿಯಿರಿ ಅಥವಾ ಹಾಗೆಯೆ ಸೇವನೆ ಮಾಡುವುದರಿಂದ ಇದರಲ್ಲಿ ಇರುವಂತಹ ಫೈಬರ್ ಮೋಷನ್ ಈಸಿಯಾಗಿ ಆಗುವಂತೆ ಅನುಕೂಲ ಮಾಡಿಕೊಡುತ್ತದೆ. ಇದನ್ನು ವಿಶೇಷವಾಗಿ ಪ್ರೆಗ್ನೆನ್ಸಿ ಯಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು. ಇದನ್ನು ಪ್ರೆಗ್ನೆಂಟ್ ಇರುವಂತಹ ಮಹಿಳೆಯರು ತೆಗೆದುಕೊಂಡರೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕಂಡುಬರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.

[irp]


crossorigin="anonymous">