ಒಂಟಿಯಾದೆ ಎಂದು ಕೊರಗಬೇಡಿ..ಸೂರ್ಯನು ಒಂಟಿ ಚಂದ್ರನು ಒಂಟಿ.ಬದುಕು ಕಲಿಸುವ ಸಾಲುಗಳು ನೋಡಿ - Karnataka's Best News Portal

ಒಂಟಿಯಾದೆ ಎಂದು ಕೊರಗಬೇಡಿ..ಸೂರ್ಯನು ಒಂಟಿ ಚಂದ್ರನು ಒಂಟಿ.ಬದುಕು ಕಲಿಸುವ ಸಾಲುಗಳು ನೋಡಿ

ಒಂಟಿಯಾದೆ ಎಂದು ಕೊರಗಬೇಡ ಆಗ ತಾನೇ ನಿನ್ನ ಶಕ್ತಿ ಪ್ರದರ್ಶನವಾಗುತ್ತದೆ.ಒಂಟಿಯಾದೆ ಎಂದು ಕೊರಗಬೇಡ ಸೂರ್ಯನು ಒಂಟಿ, ಚಂದ್ರನು ಒಂಟಿ ಆದರೂ ಜಗತ್ತಿಗೆ ಬೆಳಕನ್ನು ನೀಡುತ್ತಿಲ್ಲವೇ ಒಂಟಿಯಾದಾಗಲೇ ನೀನು ಏನು ನಿನ್ನ ಶಕ್ತಿ ಏನು ನಿನ್ನವರು ಯಾರು ಎಂದು ನಿನಗೆ ಅರ್ಥ ಆಗೋದು, ನಿನ್ನ ಸಾಮರ್ಥ್ಯ ಎಷ್ಟು ಅಂತ ಸಾಬೀತಾಗುವುದು ನೀನು ಸೂರ್ಯ, ಚಂದ್ರನಂತೆ ಇಡೀ ಜಗತ್ತಿಗೆ ಬೆಳಕು ನೀಡುವುದು ಬೇಡ ನಿನ್ನ ಬದುಕಿಗೆ ನೀನು ಬೆಳಕಾಗು ಆಗಲೇ ನಿನ್ನ ಬದುಕು ಧನ್ಯ ಅಂತ ಶ್ರೀ ಕೃಷ್ಣ ಪರಮಾತ್ಮ ಹೇಳುತ್ತಾರೆ. ಧರ್ಮವನ್ನು ತಿಳಿದುಕೊಳ್ಳುವವನು ಮೊದಲು ಧರ್ಮದ ಆಧಾರಗಳನ್ನು ತಿಳಿದುಕೊಳ್ಳಬೇಕು, ಧರ್ಮದಲ್ಲಿ 5 ಆರಾಧಾರಗಳಿವೆ ಮೊದಲನೆಯದು ಜ್ಞಾನ, ಎರಡನೆಯದು ಪ್ರೀತಿ, ಮೂರನೆಯದು ನ್ಯಾಯ, ನಾಲ್ಕನೆಯದು ಶರಣಾಗತಿ, ಐದನೇದು ತಾಳ್ಮೆ.

ಇದರ ಸಾರಾಂಶ ಹೇಗಿದೆ ಎಂದರೆ ಜ್ಞಾನ ಮಾನವನ ಮೆದುಳನ್ನು ಸ್ಥಿರಗೊಳಿಸುತ್ತದೆ, ಪ್ರೀತಿ ಮಾನವನ ಹೃದಯವನ್ನು ಸ್ಥಿರಗೊಳಿಸುತ್ತದೆ, ನ್ಯಾಯ ಮಾನವನ ಆತ್ಮವನ್ನು ಸ್ಥಿರಗೊಳಿಸುತ್ತದೆ, ಶರಣಗತಿ ಮನುಷ್ಯನ ದೇಹವನ್ನು ಸ್ಥಿರಗೊಳಿಸುತ್ತದೆ ಹಾಗೂ ಕೊನೆಯದಾಗಿ ತಾಳ್ಮೆ ಮಾನವನ ಮನಸ್ಥಿತಿಯನ್ನು ಸ್ಥಿರಗೊಳಿಸುತ್ತದೆ. ಇವೆಲ್ಲವನ್ನು ನೀನು ತಿಳಿದುಕೊಂಡರೆ ನಿನ್ನ ಜೀವನದಲ್ಲಿ ನೀನು ಯಾವತ್ತಿಗೂ ಒಂಟಿಯಾಗಿರುವುದಿಲ್ಲ ಎಂದು ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಉಲ್ಲೇಖ ಮಾಡಿದ್ದಾರೆ. ಜೀವನದಲ್ಲಿ ಯಾರಿಗೂ ದುಃಖವನ್ನು ಕೊಡಬೇಡ ಯಾಕೆಂದರೆ ಕೊಟ್ಟಿರುವ ಯಾವುದೇ ವಸ್ತುವಾಗಲಿ ಅಥವಾ ಪಾಪ ಪುಣ್ಯಗಳಾಗಲಿ ಮುಂದಿನ ದಿನಗಳಲ್ಲಿ ಸಾವಿರ ಪಟ್ಟು ಹೆಚ್ಚಾಗಿ ನಿನಗೆ ಮರಳುತ್ತದೆ. ಬುದ್ಧಿ ಇದೆ ಅಂತ ಬಹಳ ಮರೆಯಬೇಡ ಯಾಕೆಂದರೆ ಕಲ್ಲು ನೀರಿನಲ್ಲಿ ಬಿದ್ದಾಗ ಅದರ ಭಾರದಿಂದ ಅದು ಮುಳುಗುವುದು. ನಾನು ಒಂಟಿಯಾಗಿದ್ದೇನೆ ನನ್ನ ಅದೃಷ್ಟ ಸರಿ ಇಲ್ಲ ಯಾವಾಗಲೂ ನನಗೆ ಯಾಕೆ ಹೀಗೆ ಕೆಟ್ಟದಾಗುತ್ತದೆ ಎಂದು ಕೊರಗಬೇಡ ನಿನಗಿಂತ ಕೆಳಗಿರುವವರನ್ನು ನೋಡಿ

WhatsApp Group Join Now
Telegram Group Join Now
See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

ನೀನು ಖುಷಿ ಪಡು, ಇವರಿಗಿಂತ ನನಗೆ ಚೆನ್ನಾಗಿ ಇಟ್ಟಿದ್ದಾನಲ್ಲಪ್ಪ ದೇವರು ಎಂದು ಖುಷಿ ಪಡು. ಯಾವುದು ನಿನ್ನ ಭಾಗ್ಯದಲ್ಲಿ ಇದೆಯೋ ಅದು ನಿನಗೆ ಸಿಕ್ಕೆ ಸಿಗುತ್ತದೆ, ಯಾವುದು ನಿನ್ನ ಭಾಗ್ಯದಲ್ಲಿ ಇಲ್ಲವೋ ನೀನು ಎಷ್ಟೇ ಪ್ರೀತಿಸಿದರು ಸಿಗುವುದಿಲ್ಲ. ಚಿಂತೆ ಬಿಡು ಜೀವನದಲ್ಲಿ ಬಂದಂತೆಲ್ಲವನ್ನು ಬಂದಂತೆ ಸ್ವೀಕರಿಸು ಉಪ್ಪಿನಂತೆ ಕಟ್ಟು ಮಾತನ್ನು ಹೇಳುವವನೇ ನಿಜವಾದ ಸ್ನೇಹಿತ, ಸಕ್ಕರೆಯಂತೆ ಸಿಹಿ ಮಾತನಾಡುವವನು ನಯವಂಚಕ ಅದಕ್ಕೆ ಉಪ್ಪಿನಲ್ಲಿ ಹುಳು ಬಿದ್ದ ಇತಿಹಾಸ ಇಲ್ಲ, ಇತಿಹಾಸದಲ್ಲಿ ಹುಳು ಬೀಳದೇ ಇರುವ ಸಿಹಿಯೇ ಇಲ್ಲ. ಶ್ರೀ ಕೃಷ್ಣ ಪರಮಾತ್ಮನ ಈ ಮಾತನ್ನು ನೀನು ಯಾವಾಗಲೂ ನೆನಪಿನಲ್ಲಿಡು ಸಂತೋಷದಲ್ಲಿ ಎಲ್ಲರೂ ಸಿಗುತ್ತಾರೆ ಆದರೆ ದುಃಖದಲ್ಲಿ ಕೇವಲ ಭಗವಂತ ಮಾತ್ರ ಸಿಗುತ್ತಾನೆ.

[irp]


crossorigin="anonymous">