ಒಂದು ದಿನಕ್ಕೆ ಎಷ್ಟು ಸಮಯ ನಿದ್ದೆ ಮಾಡಬೇಕು! ಕಡಿಮೆ ಮಾಡಿದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ ವಿಡಿಯೋ ನೋಡಿ » Karnataka's Best News Portal

ಒಂದು ದಿನಕ್ಕೆ ಎಷ್ಟು ಸಮಯ ನಿದ್ದೆ ಮಾಡಬೇಕು! ಕಡಿಮೆ ಮಾಡಿದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ ವಿಡಿಯೋ ನೋಡಿ

ಒಂದು ದಿನಕ್ಕೆ ಎಷ್ಟು ಸಮಯ ನಿದ್ದೆ ಮಾಡಬೇಕು ಗೊತ್ತಾ? ನಿದ್ದೆ ಕಡಿಮೆಯಾದರೆ ದೇಹದಲ್ಲಾಗುವ ಬದಲಾವಣೆಗಳೇನೇನು ಗೊತ್ತಾ?ನಿದ್ರೆ ಎನ್ನುವುದು ಮನುಷ್ಯನಿಗೆ ಬಹಳ ಮುಖ್ಯವಾದ ವ್ಯಾಯಾಮ ಎಂದೇ ಹೇಳಬಹುದು. ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚಾಗಿ ನಿದ್ದೆ ಮುಖ್ಯ ತಪ್ಪಾಗಲಾರದು. ಯಾಕೆಂದರೆ ನಾವು ಮೂರು ಹೊತ್ತು ಊಟ ಮಾಡದೇ ಇರಬಹುದು ಆದರೆ ಒಂದು ದಿನ ನಿದ್ದೆ ಮಾಡದಿದ್ದರೆ ನಮ್ಮ ಮರುದಿನದ ಯಾವ ಚಟುವಟಿಕೆಗಳು ಕೂಡ ಆಸಕ್ತಿಯಿಂದ ಕೂಡಿರುವುದಿಲ್ಲ ಹಾಗೂ ದಿನಪೂರ್ತಿ ನಾವು ನಿದ್ದೆಯ ಮಂಪರಿನಲ್ಲಿಯೇ ಕಳೆಯುತ್ತೇವೆ. ಹಾಗಾಗಿ ಪ್ರತಿ ಮನುಷ್ಯನ ಆರೋಗ್ಯದ ಗುಟ್ಟು ಹಿಂದಿನ ದಿನದ ನಿದ್ರೆ ಆಗಿರುತ್ತದೆ. ಹೀಗಾಗಿ ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮೂರರಲ್ಲಿ ಒಂದಷ್ಟು ಭಾಗವನ್ನು ನಿದ್ದೆ ಮಾಡುವುದರಲ್ಲಿಯೇ ಕಳೆಯುತ್ತಾನೆ. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ ಅವರವರ ವಯಸ್ಸಿಗೆ ತಕ್ಕ ಹಾಗೆ ಅಷ್ಟು ಪ್ರಮಾಣದ ಅವಧಿಯಲ್ಲಿ ನಿದ್ದೆ ಮಾಡದೆ ಹೋದರೆ ಮನುಷ್ಯನ ಗಂಭೀರ ಕಾಯಿಲೆಗಳಿಗೆ ತುತ್ತಾಗ ಬೇಕಾಗುತ್ತದೆ ಎಂದು.

ಮನುಷ್ಯ ಈ ರೀತಿ ನಿದ್ದೆ ಕಡಿಮೆ ಮಾಡಿದಾಗ ಮೊದಲು ಅನಾರೋಗ್ಯಕ್ಕೆ ತುತ್ತಾಗುವ ಅಂಗ ಮೆದುಳು. ಯಾಕೆಂದರೆ ನಾವು ನಿದ್ದಿಸುವಾಗ ನಮ್ಮ ಮೆದುಳಿಗೆ ಚೆನ್ನಾಗಿ ರಕ್ತ ಸಪ್ಲೈ ಆಗುತ್ತದೆ ಆಗ ಮೆದುಳಿನಲ್ಲಿ ಉಂಟಾಗುವ ಅನೇಕ ಟಾಕ್ಸಿನ್ ಅಂಶಗಳನ್ನು ಮೆದುಳು ಹೊರಹಾಕಲು ಅನುಕೂಲವಾಗುತ್ತದೆ. ನಿದ್ರೆ ಕಡಿಮೆ ಮಾಡುವವರಿಗೆ ಈ ಟಾಕ್ಸಿನ್ ಅಂಶ ಮೆದುಳಿನಲ್ಲಿ ಉಳಿದುಕೊಳ್ಳುವುದರಿಂದ ಮರೆವಿನ ಕಾಯಿಲೆ ಬರುತ್ತದೆ. ಹಾಗಾಗಿ ಇದು ಇನ್ನೂ ಗಂಭೀರವಾದಾಗ ಸಂಪೂರ್ಣವಾಗಿ ಅವರು ಎಲ್ಲವನ್ನು ಮರೆತುಬಿಡಬಹುದು. ಇದರ ನಂತರ ಮನುಷ್ಯನ ದೇಹದ ಅತಿ ಮುಖ್ಯ ಅಂಗವಾದ ಹೃದಯ ನಿದ್ರಾಹೀನತೆ ಸಮಸ್ಯೆಯಿಂದ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತದೆ. ಮನುಷ್ಯ ನಿದ್ದೆ ಮಾಡುವ ಸಮಯದಲ್ಲಿ ಹೃದಯದ ಬಡಿತ ತುಂಬಾ ಕೂಲ್ ಆಗಿರುತ್ತದೆ ಮತ್ತು ಬ್ಲಡ್ ಪ್ರೆಷರ್ ಕೂಡ ಕಡಿಮೆ ಇರುತ್ತದೆ. ಹೀಗಾಗಿ ಹೃದಯಕ್ಕೆ ವಿಶ್ರಾಂತಿ ಸಿಗುವುದು ನಿದ್ರೆ ಮಾಡುವಾಗ ಮಾತ್ರ ಎನ್ನುತ್ತದೆ ವೈದ್ಯಲೋಕ.

WhatsApp Group Join Now
Telegram Group Join Now

ಇದಲ್ಲದೆ ದೇಹದ ಬೆಳವಣಿಗೆಯ ಹಾರ್ಮೋನ್ ಗಳು ಎಲ್ಲವೂ ಕೂಡ ನಿದ್ರೆ ಮಾಡುವ ಸಮಯದಲ್ಲಿ ರಿಲೀಸ್ ಆಗುತ್ತದೆ. ಹೀಗಾಗಿ ಮಾಂಸ ಖಂಡಗಳು ಗಟ್ಟಿಯಾಗಲು ಮನುಷ್ಯ ಉದ್ದವಾಗಿ ಬೆಳೆಯಲು ಸರಿಯಾದ ನಿದ್ದೆ ಅವಶ್ಯಕವಾಗಿದೆ. ಜೊತೆಗೆ ಸೌಂದರ್ಯ ವಿಷಯದಲ್ಲೂ ಸಹ ಅತ್ಯಂತ ಕಡಿಮೆ ಅವಧಿ ನಿದ್ದೆ ಮಾಡುವವರು ತಮ್ಮ ವಯಸ್ಸಿನಿಗಿಂತ 10 ವರ್ಷ ಹಿರಿಯರಂತೆ ಕಾಣುತ್ತಾರೆ ಎಂದು ಹೇಳುತ್ತಾರೆ ಜೊತೆಗೆ ತುಂಬಾ ನಿದ್ದೆ ಮಾಡುವವರು ಬಹಳ ಸುಂದರವಾಗಿರುತ್ತಾರೆ ಎಂದು ಕೂಡ ಹೇಳುತ್ತಾರೆ ಇದನ್ನು ಸ್ಲೀಪ್ ಬ್ಯೂಟಿ ಎಂದು ಕರೆಯುತ್ತಾರೆ. ಇದಲ್ಲದೆ ಕಣ್ಣು ಹಾಗೂ ನರಗಳು ಇನ್ನು ಮುಂತಾದ ವಿಷಯಗಳ ಮೇಲೆ ನಿದ್ರೆ ಪರಿಣಾಮ ಬೀರುತ್ತದೆ. ಹಾಗಾಗಿ ಯಾರಿಗೆ ಎಷ್ಟು ನಿದ್ದೆ ಅವಶ್ಯಕತೆ ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.



crossorigin="anonymous">