ಚಾನ್ಸ್ ಕೇಳ್ಕೊಂಡು ನಾನು ಜಗ್ಗೇಶ್ ಗಾಂಧಿನಗರ ಅಲೀತಿದ್ವಿ. ಬ್ಯಾಂಕ್ ಜನಾರ್ಧನ್ 800 ಸಿನಿಮಾ ಮಾಡಿದ ಕಥೆ ಇದು » Karnataka's Best News Portal

ಚಾನ್ಸ್ ಕೇಳ್ಕೊಂಡು ನಾನು ಜಗ್ಗೇಶ್ ಗಾಂಧಿನಗರ ಅಲೀತಿದ್ವಿ. ಬ್ಯಾಂಕ್ ಜನಾರ್ಧನ್ 800 ಸಿನಿಮಾ ಮಾಡಿದ ಕಥೆ ಇದು

ಚಾನ್ಸ್ ಕೇಳ್ಕೊಂಡು ನಾನು ಜಗ್ಗೇಶ್ ಗಾಂಧಿನಗರ ಹಲೆದಿದ್ವಿ.
ಬ್ಯಾಂಕ್ ಜನಾರ್ದನವರು 1949 ರಲ್ಲಿ ಜನಿಸಿದರು. ಇವರು ಜನಿಸಿದ್ದು ಹೊಳಲ್ಕೆರೆ ಎಂಬ ಗ್ರಾಮದಲ್ಲಿ ನಂತರ ಅವರು ವಿದ್ಯಾಭ್ಯಾಸ ಮಾಡಿದ್ದು ಹಾಗೆಯೇ ವಿವಾಹವಾಗಿದ್ದು, ಬ್ಯಾಂಕ್ ನಲ್ಲಿ ಕೆಲಸಕ್ಕೆ ಸೇರಿದ್ದು ಎಲ್ಲವೂ ಸಹ ಈ ಹೊಳಲ್ಕೆರೆ ಗ್ರಾಮದಲ್ಲಿಯೇ ನಡೆಯಿತು. ಗಂಡ್ಸಲ್ವೆ ಗಂಡ್ಸು ಎಂಬ ನಾಟಕದಲ್ಲಿ ಆ ಪಾತ್ರ ಮಾಡಿದ ನಂತರ ಅದು ಸೂಪರ್ ಹಿಟ್ ಆಗಿ ಫಸ್ಟ್ ಪ್ರೈಸ್ ಬಂತು ಅಲ್ಲಿಂದ ನಂತರ ಈ ನಾಟಕಗಳಲ್ಲಿ ಪಾರ್ಟ್ ಮಾಡುವಂತಹ ಹುಚ್ಚು ಹೆಚ್ಚಾಗಿತ್ತು. ತನ್ನ ವಯಸ್ಸಿನ ಹುಡುಗರನ್ನೆಲ್ಲ ಜೊತೆಯಾಗಿ ಹಾಕಿಕೊಂಡು ರಾಜ್ಯೋತ್ಸವಗಳು ಗಣೇಶನ ಹಬ್ಬ,‌ ದಸರ ಹಬ್ಬಗಳಿಗೆಲ್ಲ ನಾಟಕಗಳನ್ನು ಮಾಡುತ್ತಿದ್ದರು. ಪ್ರಾರಂಭದಲ್ಲಿ ಬಡತನದ ಜೀವನದಲ್ಲಿ ಬೆಳೆದರು ಇವರ SSLC ಮಾಡಿದ ನಂತರ ಯಾವುದೇ ಕೆಲಸವು ಇರಲಿಲ್ಲ ಅಂತಹ ಸಂದರ್ಭದಲ್ಲಿ ಅವರ ತಂದೆಗೂ ಸಹ ರಿಟೈರ್ಡ್ ಆಗಿದ್ದು, ಮೂರರಿಂದ ನಾಲ್ಕು ವರ್ಷ ತುಂಬಾ ಕಷ್ಟದ ಜೀವನವನ್ನು ಮಾಡಿದ್ದರು ಅನಂತನವರು ತನ್ನ ತಾಯಿಯ ಜೊತೆ ಕೂಲಿಯ ಕೆಲಸಕ್ಕೆ ಹೋಗುತ್ತಿದ್ದರು.

WhatsApp Group Join Now
Telegram Group Join Now

ಒಂದು ದಿನ ಶಂಕರ್ ಶೆಟ್ಟಿ ಎಂಬುವಂತಹ ಡಾಕ್ಟರ್ ಇದ್ದರು ಅವರ ತೋಟಕ್ಕೆ ಕೆಲಸಕ್ಕೆ ಹೋಗಿದ್ದರು. ಶಂಕರ್ ಶೆಟ್ಟಿ ಅವರು ಜನಾರ್ದನವರನ್ನು ಕರೆದು ಜಯಲಕ್ಷ್ಮಿ ಎನ್ನುವಂತಹ ಹೊಳಲ್ಕೆರೆಯ ಬ್ಯಾಂಕ್ ನಲ್ಲಿ ಜವಾನನ ಕೆಲಸಕ್ಕೆ ಸೇರಿಸುತ್ತಾರೆ ಆಗ ಇವರ ಸಂಬಳ 50 ರುಪಾಯಿ ಆಗಿತ್ತು ಆಗಲು ಸಹ ಜನಾರ್ದನ್ ಅವರು ರಜೆ ಇರುವಂತಹ ಸಮಯದಲ್ಲಿ ಕೂಲಿ ಕೆಲಸವನ್ನು ಸಹ ಮಾಡುತ್ತಿದ್ದರು. ನಂತರ ಬ್ಯಾಂಕ್ ನಲ್ಲಿ ಇಂಪ್ರೂವ್ಮೆಂಟ್ ಆಗುತ್ತಾ ಬಂದಮೇಲೆ ಸ್ವಲ್ಪ ಸ್ವಲ್ಪವಾಗಿ ಸಂಬಳವನ್ನು ಜಾಸ್ತಿ ಮಾಡುತ್ತಾ ಬಂದರು. ಆಗ ರಾತ್ರಿ ತಮ್ಮ ಬಿಡುವಿನ ಸಮಯದಲ್ಲಿ ಅಲ್ಲಿ ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ ನಲ್ಲಿ ಅಸಿಸ್ಟೆಂಟ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿಕೊಂಡರು ರಿಯಲ್ ಸುತ್ತುವುದು, ಕಾರ್ಬನ್ ದಬ್ಬುವುದು, ಸಿಸ್ಟಮ್ ಕ್ಲೀನಿಂಗ್ ಈ ರೀತಿಯಾದಂತಹ ಕೆಲಸಗಳನ್ನು ಮಾಡುತ್ತಿದ್ದರು‌.

ಅಲ್ಲಿ ಇವರಿಗೆ ಸಿಗುತ್ತಿದ್ದ ಸಂಪಾದನೆಂದರೆ ಒಂದು ರೂಪಾಯಿ ಹಾಗೆಯೆ ಎರಡು ಟೀ, ಎರಡು ಬನ್ನು ಕೊಡುತ್ತಿದ್ದರು. ಹಗಲಿನ ಸಮಯದಲ್ಲಿ ಬ್ಯಾಂಕ್ ಹೋಗುತ್ತಿದ್ದರು ರಾತ್ರಿಯ ಸಮಯದಲ್ಲಿ ಈ ಟಾಕೀಸ್ ಗೆ ಹೋಗುತ್ತಿದ್ದರು. ಹೀಗೆ ಗೌಡ್ರು ಗದ್ಲ ಎಂಬ ನಾಟಕ ಮಾಡಿದರು ಈ ನಾಟಕ ತುಂಬಾ ಸಕ್ಸಸ್ ಆಯಿತು. ಊರಲ್ಲಿ ಯಾರ ಬಾಯಲ್ಲಾದರೂ ನಾಟಕ ಚೆನ್ನಾಗಿ ಮಾಡುತ್ತಾನೆ ಜನಾರ್ಧನ್ ಎನ್ನುವಂತಹ ಪ್ರಶಂಸೆ ಕೇಳಿ ಬಂತು. ನಂತರದಲ್ಲಿ ಇವರಿಗೆ ಕಲಾವಿದನಾಗಬೇಕು ಎನ್ನುವಂತಹ ಆಸೆ ಹುಟ್ಟಿಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.


[irp]


crossorigin="anonymous">