ನೆನೆಸಿಟ್ಟ ಬಾದಾಮಿ ತಿಂದು ಚಮತ್ಕಾರ ನೋಡಿ ವಿಟಮಿನ್ ಗಳ ಆಗರ ಹೇಗೆ ಯಾವಾಗ ತಿನ್ನಬೇಕು ನೋಡಿ...! » Karnataka's Best News Portal

ನೆನೆಸಿಟ್ಟ ಬಾದಾಮಿ ತಿಂದು ಚಮತ್ಕಾರ ನೋಡಿ ವಿಟಮಿನ್ ಗಳ ಆಗರ ಹೇಗೆ ಯಾವಾಗ ತಿನ್ನಬೇಕು ನೋಡಿ…!

ನೀವು ಪ್ರತಿದಿನ 4 ಬಾದಾಮಿ ತಿಂದರೆ ಏನಾಗುತ್ತದೆ?
ಬಾದಾಮಿ ಯನ್ನು ಮೇಧ್ಯಾ ಎಂದು ಕರೆಯುತ್ತಾರೆ ಅಂದರೆ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಅಂದರೆ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯುತ್ತಮವಾದ ಔಷಧಿಯಾಗಿದೆ ಬಾದಾಮಿ ಇದು ಉಷ್ಣ ವೀರ ದ್ರವ್ಯವಾಗಿದ್ದು ಇದು ದೇಹಕ್ಕೆ ಉಷ್ಣತೆಯನ್ನು ಒದಗಿಸಿ ಕೊಡುವುದರಿಂದ ಇದಕ್ಕೆ ಉಷ್ಣವೀರ ದ್ರವ್ಯ ಎಂದೇ ಹೆಸರಿಟ್ಟರು ಬಾದಾಮಿ ಯಲ್ಲಿ ಇರುವ ರಂಜಕ ಹಾಗೂ ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯ ದು ಮೂಳೆಗಳಿಗೆ ಹೆಚ್ಚಿನದಾದಂತಹ ಶಕ್ತಿಯನ್ನು ಒದಗಿಸುವಲ್ಲಿ ಈ ಬಾದಾಮಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಮತ್ತು ಪ್ರತಿನಿತ್ಯ ಬಾದಾಮಿ ಯನ್ನು ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಶೇಕಡ 50ರಷ್ಟು ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.ಮತ್ತು ಇದನ್ನು ತಿನ್ನುವುದರಿಂದ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡಿ ಸಮತೋಲನದಲ್ಲಿ ಇರುವ ಹಾಗೆ ಮಾಡುತ್ತದೆ

WhatsApp Group Join Now
Telegram Group Join Now

ಕಡಿಮೆ ಕ್ಯಾಲೋರಿಯನ್ನು ಹೊಂದಿರುವಂತಹ ಈ ಬಾದಾಮಿ ಹಸಿವನ್ನು ಕಡಿಮೆ ಮಾಡಿ ನಮ್ಮ ದೇಹದಲ್ಲಿರುವ ತೂಕ ಕಡಿಮೆಯಾಗುವುದಕ್ಕೆ ಸಹಾಯಮಾಡುತ್ತದೆ ಮತ್ತು ಗರ್ಭಿಣಿಯರು ಇದನ್ನು ತಮ್ಮ ಡಯಟ್ ನಲ್ಲಿ ಸೇವನೆ ಮಾಡುವುದರಿಂದ ಗರ್ಭದಲ್ಲಿರುವ ಮಗುವಿನ ಹಾಗೂ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಮುಖ್ಯವಾಗಿ ಬಾದಾಮಿಯನ್ನು ಪುರುಷರು ಸೇವನೆ ಮಾಡುವುದ ರಿಂದ ಫೈಬರ್ ಪ್ರೋಟೀನ್ ಆರೋಗ್ಯಕರ ಕೊಬ್ಬುಗಳು ವಿಟಮಿನ್ ಇ ಮ್ಯಾಂಗನೀಸ್ ಮೆಗ್ನೀಸಿಯಮ್ ವಿಟಮಿನ್ ಬಿ 12 ರಂಜಕ ಇತ್ಯಾದಿಗಳನ್ನು ನೀಡುತ್ತದೆ.ಪುರುಷರಿಗೆ ದೈನಂದಿನ ಒತ್ತಡ ಹಾಗೂ ತಮ್ಮ ಆಹಾರ ಪದ್ಧತಿಯಿಂದಾಗಿ ಅವರ ಜೀವನಶೈಲಿಯಿಂದಾಗಿ ಕೂದಲು ಉದುವಿಕೆ ಹೆಚ್ಚಾಗಿರುತ್ತದೆ.

ಆದ್ದರಿಂದ ಅಂಥವರು ಪ್ರತಿನಿತ್ಯ ನೆನೆಸಿಟ್ಟಂತಹ ನಾಲ್ಕು ಬಾದಾಮಿಯನ್ನು ಸೇವನೆ ಮಾಡುತ್ತಾ ಬಂದರೆ ಬಾದಾಮಿಯಲ್ಲಿ ವಿಟಮಿನ್ ಇ ಮೆಗ್ನೀಸಿಯಮ್ ಕ್ಯಾಲ್ಸಿಯಂ ಮತ್ತು ಸತುವು ಮುಂತಾದ ಪೋಷಕಾಂಶ ಗಳು ಕೂದಲನ್ನು ಬಲಪಡಿಸುತ್ತವೆ ಕೂದಲು ಉದುರು ವುದನ್ನು ತಡೆಗಟ್ಟುತ್ತದೆ ಮತ್ತು ಇದರ ಜೊತೆಗೆ ನೀವು ಬಾದಾಮಿ ಎಣ್ಣೆಯನ್ನು ಸಹ ಬಳಸಬಹುದು. ಮುಖ್ಯವಾಗಿ ನೀವು ತಿಳಿದಿರ ಬೇಕಾದಂತ ಅಂಶ ಏನೆಂದರೆ ಬಾದಾಮಿಯನ್ನು ನೇರವಾಗಿ ಸೇವನೆ ಮಾಡುವುದರ ಬದಲು ಅದನ್ನು ಏಳರಿಂದ ಎಂಟು ಗಂಟೆಗಳ ಕಾಲ ನೆನೆ ಹಾಕಿ ನಂತರ ಸಿಪ್ಪೆಯನ್ನು ತೆಗೆದು ಸೇವನೆ ಮಾಡುವುದರಿಂದ ಅದರಲ್ಲಿರುವಂತಹ ಪೋಷಕಾಂಶಗಳು ಹೆಚ್ಚಾಗಿ ನಮಗೆ ದೊರೆಯುತ್ತದೆ ಬಾದಾಮಿಯ ಸಿಪ್ಪೆಗಳ ಮೇಲೆ ಇರುವಂತಹ ಟ್ಯಾನಿನ್ ಗಳು ಬಾದಾಮಿಯಲ್ಲಿರುವ ಪೋಷಕಾಂಶಗಳು ನಮಗೆ ಹೆಚ್ಚಾಗಿ ದೊರೆಯದಂತೆ ಅಡ್ಡಿ ಮಾಡುತ್ತದೆ ಮತ್ತು ಹೀಗೆ ಸೇವನೆ ಮಾಡಿದರೆ ಸರಿಯಾದ ಜೀರ್ಣಕ್ರಿಯೆ ಆಗುವುದಿಲ್ಲ ಆದ್ದರಿಂದ ಹೀಗೆ ಸೇವನೆ ಮಾಡುವುದು ಉತ್ತಮವಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">