ಕಾಡಲ್ಲಿ ವೀರಪ್ಪನ್ ಊಟ ಹೇಗಿತ್ತು ಏನೇನ್ ತಿಂತಿದ್ದ ಗೊತ್ತಾ ಒಂದು ದಿನಕ್ಕೆ..ವೀರಪ್ಪನ್ ಊಟದ ಶೈಲಿ ನೋಡಿದರೆ ಶಾಕ್.. » Karnataka's Best News Portal

ಕಾಡಲ್ಲಿ ವೀರಪ್ಪನ್ ಊಟ ಹೇಗಿತ್ತು ಏನೇನ್ ತಿಂತಿದ್ದ ಗೊತ್ತಾ ಒಂದು ದಿನಕ್ಕೆ..ವೀರಪ್ಪನ್ ಊಟದ ಶೈಲಿ ನೋಡಿದರೆ ಶಾಕ್..

ಕಾಡಿನಲ್ಲಿದ್ದ ವೀರಪ್ಪನಿಗೆ ಊಟದ ವ್ಯವಸ್ಥೆ ಹೇಗೆ ಮಾಡಲಾಗುತ್ತಿತ್ತು ಗೊತ್ತಾ?ಕಾಡುಗಳ್ಳ ನರಹಂತಕ ವೀರಪ್ಪನ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹಲವು ವರ್ಷಗಳವರೆಗೆ ಕರ್ನಾಟಕ ಹಾಗೂ ತಮಿಳು ನಾಡು ಪೊಲೀಸರಿಗೆ ತಲೆನೋವು ತಂದಿದ್ದ ಈತ ತಮಿಳುನಾಡು ಹಾಗೂ ಕರ್ನಾಟಕದ ಬಾರ್ಡರ್ ಕಾಡುಗಳಲ್ಲಿ ಇದ್ದುಕೊಂಡು ಆನೆಗಳ ದಂತ ಕಳ್ಳತನ ಮಾಡುವುದು ಹಾಗೂ ಕಾಡಿನ ಸಂಪತ್ತನ್ನು ಲೂಟಿ ಮಾಡಿ ಜೊತೆಗೆ ಕಿಡ್ನಾಪ್ ಮತ್ತು ಇನ್ನಿತರ ಕುಖ್ಯಾತ ಚಟುವಟಿಕೆಗಳಲ್ಲಿ ಭಾಗಿಯಾಗಿ ಎರಡು ರಾಜ್ಯದ ಪೊಲೀಸರಿಗೆ ವಾಂಟೆಡ್ ಆಗಿದ್ದ. ತನ್ನ ಜೀವಿತಾವಧಿಯ ಬಹು ಪಾಲನ್ನು ಕಾಡಿನಲ್ಲಿ ಕಳೆದಿರುವ ಈತನಿಗೆ ಕಾಡಿನ ಇಂಚಿಂಚು ಕೂಡ ಗೊತ್ತಿತ್ತು. ಕಾಡಿನಲ್ಲಿ ಅವನ ಜೀವನ ಶೈಲಿ ಹೇಗಿತ್ತು ಹಾಗೂ ಊಟದ ಸಲುವಾಗಿ ಅವನು ಯಾವ ರೀತಿ ವ್ಯವಸ್ಥೆ ಮಾಡಿಕೊಂಡಿದ್ದ ಮತ್ತು ಅವನು ತಂಗುತ್ತಿದ್ದ ಸ್ಥಳ ಇನ್ನಿತರ ಇಂಟೆರೆಸ್ಟಿಂಗ್ ಆದ ಎಲ್ಲಾ ವಿಷಯಗಳನ್ನು ವೀರಪ್ಪನ್ ಆಪ್ತ ಆಗಿದ್ದ ಅಪ್ಪು ಸ್ವಾಮಿ ಅವರು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಅವರು ಹೇಳುವ ಪ್ರಕಾರ ವೀರಪ್ಪನಿಗೆ ಸಸ್ಯಹಾರಕ್ಕಿಂತ ಮಾಂಸಹಾರ ಊಟ ಬಹಳ ಇಷ್ಟವಾಗುತ್ತಿದ್ದಂತೆ ಯಾವುದಾದರೂ ಜಿಂಕೆ ಅಥವಾ ಇನ್ನಿತರ ಪ್ರಾಣಿಯನ್ನು ಭೇಟಿ ಆಡಿ ಅದರಿಂದ ಮಾಂಸದ ಅಡಿಗೆ ತಯಾರಿಸಿಕೊಂಡು ತಿನ್ನುತ್ತಿದ್ದನಂತೆ. ಅಥವಾ ಹಸಿ ಮಾಂಸ ಸಿಗದೇ ಹೋದಾಗ ಈಗಾಗಲೇ ಬೇಟೆ ಆಡಿದ ಮಾಂಸವನ್ನು ಒಣಗಿಸಿ ಒಂದು ಮೂಟೆಯಲ್ಲಿ ಶೇಖರಿಸಿ ಇಟ್ಟುಕೊಳ್ಳುತ್ತಿದ್ದರಂತೆ. ಯಾವಾಗಲೂ ಅವರ ಜೊತೆ ಒಂದು ಮೂಟೆ ಒಣಗಿದ ಮಾಂಸವನ್ನು ಇರುತಿತ್ತಂತೆ. ವಿರಪ್ಪನಿಗೆ ಬೇಕಾದಾಗ ಅದನ್ನು ಬೆಂಕಿಯಲ್ಲಿ ಬೇಯಿಸಿ ರುಚಿಕರವಾದ ಭಕ್ಷ್ಯ ತಯಾರಿಸಿಕೊಂಡು ತಿನ್ನುತ್ತಿದ್ದನಂತೆ. ಜೊತೆಗೆ ಅವನಿಗೆ ಅಕ್ಕಿ ಸಕ್ಕರೆ ಇನ್ನಿತರ ದಿನಸಿ ಪದಾರ್ಥಗಳು ಬೇಕಾದಾಗ ಕಾಡಿನಂಚಿನಿಂದ ಸೌದೆ ಅಥವಾ ಮರಗಳ ಸಲುವಾಗಿ ಕಾಡಿಗೆ ಬರುತ್ತಿದ್ದ ದಿನಗೂಲಿ ನೌಕರರ ಮನವೊಲಿಸಿ ಅವರಿಗೆ ಅವರ ದಿನದ ಕೂಲಿಗಿಂತ ಹೆಚ್ಚು ದುಡ್ಡು ಕೊಟ್ಟು ಅವನಿಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಊರಿನಿಂದ ಕಾಡಿಗೆ ಸಾಗಿಸಿಕೊಳ್ಳುತ್ತಿದ್ದನಂತೆ.

WhatsApp Group Join Now
Telegram Group Join Now
See also  ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು...ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..

ಅಲ್ಲದೆ ಅವನು ಎಲ್ಲಾ ಪದಾರ್ಥಗಳನ್ನು ಹೋದ ಕಡೆಯಲ್ಲ ಹೊತ್ತು ತಿರುಗಲು ಸಾಧ್ಯವಾಗದೆ ಹೋದರೆ ಯಾವುದಾದರೂ ದೊಡ್ಡ ಮರದ ಕೆಳಗೆ ಅಥವಾ ದೊಡ್ಡ ಬಂಡೆಕಲ್ಲಿನ ಕೆಳಗೆ ಗುರುತು ಮಾಡಿ ಅದನ್ನು ಅಲ್ಲಿ ಹೂತಿಕ್ಕುತ್ತಿದ್ದನಂತೆ. ಮತ್ತೊಮ್ಮೆ ಆ ಜಾಗದಲ್ಲಿ ಬಂದಾಗ ಅದನ್ನು ಗುರುತಿಸಿ ತೆಗೆದುಕೊಳ್ಳುತ್ತಿದ್ದನಂತೆ ಆದರೆ ಎಂದು ಕೂಡ ಅವನು ಒಂದೇ ಜಾಗದಲ್ಲಿ ಎರಡು ದಿನ ತಂಗಿ ಇಲ್ಲವಂತೆ ಅವರು ಯಾವುದಾದರೂ ಒಂದು ಜಾಗದಲ್ಲಿ ಒಂದು ರಾತ್ರಿ ಇದ್ದರೆ ಮರುದಿನ ಮತ್ತೊಂದು ಜಾಗವನ್ನು ಬದಲಾಯಿಸುತ್ತಿದ್ದನಂತೆ. ಅಲ್ಲದೆ ಕಾಡಿನ ಯಾವ ರಸ್ತೆ ಎಲ್ಲಿ ಸೇರುತ್ತದೆ ಎಲ್ಲಿ ಕುಡಿಯಲು ನೀರು ಸಿಗುತ್ತದೆ ಇಂಚಿಂಚು ಮಾಹಿತಿಯು ವಿರಪ್ಪನಿಗೆ ತಿಳಿದಿರುತ್ತಿತ್ತಂತೆ.



crossorigin="anonymous">