ಎಚ್ಚರಿಕೆ ವರಮಹಾಲಕ್ಷ್ಮಿ ಹಬ್ಬ ದಿನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ...ಲಕ್ಷ್ಮಿ ಮನೆಯಲ್ಲಿ ನೆಲೆಸೊಲ್ಲ » Karnataka's Best News Portal

ಎಚ್ಚರಿಕೆ ವರಮಹಾಲಕ್ಷ್ಮಿ ಹಬ್ಬ ದಿನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ…ಲಕ್ಷ್ಮಿ ಮನೆಯಲ್ಲಿ ನೆಲೆಸೊಲ್ಲ

ವರಮಹಾಲಕ್ಷ್ಮಿ ಹಬ್ಬದಂದು ತಪ್ಪದೆ ಮಾಡಬೇಕಾದ ಕೆಲಸಗಳು ಇವು, ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ…
ಯಾವುದೇ ಹಬ್ಬವೇ ಆಗಲಿ ಆಚರಣೆ ಆಗಲಿ ಅದನ್ನು ನಾವುಎಷ್ಟು ವಿಜೃಂಭಣೆಯಿಂದ ಮಾಡುತ್ತೇವೆ ಎನ್ನುವುದಕ್ಕಿಂತ ನಾವು ಮಾಡುತ್ತಿರುವ ಪೂಜೆಯು ಎಷ್ಟು ವಿಧಿ ವಿಧಾನಗಳಿಂದ ಕೂಡಿದೆ ಎನ್ನುವುದು ಮುಖ್ಯ. ಅದರಲ್ಲೂ ಸರಿಯಾದ ಪೂಜೆ ಕ್ರಮ ಹಾಗೂ ಪದ್ಧತಿಗಳನ್ನು ಅನುಸರಿಸಿ ಮಾಡಿದರೆ ಮಾತ್ರ ಅದರ ಫಲ ನಮಗೆ ಸಿಗುವುದು ಹೀಗಾಗಿ ವರಮಹಾಲಕ್ಷ್ಮಿ ಹಬ್ಬವನ್ನು ತಾಯಿ ಲಕ್ಷ್ಮಿಯ ಕೃಪ ಕಟಾಕ್ಷ ನಮ್ಮ ಮೇಲೆ ಆಗಲಿ ಎನ್ನುವ ಕಾರಣಕ್ಕಾಗಿ ಮಾಡುತ್ತಿದ್ದೇವೆ ಆದ್ದರಿಂದ ಈ ದಿನ ಯಾವುದೇ ಕಾರಣಕ್ಕೂ ನಾವು ಯಾವುದೇ ತಪ್ಪುಗಳು ಆಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಮತ್ತು ಕೆಲವು ಪದ್ಧತಿಗಳನ್ನು ತಪ್ಪದೆ ಅನುಸರಿಸಬೇಕು ಈ ರೀತಿ ಮಾಡಿದಾಗ ಲಕ್ಷ್ಮಿ ಪ್ರಸನ್ನಳಾಗಿ ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಹಾಗಾಗಿ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡುವಾಗ ಪಾಲಿಸಬೇಕಾದ ಕೆಲವು ನಿಯಮಗಳನ್ನು ಇಲ್ಲಿ ತಿಳಿಸಿದ್ದೇವೆ. ತಪ್ಪದೇ ಇದೆಲ್ಲವನ್ನು ಮಾಡಿ.

WhatsApp Group Join Now
Telegram Group Join Now

ಮೊದಲಿಗೆ ಮನೆಯನ್ನು ಹಬ್ಬಕ್ಕೂ ಮುನ್ನ ಸ್ವಚ್ಛ ಮಾಡಿಕೊಳ್ಳುವುದು ಮುಖ್ಯ ಹಾಗೂ ಎಲ್ಲಿ ಮಡಿ ಇರುತ್ತದೆಯೋ ಅಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎನ್ನುತ್ತಾರೆ ಹಾಗಾಗಿ ಶುಭ್ರತೆ ಇಲ್ಲ ಎಂದ ಕಡೆ ಲಕ್ಷ್ಮಿ ಒಲಿಯುವುದಿಲ್ಲ ಹಾಗಾಗಿ ಗುರುವಾರ ದಿನವೇ ನೀವು ಮನೆಯಲ್ಲವನ್ನು ಸ್ವಚ್ಛ ಮಾಡಿಟ್ಟುಕೊಳ್ಳಿ. ಯಾಕೆಂದರೆ ಶುಕ್ರವಾರ ಬೆಳಗ್ಗೆ ಕ್ಲೀನ್ ಮಾಡಲು ಸಮಯ ಸಿಗುವುದಿಲ್ಲ ನೀವು ಮನೆಯನ್ನು ಒರೆಸುವಾಗ ಮನೆ ಒರೆಸುವ ನೀರಿಗೆ ಅರಿಶಿನ ಅಥವಾ ಉಪ್ಪು ಅಥವಾ ಗೋಮೂತ್ರ ಹಾಕಿ ಮನೆಯನ್ನು ಶುದ್ಧೀಕರಿಸಿಕೊಳ್ಳಿ ನಂತರ ರಂಗೋಲಿ ಇಡುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು. ವರಮಹಾಲಕ್ಷ್ಮಿ ಹಬ್ಬವು ಗುರುವಾರ ಸಂಜೆಯಿಂದಲೇ ಆರಂಭವಾಗಿ ಹಬ್ಬದ ಮರು ದಿನ ತನಕ ಇರುತ್ತದೆ ಆದ್ದರಿಂದ ಯಾವ ಸಮಯದಲ್ಲಿ ಬೇಕಾದರೂ ಲಕ್ಷ್ಮಿ ನಿಮ್ಮ ಮನೆಗೆ ಬರಬಹುದು. ಗುರುವಾರ ಸಂಜೆಯೇ ನೀವು ಮನೆ ಮುಂದೆ ರಂಗೋಲಿ ಹಾಕಿ ಅದು ಯಾವಾಗಲೂ ನಗುತ್ತಿರುವಂತೆ ನೋಡಿಕೊಳ್ಳಬೇಕು.

ಹಾಗೆಯೇ ವಸ್ತಿಲನ್ನು ಕೂಡ ಅಲಂಕರಿಸಿ ಬಾಗಿಲಿಗೆ ಹಸಿರು ತೋರಣ ಕಟ್ಟುವುದನ್ನು ತಪ್ಪಿಸಬಾರದು. ಮಾವಿನ ಎಲೆಗಳಿಂದ ತೋರಣ ಕಟ್ಟುವುದು ಹಾಗೂ ಮಾವಿನ ಎಲೆಯನ್ನೇ ಕಳಸಕ್ಕೆ ಉಪಯೋಗಿಸುವುದು ತುಂಬಾ ಶ್ರೇಷ್ಠ ಮತ್ತು ಕಳಶ ಪ್ರತಿಷ್ಠಾಪನೆ ಒಂದು ಕೆಲಸ ಬಿಟ್ಟು ಬಿಂದಿಗೆಗೆ ಸೀರೆ ಉಡಿಸುವುದು ಅಲಂಕಾರ ಮಾಡುವುದು ಹಾಗೂ ವಸ್ತುಗಳನ್ನು ಜೋಡಿಸಿಕೊಳ್ಳುವುದು ಈ ಎಲ್ಲಾ ಕೆಲಸಗಳನ್ನು ಹಿಂದಿನ ರಾತ್ರಿಯ ಮುಗಿಸಿ ಬಿಡಿ ಹೀಗೆ ಮಾಡಿದಾಗ ಮರುದಿನ ನೀವು ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿ ಮುಗಿಸಲು ಸಹಾಯವಾಗುತ್ತದೆ. ಹಬ್ಬದ ಕುರಿತಾದ ಇನ್ನಷ್ಟು ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

[irp]


crossorigin="anonymous">