ಕೇವಲ ಒಂದೇ ನಿಮಿಷದಲ್ಲಿ ಮನೆಯಲ್ಲಿನ ಸೊಳ್ಳೆಗಳು ಮಾಯ..ಕೆಮಿಕಲ್ ಇಲ್ಲದೆ ಮನೆಯಲ್ಲಿ ತಯಾರಿಸಿ ಈ ಔಷಧಿ - Karnataka's Best News Portal

ಕೇವಲ ಒಂದೇ ನಿಮಿಷದಲ್ಲಿ ಮನೆಯಲ್ಲಿನ ಸೊಳ್ಳೆಗಳು ಮಾಯ..ಕೆಮಿಕಲ್ ಇಲ್ಲದೆ ಮನೆಯಲ್ಲಿ ತಯಾರಿಸಿ ಈ ಔಷಧಿ

ಸೊಳ್ಳೆ ಕಾಟದಿಂದ ತಕ್ಷಣ ಪಾರಾಗಲು ಈ ಉಪಾಯವನ್ನು ಮಾಡಿ…ಮಳೆಗಾಲ ಬಂದಾಗೆಲ್ಲಾ ನಮಗೆ ಕಾಡುವ ಅನೇಕ ಸಮಸ್ಯೆಗಳ ಜೊತೆ ಸೊಳ್ಳೆ ಕಾಟವೂ ಕೂಡ ಒಂದು. ಈ ಸೊಳ್ಳೆ ಕಾಟದಿಂದ ಮನೆಯಲ್ಲಿ ನೆಮ್ಮದಿಯಿಂದ ಮಲಗಲು ಕೂಡ ಸಾಧ್ಯವಾಗುವುದಿಲ್ಲ ಸೊಳ್ಳೆಗಳ ಗುಯ್ ಗುಟ್ಟುವ ಸದ್ದು ಮತ್ತು ಸೊಳ್ಳೆ ಕಚ್ಚುವುದರಿಂದ ಬಹಳ ಕಿರಿಕಿರಿ ಆಗುತ್ತದೆ. ಇದಕ್ಕಾಗಿ ಸೊಳ್ಳೆ ಬತ್ತಿ ಹಚ್ಚೋಣ ಎಂದರೆ ಕೆಮಿಕಲ್ ಎನ್ನುವ ಭಯ. ಮಕ್ಕಳಿದ್ದರೆ ಅದನ್ನು ಉಪಯೋಗಿಸಲು ಹಿಂದೆ ಮುಂದೆ ನೋಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಸೊಳ್ಳೆ ಕಾಟದಿಂದ ತಕ್ಷಣ ಪರಿಹಾರ ಸಿಗಬೇಕು ಎಂದರೆ ನ್ಯಾಚುರಲ್ ಆಗಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಈ ಎರಡು ಉಪಾಯವನ್ನು ಮಾಡಿ ನೋಡಿ ಮೊದಲಿಗೆ ಮೂರು ಚಮಚದಷ್ಟು ಬೇವಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ನಾಲ್ಕು ಚಿಕ್ಕ ಬಿಳಿ ಕರ್ಪೂರ ಹಾಕಿ ಅಥವಾ ಬಿಳಿ ಕರ್ಪೂರದ ಬದಲು ಪಚ್ಚ ಕರ್ಪೂರ ಇದ್ದರೂ ಕೂಡ ಹಾಕಬಹುದು.

WhatsApp Group Join Now
Telegram Group Join Now

ಕರ್ಪೂರವನ್ನು ಪುಡಿ ಮಾಡಿ ಬೇವಿನ ಎಣ್ಣೆಯ ಜೊತೆ ಚೆನ್ನಾಗಿ ಮಿಕ್ಸ್ ಮಾಡಿ. ಬೇವಿನ ಎಣ್ಣೆಯು ನಿಮಗೆ ಎಲ್ಲಾ ಅಂಗಡಿಗಳಲ್ಲೂ ಕೂಡ ಸಿಗುತ್ತದೆ. ಇದಕ್ಕೆ ಹೆಚ್ಚಿನ ಬೆಲೆಯೂ ಕೂಡ ಇಲ್ಲ 50 ರೂಪಾಯಿ ಒಳಗಡೆ ನಿಮಗೆ ಬೇವಿನ ಎಣ್ಣೆ ಸಿಗುತ್ತದೆ. ಈ ರೀತಿ ಚೆನ್ನಾಗಿ ಕರ್ಪೂರವನ್ನು ಪುಡಿ ಮಾಡಿ ಬೇವಿನ ಎಣ್ಣೆಯೊಂದಿಗೆ ಮಿಕ್ಸ್ ಮಾಡಿದ ಬಳಿಕ ಎರಡು ಪಲಾವ್ ಎಲೆ ತೆಗೆದುಕೊಂಡು ಪಲಾವ್ ಎಲೆಯ ಎರಡು ಕಡೆ ಬೇವಿನ ಎಣ್ಣೆಯ ಈ ಮಿಶ್ರಣವನ್ನು ಹಚ್ಚಿ ನಂತರ ಪಲಾವ್ ಎಲೆಗೆ ಬೆಂಕಿ ಹಚ್ಚಿ ಸುಡಬೇಕು ಆ ಕಡೆ ಎಲೆಯನ್ನು ಸುಡಬೇಕು. ಆಗ ಅವು ಸತ್ತು ಹೋಗುತ್ತವೆ ಅಥವಾ ಅಲ್ಲಿಂದ ಹೊರಟು ಹೋಗುತ್ತವೆ. ಈ ವಾಸನೆಗೂ ಸೊಳ್ಳೆಗೂ ಖಂಡಿತ ಆಗಿ ಬರುವುದಿಲ್ಲ ಮತ್ತೆ ಆ ಕಡೆ ಅವು ತಿರುಗಿ ಸಹ ನೋಡುವುದಿಲ್ಲ.

See also  ಕಣ್ಣೆದುರೇ ದೇವತೆಗಳ ಸಂಚಾರ ಈ ಈ ವಿಸ್ಮಯ ನಿಜಕ್ಕೂ ನಂಬೋದ್ಯಾಕೆ ಸಾಧ್ಯಾನ..

ಇನ್ನು ಉಳಿದ ಎಣ್ಣೆಯನ್ನು ವೇಸ್ಟ್ ಮಾಡುವ ಬದಲು ಒಂದು ದೀಪವನ್ನು ತೆಗೆದುಕೊಂಡು ಆ ದೀಪದ ಒಳಗಡೆ ಈ ಎಲ್ಲ ಎಣ್ಣೆಯನ್ನು ಹಾಕಿ ಬತ್ತಿ ಮಾಡಿ ದೀಪವನ್ನು ಹಚ್ಚಿ ಇಡಿ. ಈ ದೀಪ ಬೆಳಕನ್ನು ಕೂಡ ನೀಡುತ್ತದೆ ಅದರ ಜೊತೆಗೆ ದೀಪ ಉರಿಯುವಾಗ ಬರುವ ಆ ವಾಸನೆಯಿಂದ ಸೊಳ್ಳೆಗಳು ನಿಮ್ಮ ಮನೆಗೆ ಬರದಂತೆ ತಡೆಯುತ್ತದೆ. ದೀಪ ಉರಿಯುವ ತನಕ ಹಾಗೂ ಉರಿದ ಮೇಲೂ ಕೂಡ ಆ ವಾಸನೆ ಇರುವುದರಿಂದ ಸೊಳ್ಳೆ ನಿಮ್ಮ ಮನೆಗೆ ಬರುವುದಿಲ್ಲ. ಸೊಳ್ಳೆಗಳು ಇದ್ದರೆ ಇರುವ ಸೊಳ್ಳೆ ಕೂಡ ಆಚೆ ಹೋಗಿಬಿಡುತ್ತದೆ. ಆಗ ನೀವು ನೆಮ್ಮದಿಯಿಂದ ನಿದ್ರೆ ಮಾಡಬಹುದು ಮತ್ತು ಈ ವಾಸನೆಯಿಂದ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ.



crossorigin="anonymous">