ಮನೆಯಲ್ಲೇ ಕೆಜಿಗಟ್ಟಲೆ ತುಪ್ಪ ಮಾಡ್ಬೇಕಾ ? ಬರೇ ಒಂದು ತಿಂಗಳ ಪ್ಯಾಕೇಟ್ ಹಾಲು ಸಾಕು..ಸೀಕ್ರೆಟ್ ಟಿಪ್ಸ್ » Karnataka's Best News Portal

ಮನೆಯಲ್ಲೇ ಕೆಜಿಗಟ್ಟಲೆ ತುಪ್ಪ ಮಾಡ್ಬೇಕಾ ? ಬರೇ ಒಂದು ತಿಂಗಳ ಪ್ಯಾಕೇಟ್ ಹಾಲು ಸಾಕು..ಸೀಕ್ರೆಟ್ ಟಿಪ್ಸ್

ಬರೇ ಪ್ಯಾಕೆಟ್ ಹಾಲಿದ್ರೆ ಸಾಕು ಕೆಜಿಗಟ್ಟಲೆ ಬೆಣ್ಣೆ ತುಪ್ಪ ಮನೆಯಲ್ಲೇ ಮಾಡಬಹುದು !!ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಹಸು ಎಮ್ಮೆ ಸಾಕುತ್ತಿದ್ದರು ಅವುಗಳಿಂದ ಹಾಲು, ಮೊಸರು ಬೆಣ್ಣೆ ತುಪ್ಪ ತಯಾರಿಸುತ್ತಿದ್ದರು ಆಗ ಮನೆಯಲ್ಲಿ ಇದ್ದಂತಹ ವಯಸ್ಸಾದ ಅಜ್ಜಿ ಗಳು ಹಾಲನ್ನು ಕಾಯಿಸಿ ಅದರಿಂದ ಕೆನ್ನೆಯನ್ನು ತೆಗೆದು ಅದರಿಂದ ಬೆಣ್ಣೆಯನ್ನು ಮಾಡಿ ಬೆಣ್ಣೆಯಿಂದ ತುಪ್ಪವನ್ನು ಮಾಡಿ ಮಕ್ಕಳಿಗೆ ಮೊಮ್ಮಕ್ಕಳಿಗೆ ಎಂದು ಮನೆಯಲ್ಲಿಯೇ ಶುದ್ಧವಾದ ಬೆಣ್ಣೆಯನ್ನು ತಯಾರಿಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಹಿಂದಿನ ಕಾಲದವರು ಅನುಸರಿಸಿ ದಂತಹ ವಿಧಾನಗಳನ್ನು ಇಂದಿನ ಪೀಳಿಗೆಯವರು ಮರೆತು ಹೋಗುತ್ತಾ ಇದ್ದಾರೆ ಏಕೆಂದರೆ ಪ್ರತಿಯೊಬ್ಬರಿಗೂ ಸಮಯದ ಕೊರತೆ ಇರುವುದರಿಂದ ಎಲ್ಲರೂ ಸಹ ಅತಿ ಸುಲಭವಾಗಿ ದೊರೆಯುವಂತಹ ನಿಯಮಗಳನ್ನು ಪಾಲಿಸುತ್ತಿದ್ದಾರೆ.

WhatsApp Group Join Now
Telegram Group Join Now

ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆಗಳಲ್ಲಿಯೇ ಸ್ವಂತವಾಗಿ ಬೆಣ್ಣೆ ತುಪ್ಪ ಮಾಡಿಕೊಳ್ಳುವುದರ ಬದಲು ಪ್ಯಾಕೆಟ್ ಗಳಲ್ಲಿ ಸಿಗುವಂತಹ ತುಪ್ಪ ಬೆಣ್ಣೆ ತಂದು ಉಪಯೋಗಿಸುತ್ತಿ ದ್ದಾರೆ ಇನ್ನೂ ಕೆಲವರಿಗೆ ತುಪ್ಪವನ್ನು ಹೇಗೆ ಮಾಡುವುದು ಎಂಬ ವಿಧಾನವೇ ಗೊತ್ತಿರುವುದಿಲ್ಲ ಅಂತವರಿಗೆ ತುಪ್ಪವನ್ನು ಮಾಡುವ ವಿಧಾನವನ್ನು ಈ ಕೆಳಗಿನಂತೆ ಹೇಳಲಾಗಿದೆ ತುಪ್ಪ ಹೇಗೆ ತಯಾರಾಗುತ್ತದೆ ಎಂಬ ಹಲವಾರು ವಿಷಯಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಒಂದು ಅಗಲವಾದ ಪಾತ್ರೆಯಲ್ಲಿ ಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಹಾಲನ್ನು ಕಾಯಿಸಿ ಹಾಗೆಯೇ ಹಾಲು ಕಾಯುತ್ತಾ ಹಾಲಿನ ಮೇಲ್ಭಾಗದಲ್ಲಿ ಕೆನೆಯ ರೂಪವಾಗಿ ಮಾರ್ಪಾಡಾಗುತ್ತದೆ ನಂತರ ಅದು ಆರಿದ ಮೇಲೆ ಆ ಕೆನೆಯನ್ನು ತೆಗೆದು ಒಂದು ಬಾಕ್ಸ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಅಥವಾ ಫ್ರೀಜರ್ ನಲ್ಲಿ ಇಟ್ಟುಕೊಳ್ಳುವುದು ಹೀಗೆ ಒಂದರಿಂದ ಹತ್ತು ದಿನಗಳ ತನಕ ಸಂಗ್ರಹಿಸಿ ಇಟ್ಟು ಕೊಳ್ಳಬೇಕು.

See also  ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಈ ವಿಶೇಷ 16 ಸೂಚನೆ ನೀಡುತ್ತಾಳೆ..ಗಂಟೆ,ಬಾಗಿಲು ಎಲ್ಲವೂ ಹೇಗೆ

ನಂತರ ಮಾರನೇ ದಿನ ಆ ಕೆನೆಯನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ ಅದನ್ನು ಒಂದು ಮಜ್ಜಿಗೆಯನ್ನು ಕಡೆಯುವಂತಹ ಮಂತಿನಿಂದ ಹಾಕಿ ಕೈಯಾಡಿಸಬೇಕು ಆಗ ಕೆನೆಯು ಒಡೆದು ಬೆಣ್ಣೆಯ ರೂಪಕ್ಕೆ ತಿರುಗುತ್ತದೆ ನಂತರ ಅದನ್ನು ನಾವು ಸ್ವಲ್ಪ ಬೆಚ್ಚಗಿರುವ ನೀರಿನಿಂದ ಕೈ ಹಾಕಿ ಬೆಣ್ಣೆಯನ್ನು ಒಂದು ಪಾತ್ರೆಗೆ ತೆಗೆದು ಇಟ್ಟುಕೊಳ್ಳಬೇಕು ಹೀಗೆ ಮಾಡಲಿಲ್ಲ ಎಂದರೆ ಬೆಣ್ಣೆ ಎಲ್ಲಾ ಕೈಗೆ ಅಂಟಿಕೊಳ್ಳುತ್ತದೆ ಆದ್ದರಿಂದ ಈ ವಿಧಾನವನ್ನು ಅನುಸರಿಸುವುದು ಉತ್ತಮ ನಂತರ ಬೆಣ್ಣೆಯನ್ನು ಹಾಕಿದ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಚೆನ್ನಾಗಿ ಕುದಿಸಬೇಕು ಕುದಿಯುತ್ತಿರುವಾಗ ಗುಳ್ಳೆಗಳು ಬರುವುದು ನಿಂತ ತಕ್ಷಣ ಅದನ್ನು ಒಂದು ಕಾಟನ್ ಬಟ್ಟೆಯ ಮುಖಾಂತರ ಸೋಸಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">