ತಿರುಮಲ ಸ್ವಾಮಿಯವರ ಗಡ್ಡಕ್ಕೆ ಕರ್ಪೂರ ಯಾಕೆ ಹಚ್ಚುತ್ತಾರೆ ಗೊತ್ತಾ ? ಬಾಲಾಜಿಯ ಭಕ್ತರು ಅರಿಯದ ವಿಷಯ - Karnataka's Best News Portal

ತಿರುಮಲ ಸ್ವಾಮಿಯವರ ಗಡ್ಡಕ್ಕೆ ಕರ್ಪೂರ ಯಾಕೆ ಹಚ್ಚುತ್ತಾರೆ ಗೊತ್ತಾ ? ಬಾಲಾಜಿಯ ಭಕ್ತರು ಅರಿಯದ ವಿಷಯ

ತಿರುಮಲ ಸ್ವಾಮಿಯವರ ಗಡ್ಡಕ್ಕೆ ಕರ್ಪೂರ ಏಕೆ ಹಚ್ಚುತ್ತಾರೆ ??
ತಿರುಮಲ ಸ್ವಾಮಿ ಯವರ ಗಡ್ಡಕ್ಕೆ ಕರ್ಪೂರವನ್ನು ಅರ್ಚಕರು ಏಕೆ ಹಾಕುತ್ತಾರೆ ಎಂಬುದರ ವಿಷಯವನ್ನು ನಾವು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ ನಾವು ಅನಂತ ಆಳ್ವಾರ್ ಬಗ್ಗೆ ತಿಳಿದುಕೊಳ್ಳಬೇಕು ಈ ಅನಂತ ಆಳ್ವಾರ್ ಅವರು 1503ನೇ ವರ್ಷದಲ್ಲಿ ಹುಟ್ಟಿದ್ದು ಅವರು ಅವರ ಚಿಕ್ಕ ವಯಸ್ಸಿನಿಂದಲೇ ವೇದಗಳನ್ನು ಶಾಸ್ತ್ರಗಳನ್ನು ಓದುತ್ತಿ ದ್ದವರು ಅವರು ಶ್ರೀರಾಮನುಜಾ ಆಚಾರ್ಯರ ಶಿಷ್ಯ ಅನಂತ ಆಳ್ವಾರ್ ಅವರ ಗುರುವಾದ ತಿರುಮಲ ನಂದಿ ತಿರುಮಲೆಯಲ್ಲಿ ಇದ್ದು ಶ್ರೀ ವೆಂಕಟಸ್ವಾಮಿಗೆ ಯಾವಾಗಲೂ ಪೂಜೆಯನ್ನು ಮಾಡುತ್ತಿದ್ದರು ತಿರುಮಲ ನಂದಿ ಯವರಿಗೆ ತುಂಬಾ ವಯಸ್ಸಾಗಿದ್ದ ರಿಂದ ಅವರಿಗೆ ಪ್ರತಿದಿನ ಸ್ವಾಮಿಗೆ ಪೂಜೆಗಳನ್ನು ಸೇವೆಗಳನ್ನು ಮಾಡುವುದಕ್ಕೆ ಆಗಲಿಲ್ಲ ಆ ವಿಷಯ ವನ್ನು ತಿಳಿದುಕೊಂಡಂತಹ ಶ್ರೀ ರಾಮಾನುಜಾ ಆಚಾರ್ಯರು ತನ್ನ ಶಿಷ್ಯರನ್ನು ಬರಮಾಡಿ ನಿಮ್ಮಲ್ಲಿ ಯಾರಿಗಾದರೂ ತಿರುಮಲೆಗೆ ಹೋಗುವುದಕ್ಕೆ ಆಗುತ್ತದೆ ಎಂದು ಕೇಳಿದರು.

ತಿರುಮಲೆಯ ಆ ಅಡವಿಯ ಬಗ್ಗೆ ಅಲ್ಲಿರುವ ಮೃಗಗಳ ಬಗ್ಗೆ ಎಲ್ಲಾ ಶಿಷ್ಯರಿಗೆ ಗೊತ್ತು ಆದ್ದರಿಂದ ಯಾರು ಕೂಡ ಅಲ್ಲಿಗೆ ಹೋಗುವುದಕ್ಕೆ ಒಪ್ಪಿಕೊಳ್ಳಲಿಲ್ಲ ಸ್ವಾಮಿ ಶ್ರೀ ವೆಂಕಟೇಶ್ವರನ ಭಕ್ತನಾಗಿದ್ದಂತಹ ಅನಂತ ಆಳ್ವಾರ್ ಆ ಶಿಷ್ಯರ ಗುಂಪಿನಿಂದ ಹೊರಗಡೆ ಬಂದು ಶ್ರೀ ರಾಮಾನುಜಾ ಆಚಾರ್ಯರ ಬಳಿ ಬಂದು ಹೀಗೆ ಹೇಳಿದರು ಗುರುಗಳೇ ನನಗೆ ಅಪ್ಪಣೆ ಕೊಡಿ ನಾನು ಆ ತಿರುಮಲೆಗೆ ಹೋಗಿ ಸ್ವಾಮಿ ಶ್ರೀ ವೆಂಕಟೇಶ್ವರನಿಗೆ ಪೂಜೆಯನ್ನು ಮಾಡುತ್ತೇನೆ ಎಂದು ಹೇಳಿದರು ಅನಂತ ಆಳ್ವಾರ್ ಹೇಳಿದ ಮಾತನ್ನು ಕೇಳಿದ ಶ್ರೀ ರಾಮಾನುಜಾ ಆಚಾರ್ಯರು ತುಂಬಾನೇ ಸಂತೋಷ ಪಟ್ಟರು ಅವರು ಅನಂತ ಆಳ್ವಾರ್ ಅವರನ್ನು ಗಂಡು ಮಗ ಎಂದು ಹೊಗಳಿದರು ತಕ್ಷಣ ಅನಂತ ಆಳ್ವಾರ್ ಅವರನ್ನು ತಿರುಮಲೆಗೆ ಹೊರಡು ಎಂದು ಹೇಳಿದರು.

WhatsApp Group Join Now
Telegram Group Join Now
See also  ತುಲಾ ರಾಶಿ ಏಪ್ರಿಲ್ ತಿಂಗಳ ಭವಿಷ್ಯ 6 ದಿನ ರಾಜಯೋಗ,24 ದಿನ ಬಹಳ ಸಂಕಷ್ಟ..ಏಕೆ ಗೊತ್ತಾ ?

ಅನಂತ ಆಳ್ವಾರ್ ಹಾಗೂ ಅವರ ಪತ್ನಿ ಇಬ್ಬರು ತಿರುಮಲೆಗೆ ಹೋಗಿ ಅಲ್ಲಿ ಒಣಗಿ ಹೋಗಿ ಬಿದ್ದಿದ್ದಂತಹ ಎಲೆಗಳು ಮತ್ತು ಹಣ್ಣಿನ ಸಿಪ್ಪೆಗಳನ್ನು ಅಲ್ಲೇ ಇದ್ದಿದ್ದಂತಹ ಜಾಗದಲ್ಲಿ ಸ್ವಚ್ಛಗೊಳಿಸಿದರು ಒಂದು ಸುಂದರವಾದ ಹೂವಿನ ತೋಟವನ್ನು ಏರ್ಪಾಡು ಮಾಡಿದರು ಹಾಗೂ ಆ ಹೂವಿನ ತೋಟದಲ್ಲಿ ಬೆಳೆದ ಹೂಗಳನ್ನು ತೆಗೆದುಕೊಂಡು ಬಂದು ಮಾಲೆಯಾಗಿ ಕಟ್ಟಿ ಅದನ್ನು ವೆಂಕಟೇಶ್ವರ ಸ್ವಾಮಿಗೆ ಹಾಕುತ್ತಿದ್ದರು ಬೇಸಿಗೆ ಕಾಲ ಬಂತು ಪುಷ್ಕರಣಿ ಜಲಪಾತದಲ್ಲಿ ಇದ್ದಂತಹ ನೀರು ಖಾಲಿಯಾಗುತ್ತಿರುವುದನ್ನು ನೋಡಿದ ಅನಂತ ಆಳ್ವಾರ್ ತನ್ನ ಹೂವಿನ ತೋಟ ಎಲ್ಲಾ ಹಾಳಾಗಿಬಿಡುತ್ತದೆ ಎಂದು ಅದನ್ನು ಹೇಗೆ ಕಾಪಾಡಿಕೊಳ್ಳುವುದು ಎಂದು ಯೋಚನೆ ಮಾಡಿದರು ಅಲ್ಲಿರುವಂತಹ ಹೂ ಗಿಡಗಳನ್ನು ಕಾಪಾಡಿಕೊಳ್ಳುವು ದಕ್ಕೋಸ್ಕರ ಒಂದು ದೊಡ್ಡ ಬಾವಿಯನ್ನು ತೊಡಬೇಕು ಎಂದು ನಿರ್ಧಾರ ಮಾಡಿದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">