ಏನೇನು ಹೇಳಿದ್ದೀರ ಇದನ್ನು ಹೇಳಿ ಎಂದ ಕಿಚ್ಚನಿಗೆ ಕೌಂಟರ್ ಕೊಡಲಾಗದೆ ನಗುತಿದ್ದ ಸೋನು ಶ್ರೀನಿವಾಸ್ ಗೌಡ…ಸೋನು ಶ್ರೀನಿವಾಸ್ ಗೌಡ ತನ್ನ ಅಶ್ಲೀಲ ವಿಡಿಯೋಗಳಿಂದ ಕುಖ್ಯಾತಿ ಹೊಂದಿ, ಕನ್ನಡದ ಟ್ರೋಲ್ ಪೇಜ್ ಗಳಿಗೆ ಭರ್ಜರಿ ಆಹಾರವಾಗಿರುವ ಸೋಶಿಯಲ್ ಮೀಡಿಯಾ ಸ್ಟಾರ್. ಇದರ ನಡುವೆ ಇವರು ಫೇಮಸ್ ಆಗಿದ್ದು ಟಿಕ್ ಟಾಕ್ ವಿಡಿಯೋಗಳಿಂದ. ತಮ್ಮ ಎಡವಟ್ಟು ಇಂಗ್ಲಿಷ್ ಹಾಗೂ ಅರ್ಧಂಬರ್ಧ ಬಟ್ಟೆಯಿಂದ ಯಾವಾಗಲೂ ಇವರ ವಿಡಿಯೋಗಳು ಟ್ರೋಲ್ ಆಗಿ ವೈರಲ್ ಆಗುತ್ತಿದ್ದವು ಸದ್ಯಕ್ಕೆ ಸೋಶಿಯಲ್ ಮೀಡಿಯಾ ಉಪಯೋಗಿಸುವ ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ಸೋನು ಹೆಸರು ತಿಳಿದಿರುತ್ತದೆ. ಈ ಬಾರಿ ಈಕೆ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎರಡನೇ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ಮನೆ ಒಳಗೆ ಎಂಟ್ರಿ ಕೊಟ್ಟಿರುವುದರಿಂದ ಕರ್ನಾಟಕದ ಬಹುತೇಕ ಬಿಗ್ ಬಾಸ್ ಅಭಿಮಾನಿಗಳು ಇದರ ಬಗ್ಗೆ ತುಂಬಾ ಬೇಸರಪಟ್ಟು ಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಇವರನ್ನು ವೇದಿಕೆಗೆ ಆಹ್ವಾನಿಸಿದ ಕಿಚ್ಚ ಸುದೀಪ್ ಅವರು ಎಲ್ಲರ ಜೊತೆ ಮಾತನಾಡುವಂತೆ ಇವರ ಜೊತೆಗೂ ಕೂಡ ಮಾತಿಗೆ ಇಳಿದಿದ್ದಾರೆ. ಆಗ ಅವರನ್ನು ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಬಂದಿರುವುದಕ್ಕೆ ಹಾಗೂ ಮನೆ ಒಳಗೆ ಹೋಗದು ರೆಡಿ ಆಗಿರುವುದಕ್ಕೆ ಅವರ ಎಕ್ಸ್ಪೀರಿಯನ್ಸ್ ಬಗ್ಗೆ ಕೇಳಿದಾಗ ಸೋನು ಗೌಡ ಅವರು ನನಗೆ ಹೇಗೆ ಅನಿಸುತ್ತಿದೆ ಎನ್ನುವುದನ್ನು, ನನ್ನ ಖುಷಿಯನ್ನು ಹೇಳಲು ನನಗೆ ಆಗುತ್ತಿಲ್ಲ ಎಂದು ಉತ್ತರಿಸಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್ ಅವರು ಅವರನ್ನು ಕಿಚಾಯಿಸಿ ಏನೆನೋ ಹೇಳಿದ್ದೀರಾ ಇದನ್ನು ಹೇಳಿ ಎಂದು ತಮಾಷೆ ಮಾಡಿದ್ದಾರೆ ಅದಕ್ಕೆ ಸೋನು ಗೌಡ ಅವರು ಸುಮ್ಮನೆ ನಕ್ಕಿದ್ದಾರೆ ಮತ್ತು ಶೋಗೆ ಹೇಗೆ ಪ್ರಿಪೇರ್ ಆಗಿದ್ದೀರಾ ಎಂದು ಕಿಚ್ಚ ಸುದೀಪ್ ಅವರು ಪ್ರಶ್ನಿಸಿದಾಗ ನಾನು ಎಂದು ಕೂಡ ಯಾವುದಕ್ಕೂ ಪ್ರಿಪೇರ್ ಆಗೋದಿಲ್ಲ ಆನ್ ದ ಸ್ಪಾಟ್ ಏನ್ ಅನಿಸುತ್ತದೆ ಅದನ್ನು ಹೇಳಿಬಿಡುತ್ತೇನೆ ಹಾಗೆ ಮಾಡುತ್ತೇನೆ ಎಂದಿದ್ದಾರೆ.

ಅದಕ್ಕೆ ಕಿಚ್ಚ ಸುದೀಪ್ ಗೊತ್ತಿದೆ ಬಿಡಿ ಎಂದು ಮತ್ತೆ ಕೌಂಟರ್ ನೀಡಿದ್ದಾರೆ. ಹೊರಗಡೆ ಇದ್ದಾಗ ಬಹಳ ವಿವಾದ ಮಾಡಿಕೊಂಡಿದ್ದ ಸೋನು ಗೌಡ ಅವರು ಈಗ ಮನೆ ಒಳಗೆ ಮತ್ತೆಷ್ಟು ರಗಳೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ ಆದರೂ ಪಡ್ಡೆ ಹುಡುಗರಿಗೆ ಮಾತ್ರ ಸೋನು ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿರುವುದಕ್ಕೆ ಬಹಳ ಖುಷಿಯಾಗಿದೆ. ಆದರೆ ಟ್ರೋಲಿಗರು ಮಾತ್ರ ಹೊಟ್ಟೆಗೆ ಬೆಂಕಿ ಬಿದ್ದವರ ಹಾಗೆ ಹೊಟ್ಟೆ ಉರಿದು ಕೊಳ್ಳುತ್ತಿದ್ದಾರೆ.

By admin

Leave a Reply

Your email address will not be published. Required fields are marked *