ಕೂದಲು ಉದುರುವಿಕೆ ಕೂದಲು ಬೆಳೆಯುವುದಕ್ಕೆ ಮನೆ ಮದ್ದು||ಕೂದಲು ಉದುರುವಿಕೆಯ ಸಮಸ್ಯೆಯು ತುಂಬಾ ಸಮಸ್ಯೆಯನ್ನು ಉಂಟುಮಾಡುತ್ತದೆ ವಾತಾವರಣ ದಲ್ಲಿನ ಮಾಲಿನ್ಯ ಒತ್ತಡ ಕೆಟ್ಟ ಗುಣಮಟ್ಟದ ನೀರು ಇದು ಕೂದಲು ಉದುರುವಿಕೆಗೆ ಮುಖ್ಯ ಕಾರಣ ವಾಗಿದೆ ಎಂದು ಹೇಳಬಹುದಾಗಿದೆ. ಪೋಷಕಾಂಶಗಳ ಕೊರತೆ ಅಲರ್ಜಿ ಅವರ ಜೀವನ ಶೈಲಿ ಹಾಗೆಯೇ ಹಾರ್ಮೋನ್ ಗಳ ಸಮತೋಲನ ಕೂದಲಿನ ಕೆಟ್ಟ ಹಾರೈಕೆ ಮತ್ತು ಅನುವಂಶೀಯವಾಗಿಯೂ ಇದು ಬರಬಹುದು ತಜ್ಞರ ಪ್ರಕಾರ ಕೂದಲ ಉದುರುವಿಕೆ ಮತ್ತು ಕೂದಲು ತೆಳ್ಳಗಾಗುವ ಸಮಸ್ಯೆ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ ಎಂದು ಹೇಳುತ್ತಾರೆ ಕೂದಲು ಉದುರುವುದಕ್ಕೆ ಪ್ರಾರಂಭಿಸಿದ ತಕ್ಷಣ ಯಾವ ಎಣ್ಣೆ ಹಚ್ಚಬೇಕು ಯಾವ ಶಾಂಪೂವನ್ನು ಹಾಕಬೇಕು ಎಂದು ಹಲವಾರು ಜನ ಚಿಂತಿಸುತ್ತಿರುತ್ತಾರೆ ಇವುಗಳ ಬದಲಾಗಿ ಮುಖ್ಯವಾಗಿ ಕೂದಲು ಯಾವ ಕಾರಣಕ್ಕೆ ಉದುರುತ್ತಿದೆ ಎಂದು ತಿಳಿದುಕೊಂಡರೆ ಕೂದಲು ಉದುರುವುದನ್ನು ತಡೆಗಟ್ಟಬಹುದು.

ಕೂದಲು ಉದುರುವುದನ್ನು ತಡೆಗಟ್ಟಲು ಬಾಹ್ಯ ಹಾಗೂ ಆಂತರಿಕ ಆರೈಕೆ ಬಹು ಮುಖ್ಯ ನಮ್ಮ ಆಹಾರ ಕ್ರಮ ಜೀವನ ಶೈಲಿ ಕೂಡ ಕೂದಲಿನ ಆರೋಗ್ಯದ ಮೇಲೆ ಪ್ರಭಾವ ಬೀರುವುದು ಆಹಾರ ಸೇವನೆಯಲ್ಲಿ ಅತ್ಯಧಿಕ ಖಾರ ಉಪ್ಪು ಹುಳಿ ಆಹಾರ ಸೇವನೆ ಮತ್ತು ಕಾಫಿ ಕುಡಿಯುವ ಚಟ ಎಣ್ಣೆಯಲ್ಲಿ ಕರಿದಂತಹ ಆಹಾರ ಪದಾರ್ಥಗಳು ಹೀಗೆ ಅಗತ್ಯಕ್ಕೂ ಮೀರಿದಂತಹ ಆಹಾರವನ್ನು ಸೇವನೆ ಮಾಡುವುದ ರಿಂದ ಹೆಚ್ಚು ಕೊಬ್ಬಿನಂಶ ಇರುವಂತಹ ಆಹಾರವನ್ನು ಸೇವನೆ ಮಾಡುವುದರಿಂದಲೂ ಈ ರೀತಿಯ ಆಹಾರ ಕ್ರಮದಿಂದ ಕೂದಲು ಉದುರುವುದರ ಸಮಸ್ಯೆ ಹೆಚ್ಚಾಗುವುದು.
ಹಾಗಾದರೆ ಕೂದಲು ಉದರವಿಕೆಯನ್ನು ತಡೆಗಟ್ಟಲು ಒಂದು ಎಣ್ಣೆಯನ್ನು ತಯಾರು ಮಾಡುವುದನ್ನು ತಿಳಿದುಕೊಳ್ಳೋಣ ಅದನ್ನು ಹೇಗೆ ಮಾಡುವುದು

ಎಂದರೆ ಬೆಟ್ಟದ ನೆಲ್ಲಿಕಾಯಿಯ ಹಸಿರಸ ಅಂದರೆ ನೆಲ್ಲಿಕಾಯಿಯನ್ನು ಜಜ್ಜಿ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ರುಬ್ಬಿ ರಸ ತೆಗೆದು ಕೊಂಡು ಕಾಲು ಲೀಟರ್ ನಷ್ಟು ತೆಗೆದುಕೊಳ್ಳಬೇಕು ಮತ್ತು ದಾಸವಾಳದ ಎಲೆ ಹಾಗೂ ಹೂವನ್ನು ರುಬ್ಬಿ ನುಣ್ಣನೆ ಪೇಸ್ಟ್ ರೀತಿ ತಯಾರಿಸಿ ಅದರಿಂದ ರಸವನ್ನು ಕಾಲು ಲೀಟರ್ ನಷ್ಟ ತೆಗೆದುಕೊಂಡು ಮತ್ತು ಅಲೋವೆರಾ ಗಿಡದಲ್ಲಿ ಇರುವಂತಹ ಬಿಳಿ ಭಾಗ ಇದನ್ನು ಕಾಲು ಲೀಟರ್ ತೆಗೆದುಕೊಂಡು ಮತ್ತು ಕರಿಬೇವಿನ ಸೊಪ್ಪಿನ ಎಲೆಯ ರಸವನ್ನು ಸಹ ಕಾಲು ಲೀಟರ್ ನಷ್ಟು ತೆಗೆದುಕೊಂಡು ಇಷ್ಟನ್ನು ಒಂದು ಲೀಟರ್ ಕೊಬ್ಬರಿ ಎಣ್ಣೆಯ ಜೊತೆ ಮಿಶ್ರಣ ಮಾಡಿ ವಾರಕ್ಕೆ ಮೂರು ದಿನದಂತೆ ಇದನ್ನು ಹಚ್ಚುತ್ತಾ ಬಂದರೆ ಕೂದಲಿನ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *