ವರ್ಷಾನುಗಟ್ಟಲೆ ಇಟ್ಟರು ಕಾಳುಗಳು ಹುಳು ಬೀಳುವುದಿಲ್ಲ ಈ ವಿಧಾನ ಬಳಸಿ ಸಾಕುಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹುಳುಗಳ ಸಮಸ್ಯೆ ಹೆಚ್ಚಾಗಿರುತ್ತದೆ ಅದರಲ್ಲಿ ಕೂಡ ನಿಮ್ಮ ಮನೆಯಲ್ಲಿ ಇರುವಂತಹ ಆಹಾರ ಧಾನ್ಯಗಳಾದ ಗೋಧಿ ಅಕ್ಕಿ ಬೇಳೆ ಇನ್ನಿತರ ಸಾಂಬಾರ ಪದಾರ್ಥಗಳಿಗೆ ಹೆಚ್ಚಿನ ಹುಳುಗಳು ಬೀಳುತ್ತದೆ. ಕೇವಲ ನೆನ್ನೆ ಮೊನ್ನೆಯಷ್ಟೇ ಖರೀದಿ ಮಾಡಿದಂತಹ ಪದಾರ್ಥಗಳಿಗೆ ಕೂಡ ಈ ಹುಳ ಉಪಟಗಳ ಕಾಟ ಹೆಚ್ಚಾಗಿರುತ್ತದೆ. ಹಾಗಾಗಿ ಇಂದು ಈ ಹುಳುಗಳನ್ನು ಹೇಗೆ ತಡೆಗಟ್ಟಬೇಕು ಎಂಬುದನ್ನು ತಿಳಿಸುತ್ತೇವೆ ನೋಡಿ ನಾವು ತಿಳಿಸುವಂತಹ ಈ ವಿಧಾನವನ್ನು ನೀವು ಬಳಕೆ ಮಾಡಿದರೆ ಖಂಡಿತವಾಗಿಯೂ ಕೂಡ ನಿಮ್ಮ ಮನೆಯಲ್ಲಿ ಇರುವಂತಹ ದವಸ ಧಾನ್ಯಗಳಿಗೆ ವರ್ಷವಾದರೂ ಕೂಡ ಹುಳುಗಳು ಬೀಳುವುದಿಲ್ಲ ಅಷ್ಟು ಪ್ರಯೋಜನಕಾರಿ ಮತ್ತು ಪರಿಣಾಮಕಾರಿ ಔಷಧಿ ಇದು.

ಹಿಂದಿನ ಕಾಲದಲ್ಲಿ ವರ್ಷಾನುಗಟ್ಟಲೆ ದವಸ ಧಾನ್ಯಗಳನ್ನು ಸಂಗ್ರಹಣೆ ಮಾಡಿ ಇಡುತ್ತಿದ್ದರು ಇವುಗಳಿಗೆ ಯಾವುದೇ ರೀತಿಯಾದಂತಹ ಹುಳುಗಳು ಬೀಳುತ್ತಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಅಂದರೆ ಅವರು ಸಂಗ್ರಹಣೆ ಮಾಡಿ ಇಡುತ್ತಿದ್ದಂತಹ ವಿಧಾನ ಹಾಗಾಗಿ ಇಂದು ಆ ವಿಧಾನ ಯಾವುದು ಮತ್ತು ಆ ವಿಧಾನವನ್ನು ಹೇಗೆ ಪರಿಪಾಲನೆ ಮಾಡಬೇಕು ಎಂಬುದನ್ನು ತಿಳಿಸುತ್ತೇವೆ. ಮೊದಲಿಗೆ ಈ ಒಂದು ಮನೆ ಮದ್ದನ್ನು ತಯಾರಿ ಮಾಡುವುದಕ್ಕೆ ನಿಮಗೆ ಬೇಕಾಗುವಂತಹ ಪದಾರ್ಥ ಬೇವಿನ ಎಲೆ ಎರಡನೆಯದಾಗಿ ತುಳಸಿ ಮೂರನೆಯದಾಗಿ ಬಿಲ್ವಪತ್ರದ ಎಲೆ ಈ ಮೂರು ಎಲೆಗಳನ್ನು ತೆಗೆದುಕೊಂಡು ಬಂದು ನೆರಳಿನಲ್ಲಿ ಚೆನ್ನಾಗಿ ಒಣಗಿಸಬೇಕು ತದನಂತರ ಮಿಕ್ಸಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಿ ಮೂರು ಕೂಡ ಸಮ ಪ್ರಮಾಣದಲ್ಲಿ ಇರಲಿ.

ಈಗ ಈ ಪೌಡರ್ ಅನ್ನು ಒಂದು ಬಟ್ಟಲಿಗೆ ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ ದೋಸೆ ಹಿಟ್ಟಿನ ಅದಕ್ಕೆ ಇದನ್ನು ಕಲಸಿಕೊಳ್ಳಬೇಕು. ತದನಂತರ ಇವುಗಳನ್ನು ಕಾಳುಗಳಿಗೆ ಹಾಕಿ ಲೇಪನ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದನ್ನು ನೆರಳಿನಲ್ಲಿ ಒಣಗಿಸಿ ಯಾವುದಾದರೂ ಒಂದು ಡಬ್ಬದಲ್ಲಿ ಹಾಕಿ ಸಂಗ್ರಹಣೆ ಮಾಡಿಕೊಳ್ಳಿ. ಈ ರೀತಿ ಇಡುವುದರಿಂದ ಕೇವಲ ತಿಂಗಳಲ್ಲ ವರ್ಷಾನುಗಟ್ಟಲೆ ಆದರೂ ಕೂಡ ಹುಳುಗಳು ಇಂತಹ ಕಾಳುಗಳಿಗೆ ಬೀಳುವುದಿಲ್ಲ. ಇದು ಬಹಳನೇ ಪ್ರಯೋಜನಕಾರಿ ಹಿಂದಿನ ಕಾಲದಲ್ಲೆಲ್ಲರೂ ಕೂಡ ಇದೇ ರೀತಿಯಾದಂತಹ ಪದ್ಧತಿಯನ್ನು ಅನುಸರಣೆ ಮಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ಎಷ್ಟೇ ದವಸ ಧಾನ್ಯ ಸಂಗ್ರಹಣೆ ಮಾಡಿದರು ಕೂಡ ಅಲ್ಲಿ ಹುಳುಗಳು ಬೀಳುತ್ತಿರಲಿಲ್ಲ.

Leave a Reply

Your email address will not be published. Required fields are marked *