ಇನ್ಮುಂದೆ ನಿಮ್ ಆಟ ನಡೆಯೊಲ್ಲ ಪೋಲಿಸ್ ಕ್ಯಾಮೆರಾ ಹೊಸ ನಿಯಮಗಳು ..ಏನಾಗಿದೆ ನೋಡಿ...! - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಟ್ರಾಫಿಕ್ ಪೊಲೀಸ್ ಕ್ಯಾಮೆರಾ ರಹಸ್ಯ ಇನ್ನು ಮುಂದೆ ನೊಮ್ಮ ಆಟ ನಡೆಯಲ್ಲ.ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರದ್ದೆ ಒಂದು ದೊಡ್ಡ ತಲೆನೋವಾಗಿದೆ ಅಷ್ಟೇ ಅಲ್ಲದೆ ಸಾರ್ವಜನಿಕರದ್ದು ಕೂಡ ಅಷ್ಟೇ ತಪ್ಪು ಇರುತ್ತದೆ. ಪೊಲೀಸರೆಲ್ಲರೂ ಕಳ್ಳರಾಗಿರುವುದಿಲ್ಲ ಸಾರ್ವಜನಿಕರೆಲ್ಲರೂ ಕೂಡ ಸತ್ಯದ ಹಾದಿಯನ್ನೇ ಸಾಗಿಸುವುದಿಲ್ಲ ಎಂಬುದು ನಿಮಗೆ ತಿಳಿದೇ ಇದೆ. ಹೌದು ರಸ್ತೆ ಸಂಚಾರವನ್ನು ಹಾಗೂ ರಸ್ತೆಯ ನಿಯಮಗಳನ್ನು ಪಾಲನೆ ಮಾಡಬೇಕು ಅಂತ ಎಷ್ಟೋ ವಿಧವಾದಂತಹ ನಿಯಮಗಳನ್ನು ತಂದರು ಕೂಡ ಅವುಗಳನ್ನು ಸಾರ್ವಜನಿಕರು, ಪಾಲನೆ ಮಾಡುವುದಿಲ್ಲ. ಇನ್ನು ಕೆಲವು ಸಾರ್ವಜನಿಕರು ಎಲ್ಲ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಿದರು ಕೂಡ ಕೆಲವು ಪೊಲೀಸರು ಲಂಚವನ್ನು ತೆಗೆದುಕೊಳ್ಳುವ ದೃಷ್ಟಿಯಿಂದ ಏನಾದರೂ ಒಂದು ನೆಪ ಒಡ್ಡಿ ಅವರಿಂದ ಹಣವನ್ನು ವಸೂಲಿ ಮಾಡುತ್ತಾರೆ ಇವುಗಳಿಂದ ನಗರ ಪ್ರದೇಶದಲ್ಲಿ ವಾಸ ಮಾಡುವಂತಹ ಜನರು ತುಂಬಾನೇ ಬೇಸರ ಪಟ್ಟುಕೊಂಡಿದ್ದಾರೆ.

ಹಾಗಾಗಿ ಟ್ರಾಫಿಕ್ ಪೊಲೀಸರಿಗೆ ಈಗ ಹೊಸದೊಂದು ನಿಯಮವನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ರೂಲ್ಸ್ ತಂದಿದೆ ಇನ್ನು ಮುಂದೆ ನೀವು ಟ್ರಾಫಿಕ್ ಪೊಲೀಸರ ಮುಂದೆ ಹೆಚ್ಚು ಮಾತನಾಡಬೇಕಾದ ಅಗತ್ಯವು ಇಲ್ಲ. ಹಾಗೆಯೇ ಟ್ರಾಫಿಕ್ ಪೊಲೀಸರು ಕೂಡ ನಿಮ್ಮ ಮೇಲೆ ಅನಗತ್ಯವಾದ ಕಠಿಣ ಕ್ರಮವನ್ನು ಕೂಡ ಕೈಗೊಳ್ಳುವುದಿಲ್ಲ ಈಗ ಎಲ್ಲವೂ ಕೂಡ ಡಿಜಿಟಲ್ ನಿಮಗೆ ತಿಳಿದೇ ಇದೆ. ಯಾವುದೇ ಒಂದು ಆರೋಪ ಪ್ರತ್ಯಾರೋಪ ಮಾಡಬೇಕಾದರೂ ಕೂಡ ಅದಕ್ಕೆ ಸಾಕ್ಷಿ ಎಂಬುದು ಇರಲೇಬೇಕು ಸಾಕ್ಷಿ ಇದ್ದರೆ ಮಾತ್ರ ಅದಕ್ಕೆ ತಕ್ಕ ನ್ಯಾಯ ದೊರೆಯುತ್ತದೆ. ಹಾಗಾಗಿ ಮೊದಲಲ್ಲ ಟ್ರಾಫಿಕ್ ಪೊಲೀಸರು ಲಂಚ ವಸೂಲಿ ಮಾಡುವುದು ಎಲ್ಲಾ ಡಾಕ್ಯುಮೆಂಟ್ಸ್ ಇದ್ದರೂ ಕೂಡ ಸರಿಯಾಗಿಲ್ಲ ಅಂತ ಹೇಳಿ ಏನಾದರೂ ನೆಪ ಹುಡುಕಿ ಹಣ ಕಸಿದುಕೊಳ್ಳುತ್ತಿದ್ದರು. ಸಾರ್ವಜನಿಕರು ಕೂಡ ತಮ್ಮ ಬಳಿ ಏನೂ ಇಲ್ಲದೆ ಇದ್ದರೂ ಕೂಡ ಪೊಲೀಸರಿಗೆ ಅವಾಜ್ ಹಾಕಿ ಓಡಿ ಹೋಗುವಂತಹ ಘಟನೆಗಳು ನಡೆಯುತ್ತಿದ್ದವು.

ಇವುಗಳೆಲ್ಲವನ್ನು ಕೂಡ ತಪ್ಪಿಸುವ ಸಲುವಾಗಿ ಇದೀಗ ಟ್ರಾಫಿಕ್ ಪೊಲೀಸರಿಗೆ ಕ್ಯಾಮೆರಾ ಒಂದನ್ನು ಫಿಕ್ಸ್ ಮಾಡಿದರೆ ತಮ್ಮ ಶರ್ಟ್ ನಲ್ಲಿ ಈ ಕ್ಯಾಮೆರಾ ಫಿಕ್ಸ್ ಆಗಿರುತ್ತದೆ. ಟ್ರಾಫಿಕ್ ಪೊಲೀಸರು ರಸ್ತೆಯಲ್ಲಿ ನಿಂತುಕೊಂಡಾಗ ಸುತ್ತಮುತ್ತಲು ಓಡಾಡುವಂತಹ ವಾಹನಗಳ ಎಲ್ಲಾ ಮಾಹಿತಿಗಳು ಕೂಡ ಇಲ್ಲಿ ಸಂಗ್ರಹವಾಗುತ್ತದೆ. ಪೊಲೀಸರು ಮಾತನಾಡುವುದು ಮತ್ತು ಸಾರ್ವಜನಿಕರ ಸಂವಾದ ನಡೆಸುವುದು ಎಲ್ಲವೂ ಕೂಡ ಈ ಕ್ಯಾಮೆರಾದಲ್ಲಿ ರೆಕಾರ್ಡಾಗಿರುತ್ತದೆ. ಏನಾದರೂ ಹೆಚ್ಚು ಕಮ್ಮಿ ಮಾತನಾಡಿದರೆ ಪೊಲೀಸ್ ಆಗಿರಬಹುದು ಅಥವಾ ಸಾರ್ವಜನಿಕರು ಆಗಿರಬಹುದು ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

Leave a Reply

Your email address will not be published. Required fields are marked *