ಈ ಬಾರಿಯ ಬಿಗ್ ಬಾಸ್ ಬಗ್ಗೆ ಜನಾಭಿಪ್ರಾಯ ಏನಿದೆ ಗೊತ್ತಾ? ಅದರಲ್ಲೂ ಕೆಲವು ಕಂಟೆಸ್ಟ್ಮೆಂಟ್ ಗಳ ಆಯ್ಕೆ ಬಗ್ಗೆ ಏನನ್ನುತ್ತಿದ್ದಾರೆ ಗೊತ್ತಾ?ಬಿಗ್ ಬಾಸ್ ಇದಂತೂ ಅದ್ಭುತವಾದ ರಿಯಾಲಿಟಿ ಶೋ ಯಾಕೆಂದರೆ ಬೇರೆ ಬೇರೆ ಕ್ಷೇತ್ರಗಳಿಂದ ಬಂದ ಬೇರೆ ಬೇರೆ ವ್ಯಕ್ತಿತ್ವದ ಹಲವು ಸೆಲೆಬ್ರಿಟಿಗಳು ಒಂದೇ ಮನೆಯಲ್ಲಿ ಕೂಡಿಕೊಂಡು ನೂರು ದಿನಗಳವರೆಗೆ ಇರಬೇಕಾದ ಈ ಆಟ ಆಡುವವರಿಗೆ ಎಷ್ಟು ಕುತೂಹಲ ಕೊಡುತ್ತದೆ ನೋಡುಗರಿಗೂ ಅಷ್ಟೇ ಮಜಾ ಕೊಡುತ್ತದೆ. ಅಲ್ಲದೆ ಇಲ್ಲಿನ ಪ್ರತಿಯೊಬ್ಬ ಕಂಟೆಸ್ಟೆಂಟ್ಗಳ ಆಟ ಪಾಠ ನೋವು ನಲಿವು ಟಾಸ್ಕ್ ಇವೆಲ್ಲದರಿಂದ ಹೊರಗಡೆ ಇರುವವರೆಗೂ ಕೂಡ ಒಂದು ಪಾಠ ಇದ್ದೇ ಇರುತ್ತದೆ. ಹಾಗಾಗಿ ಎಲ್ಲರೂ ಬಹಳ ಇಷ್ಟ ಪಟ್ಟು ಈ ಶೋ ನೋಡುತ್ತಾರೆ. ಆದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಕನ್ನಡದಲ್ಲಿ ಬಿಗ್ ಬಾಸ್ ಬರುತ್ತಿದೆ. ಮೊದಲು ಓ ಟಿ ಟಿ ಯಲ್ಲಿ ಆರು ವಾರಗಳ ಕಾಲ ಪ್ರಸಾರವಾಗಿ ಈ ಶೋ ಅದರಲ್ಲಿ ಸೆಲೆಕ್ಟ್ ಆಗುವ ಕೆಲವೊಂದು ಸ್ಪರ್ಧಿಗಳು ಕಿರುತೆರೆಯಲ್ಲಿ ಪ್ರಸಾಗುವ ಬಿಗ್ ಬಾಸ್ ಅಲ್ಲೂ ಕೂಡ ಇರಲಿಲಿದ್ದಾರಂತೆ.

ನೆನ್ನೆ ಅಷ್ಟೇ ಬಿಗ್ ಬಾಸ್ ಶೋ ಓಟಿಟಿಯಲ್ಲಿ ಶುರು ಆಗಿದೆ. ಇದಕ್ಕೆ ಜನರ ರೆಸ್ಪಾನ್ಸ್ ಈ ರೀತಿ ಇದೆ. ಹಲವು ಜನರು ಈ ಬಾರಿ ಓಟಿಟಿಯಲ್ಲಿ ಇರುವುದರಿಂದ ನಮಗೆ 24*7 ನೋಡಲು ಸಮಯ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಒಂದೂವರೆ ಗಂಟೆ ಅವಧಿಯ ಬಿಗ್ ಬಾಸ್ ಎಲ್ಲರನ್ನೂ ತಲುಪುತ್ತಿತ್ತು ಆದರೆ ಓ ಟಿ ಟಿ ಯಲ್ಲಿ ಎಲ್ಲರಿಗೂ ನೋಡಲು ಆಗುವುದಿಲ್ಲ ಎನ್ನುತ್ತಿದ್ದಾರೆ. ಅಲ್ಲದೆ ಕಂಟೆಸ್ಟೆಂಟ್ಗಳ ಆಯ್ಕೆಯ ವಿಚಾರವಾಗಿ ಎಲ್ಲರೂ ಹೇಳುತ್ತಿರುವುದು ಒಂದೇ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ತನ್ನ ವೈರಲ್ ಆದ ವಿಡಿಯೋ ಮೂಲಕ ಗುರುತಿಸಿಕೊಳ್ಳುವ ತ್ತಿರುವ ಸೋನು ಗೌಡ ಈ ಬಾರಿ ಬಿಗ್ ಬಾಸ್ ಅಲ್ಲಿ ಭಾಗವಹಿಸಬಾರದಿತ್ತು.

ಅವರಿಗೆ ಅಲ್ಲಿ ಭಾಗವಹಿಸುವ ಯಾವ ಅರ್ಹತೆಯು ಇಲ್ಲ, ಆದರೂ ಕೂಡ ಬಿಗ್ ಬಾಸ್ ಯಾಕೆ ಅವರನ್ನೇ ಸೆಲೆಕ್ಟ್ ಮಾಡಿದೆ ಹಾಗಾದರೆ ಕನ್ನಡದಲ್ಲಿ ಯಾರೂ ಕೂಡ ಸೆಲೆಬ್ರಿಟಿಗಳೆ ಇಲ್ಲವಾ? ಎಷ್ಟೋ ಜನ ಕವಿಗಳು ಹಳೆ ಆರ್ಟಿಸ್ಟ್ ಗಳು ಸಮಾಜಮುಖಿ ಕೆಲಸ ಮಾಡುತ್ತಿರುವವರು ಇದ್ದಾರೆ.
ಎಲ್ಲರನ್ನು ಬಿಟ್ಟು ಸೋನು ಗೌಡ ಅವರಿಗೆ ಅವಕಾಶ ಕೊಟ್ಟು ಜನರಿಗೆ ಏನು ಸಂದೇಶ ಕೊಡುತ್ತಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ ಮತ್ತು ಕೆಲವರು ಆರ್ಯವರ್ಧನ್ ಗುರೂಜಿ ಬಗ್ಗೆ ಕೂಡ ಇದೆ ಅಭಿಪ್ರಾಯ ಹೊಂದಿದ್ದಾರೆ ಗುರೂಜಿ ಎಂದರೆ ಒಂದು ಭಕ್ತಿ ಇದೆ ಈಗಾಗಲೇ ಬ್ರಹ್ಮಾಂಡ ಗುರೂಜಿ ಈ ಕಾಂಪಿಟೇಶನ್ ಅಲ್ಲಿ ಭಾಗವಹಿಸಿದ್ದಾರೆ ನಮಗೆ ಗುರೂಜಿಗಳು ಭಾಗವಹಿಸುವುದು ಇಷ್ಟ ಇಲ್ಲ ಎಂದು ಕೂಡ ಕೆಲವರು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *