ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ಗಳಾಗಿ ಮನೆ ಒಳಗೆ ಹೋಗಿರುವ ಅಭ್ಯರ್ಥಿಗಳ ಹುಟ್ಟೂರು ಮತ್ತು ಅವರ ವ್ಯಕ್ತಿ ಏನು ಗೊತ್ತಾ?ಈ ಬಾರಿ ಬಿಗ್ ಬಾಸ್ ಸ್ವಲ್ಪ ವಿಭಿನ್ನತೆಯೊಂದಿಗೆ ಶುರುವಾಗಿದೆ. ಮೊದಲು ಓ ಟಿ ಟಿ ಯಲ್ಲಿ ಪ್ರಸಾರವಾಗುತ್ತಿರುವ ಆರು ವಾರಗಳ ಮಿನಿ ಬಿಗ್ ಬಾಸ್ ಮೂಲಕ 9ನೇ ಆವೃತ್ತಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಈಗ ಮನೆ ಒಳಗೆ 16 ಕಂಟೆಸ್ಟೆಂಟ್ಗಳು ಕಾಲಿಟ್ಟಿದ್ದಾರೆ ಅವರುಗಳ ಹೆಸರು ಮತ್ತು ಅವರ ಹುಟ್ಟೂರು ಯಾವುದು ಹಾಗೂ ಅವರು ಯಾವ ಯಾವ ಕ್ಷೇತ್ರದಿಂದ ಸೆಲೆಕ್ಟ್ ಆಗಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಪೂರ್ತಿಯಾಗಿ ಓದಿ. ರೂಪೇಶ್ ಶೆಟ್ಟಿ ಅವರು ಮೂಲತಃ ತುಳುನಾಡಿನವರಾಗಿದ್ದು, ಮಂಗಳೂರು ಹಾಗೂ ಕಾಸರಗೋಡಿನ ನಡುವೆ ಇರುವ ಉಪ್ಪಳ ಗ್ರಾಮದವರು ಇವರು ವೃತ್ತಿಯಲ್ಲಿ ತುಳು ಭಾಷೆಯ ನಟನಾಗಿದ್ದಾರೆ. ಆರ್ಯವರ್ಧನ್ ಅವರು ವೃತ್ತಿಯಲ್ಲಿ ಸಂಖ್ಯಾಶಾಸ್ತ್ರಜ್ಞರಾಗಿದ್ದು, ಹಲವು ಟಿವಿ ಚಾನೆಲ್ ಗಳ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲತಃ ಹಾಸನದವರು ಎಂದು ಹೇಳಿಕೊಳ್ಳುವ ಇವರು ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಅರ್ಜುನ್ ರಮೇಶ್ ಅವರು ಒಬ್ಬ ಕಲಾವಿದನಾಗಿದ್ದು ಕನ್ನಡದ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಅಲ್ಲದೇ ಇವರು ರಾಜಕಾರಣದಲ್ಲೂ ಕೂಡ ಸಕ್ರಿಯರಾಗಿದ್ದಾರೆ, ಪುರಸಭೆ ಸದಸ್ಯನಾಗಿ ಇವರು ಗುರುತಿಸಿ ಕೊಂಡಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಯಶ್ವಂತ್ ಬೋಪಣ್ಣ ಅವರು ಕೊಡಗಿನ ಕುವರನಾಗಿದ್ದು, ಮಡಿಕೇರಿಯ ಈ ಹುಡುಗ ಮಾಡಲ್ ಹಾಗೂ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಮಡಿಕೇರಿ ಹುಟ್ಟೂರು ಆಗಿದ್ದರೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸ್ಪೂರ್ತಿ ಗೌಡ ಅವರು ನಟಿಯಾಗಿದ್ದಾರೆ ಹಾಗೂ ಕೆಲವರು ರಿಯಾಲಿಟಿ ಶೋ ಅಲ್ಲಿ ಕಾಣಿಸಿಕೊಂಡಿದ್ದಾರೆ, ಇವರು ಮೂಲತಃ ಬೆಂಗಳೂರಿನವರು. ರೀಲ್ಸ್ ವಿಡಿಯೋ ಹಾಗೂ ಟಿಕ್ ಟಾಕ್ ಇಂದ ಫೇಮಸ್ ಆಗಿರುವ ಸೋನು ಗೌಡ ಅವರು ಬೆಂಗಳೂರಿನವರು. ಉದಯ ಸೂರ್ಯ ಅಲಿಯಾಸ್ ವಿವೇಕ್ ಕಿರುತೆರೆಯ ನಟ ಹಾಗೂ ಉದ್ಯಮಿಯೂ ಆಗಿರುವ ಇವರು ಪಂಜಾಬಿನವರು.

ಸಾನಿಯಾ ಅಯ್ಯರ್ ನಟಿ ಹಾಗೂ ಡ್ಯಾನ್ಸರ್ ಇವರು ಬೆಂಗಳೂರಿನವರು. ಲೋಕೇಶ್ ಕುಮಾರ್ ಕಾಮಿಡಿ ನಟ ಮತ್ತು ಚಿತ್ರಕಾರ ಇವರು ಸಹ ಬೆಂಗಳೂರಿನವರು. ಅಕ್ಷತಾ ಕುಕ್ಕಿ ಅವರು ಕಿರುತರ ನಟಿ ಮೂಲತಃ ಉತ್ತರ ಕನ್ನಡದವರು. ರಾಕೇಶ್ ಅಡಿಗ ಕನ್ನಡ ಚಿತ್ರರಂಗದ ನಟ ಮತ್ತು ಕಥೆಗಾರ ಇವರು ಸಹ ಬೆಂಗಳೂರಿನವರು. ಸೋಮಣ್ಣ ಮಾಚಿಮಾಡ ನ್ಯೂಸ್ ನಿರೂಪಕ ಹಾಗೂ ನಟ ಇವರು ಮೈಸೂರಿನವರು. ಕಿರಣ್ ಕೆ ಯೋಗೇಶ್ವರ್ ಮಾಡಲ್ ಆಗಿರುವ ಇವರು ಮೂಲತಃ ಕೊಡಗಿನವರಾಗಿದ್ದು ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಚೈತ್ರ ಹಳ್ಳಿಕೇರಿ ಅವರು ಧಾರವಾಡದವರಾಗಿದ್ದು ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ಜಯಶ್ರೀ ಆರಾಧ್ಯ ಅವರು ಬೆಂಗಳೂರಿನವರಾಗಿದ್ದು ವೃತ್ತಿಯಲ್ಲಿ ನಟಿಯಾಗಿದ್ದಾರೆ.

Leave a Reply

Your email address will not be published. Required fields are marked *