ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ಅರ್ಹತಾ ವಿದ್ಯಾರ್ಥಿಗಳಿಗೆ ಪರಿವರ್ತನ ಸ್ಕಾಲರ್ಷಿಪ್ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಬಡ ಕುಟುಂಬದ ಅರ್ಹತಾ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಉಪಯುಕ್ತವಾಗುವ ಹಾಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಮಹತ್ವದ ಸ್ಕಾಲರ್ ಶಿಪ್ ಯೋಜನೆಯೊಂದನ್ನು ಜಾರಿಗೊಳಿಸಿದೆ. ಪರಿವರ್ತನ್ ECS ವಿದ್ಯಾರ್ಥಿವೇತನ ಎನ್ನುವ ಹೆಸರಿನಲ್ಲಿ ಈ ಯೋಜನೆಯನ್ನು ಕೈಗೊಂಡಿದ್ದು ಇದಕ್ಕೆ ಬೇಕಾದ ಅರ್ಹತಾ ಮಾನದಂಡಗಳನ್ನು ತಿಳಿಸಿ 31 ಆಗಸ್ಟ್ 2022 ಕೊನೆಯ ದಿನಾಂಕವನ್ನು ನಿಗಧಿ ಪಡಿಸಿದೆ.ಭಾರತೀಯ ನಾಗರೀಕರಾಗಿದ್ದು ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 1-12 ನೇ ತರಗತಿ, ಡಿಪ್ಲೋಮ,ಪದವಿಪೂರ್ವ ಅಥವಾ ಸ್ನಾತಕೋತ್ತರ ಪದವಿ ಹಂತದವರಾಗಿರಬಹುದು.ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇದ್ದು ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಕನಿಷ್ಠ 55% ಅಂಕಗಳನ್ನು ಗಳಿಸಿರಬೇಕು.

ಹೆಚ್ಚಾಗಿ ಕಳೆದ ಮೂರು ವರ್ಷಗಳಿಂದ ಅಥವಾ ಅದಕ್ಕಿಂತ ಅಧಿಕ ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ನೀಡಲಾಗಿದ್ದು ಅಪ್ಲಿಕೇಶನ್ ಮೋಡ್ ಆನ್ಲೈನ್ ಆಗಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.ಅರ್ಜಿಯನ್ನು ಆನ್ಲೈನ್ ನಲ್ಲಿ ಮಾತ್ರವೆ ಸಲ್ಲಿಸಲು ಅವಕಾಶವಿದ್ದು ಅರ್ಜಿ ಸಲ್ಲಿಸಲು ಪ್ರತ್ಯೇಕ ವೆಬ್ಸೈಟ್ ಒಂದನ್ನು ನೀಡಲಾಗಿದೆ. ಈ ವೆಬ್ಸೈಟ್ ವಿವಿಧ ಕೆಟಗರಿಗಳನ್ನು ಹೊಂದಿದ್ದು 1-6 ನೇ ತರಗತಿ ವಿದ್ಯಾರ್ಥಿಗಳು ಸುಮಾರು 15 ಸಾವಿರ ರೂಪಾಯಿಗಳ ತನಕ ವಿದ್ಯಾರ್ಥಿ ವೇತನವನ್ನು, 7-12ನೇ ತರಗತಿ ವಿದ್ಯಾರ್ಥಿಗಳು 18 ಸಾವಿರ ತನಕವಿದ್ಯಾರ್ಥಿವೇತನವನ್ನು ಪಡೆಯಬಹುದಾಗಿದೆ. ಡಿಪ್ಲೋಮ ವಿದ್ಯಾಭ್ಯಾಸಕ್ಕಾಗಿ 20 ಸಾವಿರ, ಜನರಲ್ UG ಕೋರ್ಸ್ ಗಳಿಗಾಗಿ 30 ಸಾವಿರ, ಪ್ರೊಪೆಸನಲ್ UG ಕೋರ್ಸ್ ಗಳಿಗೆ 50 ಸಾವಿರ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಹಾಗೆಯೇ ಜನರಲ್ PG ಕೋರ್ಸ್ ಗೆ 35 ಸಾವಿರ, ಪ್ರೊಪೆಸನಲ್ PG ಕೋರ್ಸ್ ಗೆ 75 ಸಾವಿರ ರೂಗಳನ್ನು ಬ್ಯಾಂಕ್ ವತಿಯಿಂದ ನೀಡಲಾಗುತ್ತದೆ.ಈ ಎಲ್ಲಾ ಕೆಟಗರಿಗಳಿಗೂ ಬೇಕಾಗುವ ದಾಖಲೆಗಳೆಂದರೆ ಪಾಸ್ಪೋರ್ಟ್ ಸೈಜ್ ಫೋಟೋಸ್, ಆಧಾರ್ ಕಾರ್ಡ್, ಹಿಂದಿನ ತರಗತಿಯ ಅಂಕ ಪಟ್ಟಿ, ದಾಖಲಾತಿಯ ಪತ್ರ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ, ಆದಾಯ ಪ್ರಮಾಣ ಪತ್ರದ ಸ್ಕ್ಯಾನಿಂಗ್ ಕಾಪಿಗಳನ್ನು ನೀಡಬೇಕಾಗಿದ್ದು 31 ಆಗಸ್ಟ್ 2022 ರ ಒಳಗೆ ಈ ಎಚ್ ಡಿ ಎಫ್ ಸಿ ಬ್ಯಾಂಕ್ ನಾ ಪರಿವರ್ತನ್ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಲಿಂಕ್ ಅನ್ನು ತೆರೆಯಿರಿ.

Leave a Reply

Your email address will not be published. Required fields are marked *